Advertisement

ಸಂಸತ್ತಿನಲ್ಲಿ ವ್ಯವಹಾರಕ್ಕೆ ಇಂಗ್ಲಿಷ್‌, ಹಿಂದಿ ಮುಖ್ಯ: ಜಯಪ್ರಕಾಶ್‌ ಹೆಗ್ಡೆ

01:05 AM Mar 21, 2024 | Team Udayavani |

ಕೋಟ/ಉಡುಪಿ: ಸಂಸದ ನಾದವನು ಸಂಸತ್‌ನಲ್ಲಿ ಯಾವುದೇ ಭಾಷೆಯಲ್ಲಿ ಮಾತನಾಡಬಹುದು ಮತ್ತು ಅದು ದೇಶದ ಎಲ್ಲ ಭಾಷೆಗೆ ಅನುವಾದಗೊಳ್ಳುತ್ತದೆ. ಆದರೆ ಕ್ಷೇತ್ರದ ಸಮಸ್ಯೆ ಸಮರ್ಪಕವಾಗಿ ತಲುಪಬೇಕಾದರೆ, ಹೊಸ ಯೋಜನೆ ಗಳನ್ನು ತರಲು ಸಂಸತ್‌ ಕಚೇರಿಯ ಅಧಿಕಾರಿಗಳು, ಸಚಿವರೊಂದಿಗೆ ಮಾತನಾಡಲು ಆಂಗ್ಲ ಮತ್ತು ಹಿಂದಿ ಭಾಷೆ ಅಗತ್ಯ. ಆ ಭಾಷೆಗಳ ಜ್ಞಾನ ಇರದ ಸಂಸದರು ಆಪ್ತ ಸಹಾಯಕರ ಮೂಲಕ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಅಸಾಧ್ಯ ಎಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತಗಳಲ್ಲಿ ಆಡಳಿತಾ ರೂಢ ಕಾಂಗ್ರೆಸ್‌ ಶಾಸಕರಿಲ್ಲ. ಹೀಗಾಗಿ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ, ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆಯಾಗುತ್ತಿದೆ. ನಾನು ಸಂಸದ ನಾಗಿ ಆಯ್ಕೆಯಾದರೆ ಲೋಕಸಭಾ ಕ್ಷೇತ್ರದ ಕೆಲಸಗಳನ್ನು ಮಾಡುವ ಜತೆಗೆ ಕೃಷಿ ಕಾಲೇಜು, ಉತ್ತಮ ಆಸ್ಪತ್ರೆ, ಕೈಗಾರಿಕಾ ವಲಯ ಸೇರಿದಂತೆ ರಾಜ್ಯ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವೆ ಎಂದರು.

ಯಾರ ಹೆಸರಿನಲ್ಲೂ
ಮತ ಕೇಳುವುದಿಲ್ಲ
ಉಡುಪಿಯಲ್ಲಿ ಮಾತನಾಡಿ, ಸ್ಥಳೀಯ ಸಮಸ್ಯೆಗಳು ಮುಖ್ಯ. ಅವು ಗಳ ಬಗ್ಗೆ ಚರ್ಚೆಯಾಗಬೇಕು. ನಾನು ಯಾವುದೇ ನಾಯಕರ ಹೆಸರಿನಲ್ಲಿ ಮತ ಕೇಳುವುದಿಲ್ಲ, ಸ್ಪರ್ಧಿಸಲು ಅವ ಕಾಶ ನೀಡಿದರೆ ನನ್ನ ಹೆಸರಿನಲ್ಲಿ ಮತ ಕೇಳುತ್ತೇನೆ ಎಂದರು.

ಹಾಲಾಡಿ ಜತೆಗೆ ಮಾತನಾಡುವೆ
ಕುಂದಾಪುರದಲ್ಲಿ ಪ್ರಭಾವಿಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೀರಾ ಎನ್ನುವ ಪ್ರಶ್ನೆಗೆ, ಶ್ರೀನಿವಾಸ ಶೆಟ್ಟಿಯವರ ಬಗ್ಗೆ ಹಾಗೂ ಸ್ವತ್ಛವಾದ ಅವರ ರಾಜಕೀಯ ಜೀವನದ ಬಗ್ಗೆ ನನಗೆ ವಿಶೇಷವಾದ ಗೌರವವಿದೆ. ಪ್ರಸ್ತುತ ಅವರು ಪಕ್ಷ ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ಭೇಟಿಯಾಗಿ ಸಹಕಾರ ಕೋರುವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next