ರಟ್ಟಿಹಳ್ಳಿ: ನಮ್ಮ ತಾಯಿ ನಾಡಿನಲ್ಲಿ ಎಲ್ಲ ರೀತಿಯ ಅರಿವು ಉಂಟಾಗಲು ಮಾತೃಭಾಷೆ ಅವಶ್ಯಕವಾಗಿದೆ. ಅದರಂತೆ ವ್ಯವಹಾರಿಕ ಜ್ಞಾನಕ್ಕಾಗಿ ಆಂಗ್ಲ ಭಾಷೆ ಅಗತ್ಯವಾಗಿದೆ ಎಂದು ಹಿರೇಕೆರೂರ-ರಟ್ಟಿಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಲಿಂಗಪ್ಪ ಹೇಳಿದರು.
ರಟ್ಟಿàಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭಗೊಳ್ಳಲಿರುವ ನೂತನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಮಂಜೂರಾತಿ ಆದೇಶ ಪತ್ರದ ಪ್ರತಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದರು.
ಮಾಸೂರು ಗ್ರಾಮದಲ್ಲಿ ಈ ಶಾಲೆಯೂ ಈಗಾಗಲೇ ಆರಂಭಗೊಂಡಿದ್ದು, ಎಲ್‌ಕೆಜಿ, ಯುಕೆಜಿ ಆರಂಭವಾಗಿದೆ. ಸ್ವಂತ ವಾಹನದ ಮೂಲಕ ಉತ್ತಮ ಶಿಕ್ಷಣ ಕಲಿಕೆಗೆ ಬುನಾದಿ ಹಾಕಿದ್ದು, ಪ್ರಸಕ್ತ ಸಾಲಿನಿಂದ ಒಂದನೇ ತರಗತಿಗೆ ಆದೇಶ ಬಂದಿದೆ. ಈ ಹಿಂದೆ ಉತ್ತಮ ಶಿಕ್ಷಣ ವ್ಯವಸ್ಥೆ ಮೂಲಕ ಒಳ್ಳೆಯ ಹೆಸರು ಮಾಡಿರುವ ಸರ್ಕಾರಿ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದೇ ನಮ್ಮ ಆಶಯ ಎಂದರು.
ಗ್ರಾಪಂ ಅಧ್ಯಕ್ಷೆ ಕಾವ್ಯ ಹಿತ್ತಲಮನಿ ಮಾತನಾಡಿ, ಸರ್ವಜ್ಞನ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನಂತರದಲ್ಲಿ ಸಾಮಾಜಿಕ, ಇತರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಆಂಗ್ಲ ಭಾಷೆ ಅಗತ್ಯವಾಗಿದೆ. ಇದನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿಯ ಮಲ್ಲೇಶಪ್ಪ ಗುತ್ತೆಣ್ಣನವರ ಕ್ಷೇತ್ರ ಶಿಕ್ಷಣಾ ಧಿಕಾರಿಗಳನ್ನು ಸನ್ಮಾನಿಸಿದರು.
ಈ ವೇಳೆ ಗ್ರಾಪಂ ಪಿಡಿಒ ರಂಗಪ್ಪ ವಾಲ್ಮೀಕಿ, ಶಿವನಗೌಡ ಹಳ್ಳಪ್ಪಗೌಡ್ರ, ಸಮನ್ವಯ ಅಧಿ ಕಾರಿ ಜಗದೀಶ ಬಳಿಗಾರ, ಸಿಆರ್‌ಸಿ ರಾಜು ಕಡೂರು, ಸಿಆರ್‌ಪಿ ಎಲ್. ಕೆ.ಮನೋಚಾರಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬಡಿಗೇರ, ಶಾಲೆಯ ಮುಖ್ಯ ಶಿಕ್ಷಕ ಎನ್.ಎಸ್.ಹುಲ್ಲತ್ತಿ, ಜ್ಯೋತಿರೆಡ್ಡಿ, ಗಿರೀಶ ಪಾಟೀಲ, ಕೆಂಚಪ್ಪ ಚಲವಾದಿ, ರಾಜು ಚೆನ್ನಗಿರಿ, ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಸ್ವಾಗತಿಸಿ, ಜ್ಯೋತಿ ವಂದಿಸಿದರು.