Advertisement
ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಇದೊಂದು ಅತ್ಯಂತ ಸರಳ ಭಾಷೆ. ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಾಸವೇ ಆಧಾರ. ಎಲ್ಲ ವಿಷಯಗಳಂತೆ ಇದನ್ನು ಸಮರ್ಥವಾಗಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಇಲ್ಲಿ ಪದಗಳನ್ನು ಜೋಡಿಸಿ ಬರೆಯುವುದು ಒಂದು ಟ್ರಿಕ್ ಆಗಿರುತ್ತದೆ.
Related Articles
Advertisement
3 ಅಂಕಗಳ 2 ವಿವರಣಾತ್ಮಕ ಪ್ರಶ್ನೆಗಳಿರುತ್ತವೆ. ಎಕ್ಸ್‌ಟ್ರಾಕ್ಟ್ಗಳಿಗಾಗಿ 3×4 = 12 ಅಂಕಗಳನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಭಾಷಣೆ ಉಳ್ಳ ರಿಯೋ ಎನ್ ಮೇಡಿಯೋ, ಎ ಗರ್ಲ್ ಬೈದ ಟ್ರ್ಯಾಕ್ಸ್ ಮತ್ತು ಹೀರೋ ಪಾಠಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಯಾವ ಪಾಠದಿಂದ ಮತ್ತು ಯಾರ ಮಾತುಗಳೆಂಬುವುದರ ಅರಿವಿರಬೇಕು. ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದರೆ ಸಾಕಾಗುತ್ತದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕ್ವಾಲಿಟಿ ಆಫ್ ಮರ್ಸಿ ಒಂದನ್ನು ಆರಿಸಿ ಕೊಂಡರೆ ಸಾಕು (ಅಂಕಗಳು 4). ಪ್ರೊಫೈಲ್ ರೈಟಿಂಗ್‌ನಲ್ಲಿ ಕೊಟ್ಟಂತಹ ವಿಷಯವನ್ನು ವಿವರಣಾತ್ಮಕವಾಗಿ ಬರೆಯಬೇಕು(ಅಂಕಗಳು 3). ಕಥೆಯನ್ನು ಬರೆಯಲು ಪಂಚತಂತ್ರದ ಕಥೆಗಳನ್ನು ಓದಿಕೊಂಡಿರಬೇಕು (ಅಂಕಗಳು 3). ಪ್ರಬಂಧಕ್ಕಾಗಿ ಕೋವಿಡ್‌ನಂತಹ ಪ್ರಸ್ತುತ ವಿದ್ಯಮಾನಗಳನ್ನು ಆರಿಸಿರುತ್ತಾರೆ (ಅಂಕಗಳು 4). ನೀಡಿದ ಚಿತ್ರದ ವಿವರಣೆ ಅತ್ಯಂತ ಸುಲಭ (ಅಂಕ 3).
ಸಾರಾಂಶಗಳಲ್ಲಿ ಗ್ರ್ಯಾಂಡ್ ಮಾ ಕ್ಲೈಮ್ಸ್ ದ ಟ್ರೀ ಅಧ್ಯಾಯದಲ್ಲಿ ನಿರೀಕ್ಷಿತ ಪ್ರಶ್ನೆ ಬರುತ್ತದೆ (ಅಂಕ 4). ಪತ್ರಲೇಖನದಲ್ಲಿ ವೈಯಕ್ತಿಕ ಪತ್ರವನ್ನು ಆರಿಸಿಕೊಳ್ಳುವುದು ಸೂಕ್ತ. ಏಕೆಂದರೆ ಇವುಗಳನ್ನು ಬರೆಯುವುದು ಸುಲಭ (ಅಂಕಗಳು 5). ಪ್ಯಾಸೇಜ್ ಓದಿ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಸರಳ. (ಅಂಕಗಳು 2 x2 = 4 ).ವ್ಯಾಕರಣಕ್ಕೆ 16 ಅಂಕ ಟೆನ್ಸಸ್ ಆ್ಯಂಡ್ ಕರೆಕ್ಟ್ ಫಾರ್ಮ್ ಆಫ್ ವರ್ಬ್, ಪ್ರಪೋಸಿಶನ್ಸ್, ಕಂಜೆಂಕ್ಷನ್ಸ್, ಆರ್ಟಿಕಲ್ಸ್, ಕ್ವಶ್ಚನ್ ಟ್ಯಾಗ್ಸ್, ಮೋಡಲ್ಸ್ -ಲ್ಯಾಂಗ್ವೆಜ್ ಪಂಕ್ಷನ್ಸ್ , ಆ್ಯಕ್ಟಿವ್ ಮತ್ತು ಪ್ಯಾಸಿವ್ ವಾçಸ್, ಡಿಗ್ರೀಸ್ ಆಫ್ ಕಂಪ್ಯಾರಿಸನ್, ರಿಪೋರ್ಟೆಡ್ ಸ್ಪೀಚ್, ಇಫ್ ಕ್ಲಾಸ್ ಆಫ್ ಕಂಡೀಶನ್, ಇನ್ಫಿನಿಟಿವ್, ಪ್ರೇಸಲ್ ವಬ್ಸ್ಐ ಡೆಂಟಿಫಯಿಂಗ್, ಪಾರ್ಟ್ಸ್ ಆಫ್ ಸ್ಪೀಚ್, ಯೂಸಿಂಗ್ ವರ್ಡ್ಸ್ ಇನ್ ಸೆಂಟೆನ್ಸಸ್ ಆ್ಯಸ್ ನೌನ್ ಆ್ಯಂಡ್ ವಬ್ಸ್ì ಪಂಕುcವೇಶನ್, ಆಕ್ಸಿಲರೀಸ್ (ಸಹಾಯಕ ಕ್ರಿಯಾಪದಗಳು) ಯೂಸ್ ಆಫ್ ಲಿಂಕರ್, ಕೊಲೋಕೇಶನ್, ಸಲೇಬಿಫಿಕೇಶನ್, ವನ್ ವರ್ಡ್ ಆನ್ಸರ್, ಹೊಮೋಫೋನ್ಸ್, ಪ್ರಿಫಿಕ್ಸ್ ಮತ್ತು ಸಫಿಕ್ಸಸ್, ಜಂಬಲ್ಡ್ ಲೆಟರ್ ಆ್ಯಂಡ್
ವರ್ಡ್ಸ್ ಓಪಸಿಟ್ಸ್. ಹೀಗೆ ಪಾಠಕ್ಕೆ 20 ಅಂಕಗಳು, ಪದ್ಯಕ್ಕೆ ಮತ್ತು ಸಾರಾಂಶಕ್ಕೆ 16 ಅಂಕಗಳು, ಪೂರಕ ಸಾಹಿತ್ಯಕ್ಕೆ 4 ಅಂಕಗಳು, ಗೃಹಿಕೆಗೆ 24 ಅಂಕಗಳು, ವ್ಯಾಕರಣಕ್ಕೆ 16 ಅಂಕಗಳು ಸೇರಿ 80 ಅಂಕಗಳನ್ನು ನೀಡಲಾಗಿದೆ. ಇಂಗ್ಲಿಷ್‌ನಲ್ಲಿ ಓದಿದ ಪ್ರತೀ ಅಂಶಗಳನ್ನು ಬರೆದು ಕಲಿಯಬೇಕು. ಇಲ್ಲವಾದರೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಕಂಠಪಾಠದಿಂದ ಪೂರ್ಣ ಪ್ರಮಾಣದಲ್ಲಿ ತಪ್ಪಿಲ್ಲದೇ ಬರೆಯಲು ಸಾಧ್ಯವಿಲ್ಲ. ಹಾಗೇನಾದರೂ ನಿರ್ಲಕ್ಷ್ಯ ತೋರಿದರೆ ಬರವಣಿಗೆಯಲ್ಲಿ ದೋಷ ಉಂಟಾಗಿ ವಿಷಯಾಂತರವಾಗಬಹುದು. ಮನೋಸ್ಥಿತಿ, ಜಾಗೃತ ಮನೋಭಾವನೆ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲಾಗಲಿದೆ.
– ಸವಿತಾ ದೇವಿ