Advertisement

ಇಂಗ್ಲಿಷ್‌ ಪದಕತೆ: ತಿರುಗು Vert

10:07 AM Mar 14, 2020 | mahesh |

ಇಂಗ್ಲಿಷ್‌ನಲ್ಲಿ ಅನೇಕ ಪದಗಳಿಗೆ ಲ್ಯಾಟಿನ್‌ ಭಾಷೆಯ ಪದಗಳೇ ಮೂಲ. Verto ಎಂಬ ಪದವೂ ಲ್ಯಾಟಿನ್‌ ಮೂಲದ್ದು. ಎಂದರೆ ಅದರ ಅರ್ಥ ತಿರುಗು. ಅಥವಾ turn. ಹಾಗಾಗಿಯೇ ಮನಸ್ಸನ್ನು ಒಳಮುಖವಾಗಿ ತಿರುಗಿಸಿದರೆ ಅಂತಹವರಿಗೆ introvert ಎನ್ನುತ್ತಾರೆ. ಹೊರಮುಖವಾಗಿ (outward) ಯೋಚಿಸುವವರನ್ನು extrovert ಎನ್ನುತ್ತಾರೆ.

Advertisement

ambi ಎಂದರೆ ಎರಡೂ ಕಡೆ ಎಂದರ್ಥ. both the sides. ಒಳಮುಖ ಮತ್ತು ಹೊರಮುಖವಾಗಿ ಯೋಚಿಸುವವರನ್ನು ಏನೆನ್ನುತ್ತಾರೆ ಎಂದು ಗುರುತಿಸುವುದು ಸುಲಭವಾಯಿತಲ್ಲ. they are just called as ambivert. ambidextrous ಎಂಬ ಒಂದು ದೊಡ್ಡ ಪದವಿದೆ. ಎರಡೂ ಕೈಗಳನ್ನು ಸಮರ್ಥವಾಗಿ ಬಳಸುವುದು ಯಾರಿಗೆ ಸಾಧ್ಯವೋ ಅಂತಹವರಿಗೆ ಈ ಪದವನ್ನು ಬಳಸುತ್ತಾರೆ.

ವೇದವಿದ್ವಾಂಸರಾಗಿದ್ದ ಸುಧಾಕರ ಚತುರ್ವೇದಿ ಅವರು ಎರಡೂ ಕೈಗಳಲ್ಲಿ ಸಮಾನ ವೇಗದಿಂದ ಬರೆಯಬಲ್ಲವರಾಗಿದ್ದರಂತೆ. ಅಂತಹ ಕೌಶಲ ಇರುವವರಿಗೆ ಈ ಪದವನ್ನು ಅನ್ವಯಿಸಬಹುದು. dextrous ಎಂದರೆ ಕೌಶಲಯುತ. ಲ್ಯಾಟಿನ್‌ನಲ್ಲಿ dexter ಎಂದರೆ ಬಲಗೈ ಎಂದರ್ಥ. ambidextrous ವ್ಯಕ್ತಿಗೆ ಎರಡೂ ಕೈಗಳು ಬಲಗೈ ಇದ್ದಂತೆ.

left (ಎಡ) ಕೈಯಲ್ಲಿ ಕೆಲಸ ಮಾಡುವುದು ಅಮಂಗಳಕರ (sinister) ಎಂಬ ಭಾವನೆ ಬಹಳ ಇತ್ತೀಚೆಗಿನ ದಶಕದವರೆಗೂ ಇತ್ತು. left ಎಂದರೆ ಲ್ಯಾಟಿನ್‌ನಲ್ಲಿ ಸ್ವಲ್ಪ ಎಡವಟ್ಟು (akward) ಅಥವಾ ಸ್ವಲ್ಪ ಸರಿಯಿಲ್ಲ ಎಂಬುದಕ್ಕೆ ಒಂದು ಸಮಾನಾರ್ಥಕ ಪದ ಎಂದೇ ಪರಿಗಣಿಸುತ್ತಿದ್ದರು. ಎಡಗೈಯಲ್ಲಿ ಕೆಲಸ ಮಾಡುವುದು ಎಂದರೆ ಅಪಾಯ, ಏನೋ ಅಪಶಕುನ ಕಾದಿದೆ ಎಂದೇ ಜನರು ಅರ್ಥಮಾಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಮಕ್ಕಳಿಗೆ, ಕುಂತರೆ ನಿಂತರೆ, ಬಲಗೈ ಹಿಡಿ, ಬಲಗೈಲಿ ತಕೋ, ಬಲಗೈಲಿ ಬರಿ ಎಂದು ಪಾಲಕರು ಒತ್ತಾಯಿಸುವುದು ಅಲ್ಲವೆ? ಹೀಗೆ ಎಡಗೈಯನ್ನೇ ಪ್ರಧಾನವಾಗಿ ಬಳಸುವುದು ಆನುವಂಶೀಯವೂ ಹೌದು.

ಬಹಳ ನಾಜೂಕಿನ ಸುಂದರ ಭಾಷೆ ಎಂದು ಗುರುತಿಸಿಕೊಂಡ ಫ್ರೆಂಚ್‌ ಭಾಷೆಯಲ್ಲಿಯೂ ಎಡ ಎಂಬುದಕ್ಕೆ gauche (Gosh) ಎನ್ನುತ್ತಾರೆ. ನಯನಾಜೂಕು ಇಲ್ಲದೆ ಯಡವಟ್ಟು ಕೆಲಸ ಮಾಡುವವ ಎಂಬ ಅರ್ಥವೇ ಇದೆ. ಬಲಗೈಲಿ ಕೆಲಸ ಮಾಡುವವರಿಗೆ (right handed) droit ಎನ್ನುತ್ತಾರೆ. ಜಾಣ್ಮೆಯಿಂದ, ಕೌಶಲಯುತವಾಗಿ ಕೆಲಸ ಮಾಡುವವರಿಗೆ adroit, ಕೌಶಲಕ್ಕೆ adroitness ಎನ್ನುತ್ತಾರೆ. ಇದರ ವಿರೋಧ ಪದ gaucherie.

Advertisement

ಸ್ವಯಂಪ್ರಭಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next