ಹುಣಸೂರು: ತಾಲೂಕಿನ ಹೋಬಳಿ ಕೇಂದ್ರವಾದ ಗಾವಡಗೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರಸಕ್ತ ಸಾಲಿನಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಕೆಜಿ, 1, 6, 8ನೇ ತರಗತಿ ಆರಂಭಗೊಳ್ಳಲಿದೆ.
ಸಕಲ ಸೌಲಭ್ಯ: ಜವಾಹರ್ ನವೋದಯ ಮಾದರಿ (ವಸತಿ ರಹಿತ)ಯಲ್ಲಿ ತಾಲೂಕಿಗೊಂದರಂತೆ ಆರಂಭಗೊಂಡಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿಯಿಂದ 12ನೇ ತರಗತಿ(ಪಿಯುಸಿ)ವರೆಗೆ ಇದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ, ಕಿರಿಯ, ಹಿರಿಯ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಒಂದೇ ಆಡಳಿತಕ್ಕೆ ಒಳ±ಡಿಸಲಾಗಿದೆ. ಎಲ್ಕೆಜಿಯಿಂದ ಎಂಟನೇ ತರಗತಿವರೆಗೆ ಶೈಕ್ಷಣಿಕ ಮುಖ್ಯಸ್ಥರಾಗಿ ಉಪ ಪ್ರಾಚಾರ್ಯರು ಹಾಗೂ ಎಲ್ಕೆಜಿಯಿಂದ 12ನೇ ತರಗತಿವರೆಗೂ ಪ್ರಾಚಾರ್ಯರು ಸಂಪೂರ್ಣ ಆಡಳಿತ ಜವಾಬ್ದಾರಿ ನಿರ್ವಹಿಸುವರು.
1.98 ಕೋಟಿ ರೂ.ಬಿಡುಗಡೆ: ನವೋದಯ ಶಾಲೆಯಲ್ಲಿ ಸಿಗುವ ಸಕಲ ಸೌಲಭ್ಯ ಹಾಗೂ ಇಂಗ್ಲಿಷ್ ಶಿಕ್ಷಣ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ ಕಲ್ಪಿಸಲು ಈಗಾಗಲೇ 11 ಲಕ್ಷ ರೂ., ಅನುದಾನ ಬಂದಿದೆ. 6 ಲಕ್ಷರೂ., ಕಟ್ಟಡ ನಿರ್ವಹಣೆಗೆ, ಉಳಿದಂತೆ ಕಂಪ್ಯೂಟರ್ ಲ್ಯಾಬ್, ಸಿ.ಸಿ.ಕ್ಯಾಮರಾ, ಶುದ್ಧ ನೀರಿನ ಘಟಕ ಅಳವಡಿಸಲಾಗುತ್ತಿದೆ. 2 ಲ್ಯಾಬ್ ಸೇರಿ 10 ಕೊಠಡಿಗಳ ನಿರ್ಮಾಣಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿ ವತಿಯಿಂದ 1.98 ಕೋಟಿ ರೂ., ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದ ನೀತಿ ಆಯೋಗ ನೀಡುವ ಅಟಲ್ ಟ್ರೀಕಿಂಗ್ ಸುಸಜ್ಜಿತ ವಿಜ್ಞಾನ ಪ್ರಯೋಗಾಲಕ್ಕಾಗಿ 50 ಲಕ್ಷರೂ., ಅನುದಾನ ಮಂಜೂರು ಮಾಡಿದೆ. ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶನಾಲಯದಿಂದ ನಾಗರಿಕೇತರ ಕಾಮಗಾರಿಗೆ 45 ಲಕ್ಷರೂ., ಮಂಜೂರಾಗಿದೆ. 2 ಎಕರೆಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು.
1500 ಮಕ್ಕಳ ಗುರಿ: ಇದೀಗ 1018 ಮಂದಿ ವ್ಯಾಸಂಗ ಮಾಡು ತ್ತಿದ್ದು 1500 ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಾಚಾರ್ಯ ರಾಮೇ ಗೌಡ ತಿಳಿಸಿದ್ದಾರೆ.
Advertisement
ವರದಾನ: ಈ ಶಾಲೆಯಲ್ಲಿ ಎಲ್ ಕೆಜಿಯಿಂದ 12ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲೇ ಪಾಠ ನಡೆಯಲಿದೆ. ಅಲ್ಲದೆ ಡಿಜಿಟಲ್ ಲೈಬ್ರರಿ ಸೇರಿ ಕೆರಿಯರ್ ಗೈಡೆನ್ಸ್, ವ್ಯಕ್ತಿತ್ವ ವಿಕಸನ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳಿಗೆ, ವಿಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯವಿರು ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿ ನೀಡಲು ಮುಂದಾಗಿರುವುದು ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ.
Related Articles
ನುರಿತ ಶಿಕ್ಷಕರ ನೇಮಕ:
ಈಗಾಗಲೇ ಪ್ರಥಮ ಪಿಯುಸಿಗೆ 175, ಎಲ್ಕೆಜಿಗೆ 15, ಒಂದನೇ ತರಗತಿಗೆ 10 ಮಕ್ಕಳು ದಾಖಲಾಗಿದ್ದಾರೆ. ಶಾಲೆಯ ಸಾಧನೆ ಗಮನಿಸಿ, ಇಲ್ಲಿಗೆ ಹುಣಸೂರು ತಾಲೂಕಲ್ಲದೆ ಇತರೆಡೆ ಗಳಿಂದಲೂ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಕೆಜಿ ಸೇರಿದಂತೆ ಎಲ್ಲಾ ವಿಭಾಗ ಗಳಿಗೂ ನುರಿತ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗು ವುದು. ಹೀಗಾಗಿ ಗಾವಡಗೆರೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲೂ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಾಚಾರ್ಯರಾದ ರಾಮೇಗೌಡ ತಿಳಿಸಿದ್ದಾರೆ.
● ಸಂಪತ್‌ಕುಮಾರ್
Advertisement