ಬೆಳ್ಳಾರೆ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಆಯ್ಕೆ ಯಾಗಿರುವ ಬೆಳ್ಳಾರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆಂಗ್ಲ ಭಾಷಾ ಸಂವಹನ ಕೌಶಲ್ಯ ತರಬೇತಿ ಪಡೆಯುತ್ತಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಪಾಲಕರ ಕೊರಗು ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದರ ನಡುವೆಯೂ ಇಲ್ಲಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಇಂಗ್ಲಿಷ್ ಭಾಷಾ ಸಂಹವನ ತರಗತಿ ಪಡೆಯುತ್ತಿರುವುದು ವಿಶೇಷ.
ಬೆಳ್ಳಾರೆಯಲ್ಲಿ ಪಬ್ಲಿಕ್ ಸ್ಕೂಲ್ ಯೋಜನೆಯಡಿ ಅಭಿವೃದ್ಧಿ ಚಟುವಟಿಕೆಗಳು ನಿರಂತರವಾಗಿ ನಡೆ ಯುತ್ತಿದೆ. ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಕಾಲೇಜು ಹೀಗೆ ಮೂರು ವಿದ್ಯಾಸಂಸ್ಥೆಗಳನ್ನು ಒಳ ಗೊಂಡಿರುವ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯ ಸ್ಥಾನವನ್ನು ಅಲಂಕರಿಸಿದೆ. ಯೋಜನೆ ಯಡಿ ಕಟ್ಟಡ ಕಾಮಗಾರಿ ಹಾಗೂ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದು, ಯೋಜನೆಯ ಅನುದಾನದ ಒಂದು ಭಾಗವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಟ್ಟು ಅಂಗ್ಲ ಭಾಷಾ ಸಂವಹನ ಕೌಶಲವನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸಮಾನವಾಗಿ ಇಲ್ಲಿನ ಸರಕಾರಿ ಶಾಲೆಯ ಮಕ್ಕಳಿಗೂ ಕನ್ನಡದೊಂದಿಗೆ ಆಂಗ್ಲ ಭಾಷೆಯ ಕಲಿಕೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇದರ ಉದ್ದೇಶ.
144 ವಿದ್ಯಾರ್ಥಿಗಳು
ಪ್ರಾಥಮಿಕ ಶಾಲೆಯ 4ರಿಂದ 6ನೇ ತರಗತಿವರೆಗಿನ 70 ವಿದ್ಯಾರ್ಥಿಗಳು, 7ರಿಂದ 9ನೇ ತರಗತಿವರೆಗಿನ 74 ವಿದ್ಯಾರ್ಥಿಗಳು ಆಂಗ್ಲ ಭಾಷಾ ಶಿಕ್ಷಣದ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ದಿನ ಬೆಳಗ್ಗಿನಿಂದ ಮಧ್ಯಾಹ್ನದವರಗೆ ತರಗತಿಗಳು ನಡೆಯುತ್ತಿದ್ದು, ಇಬ್ಬರು ವಿಶೇಷ ಶಿಕ್ಷಕಿಯರನ್ನು ನಿಯೋಜಿಸ ಲಾಗಿದೆ. ಆಂಗ್ಲಭಾಷಾ ವ್ಯಾಕರಣ, ಸಾಮಾನ್ಯ ಇಂಗ್ಲಿಷ್, ಮಾತುಗಾರಿಕೆ, ಗುಂಪು ಚಟುವಟಿಕೆ, ಆಂಗ್ಲಾ ಭಾಷಾ ಅಭಿನಯದ ನಾಟಕ, ಗುಂಪು ಚರ್ಚೆ ಗಳನ್ನೊಂಡ ಸಂಹವನ ಕೌಶಲವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲಭಾಷಾ ಕಲಿಕೆಯ ತರಗತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೆಳೆಯುವ ವಿನೂತನ ಪ್ರಯತ್ನವನ್ನು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡುತ್ತಿದೆ.
ರಜಾ ಸಮಯದಲ್ಲೂ ತರಗತಿ
ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನದಡಿ ಸರಕಾರಿ ಶಾಲಾ ಮಕ್ಕಳಿಗೂ ರಜೆಯ ಸದುಪಯೋಗಕ್ಕಾಗಿ ಆಂಗ್ಲ ಭಾಷೆಯ ಸಂವಹನ ತರಗತಿ ಆರಂಭಿಸಿದ್ದೇವೆ. ಪೋಷಕರ ಹಾಗೂ ವಿದ್ಯಾರ್ಥಿಗಳ ಉತ್ತಮ ಸ್ಪಂದನೆ ದೊರೆತರೆ ದಸರಾ ರಜಾ ಸಮಯದಲ್ಲೂ ತರಗತಿಗಳನ್ನು ನಡೆಸಲಾಗುವುದು.
– ಉಮಾಕುಮಾರಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ
ಬಹಳ ಪ್ರಯೋಜನ
ವಿವಿಧ ಚಟುವಟಿಕೆಗಳೊಂದಿಗೆ ತರಗತಿಗಳನ್ನು ನಡೆಸುವುದರಿಂದ ನಮಗೆ ತುಂಬಾ ಪ್ರಯೋಜನ ವಾಗಿದೆ. ಸರಕಾರಿ ಶಾಲೆಯಲ್ಲೂ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಭಾಷೆಯ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿನಿ
– ಚಂದನಲಕ್ಷ್ಮೀ ನೆಟ್ಟಾರು,
-ಉಮೇಶ್ ಮಣಿಕ್ಕಾರ