Advertisement
ಮಕ್ಕಳು ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತ ನಾಡಬೇಕು ಎನ್ನುವ ಬಯಕೆ ಹೆತ್ತವರದು. ಇದೇ ಕಾರಣಕ್ಕೆ ಅನೇಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿ ಸಲು ಹಿಂದೆ ಸರಿಯುತ್ತಾರೆ. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಆಂಗ್ಲಭಾಷೆ ಕಲಿಸಲು ಸಶಕ್ತರಾಗಿದ್ದರೂ ಸಂವಹನ ಕೌಶಲ ತರಬೇತಿಯ ಕೊರತೆ ಇದೆ.
ಬ್ರಹ್ಮಾವರ ವಲಯದಲ್ಲಿ 93 ಸರಕಾರಿ ಪ್ರಾ. ಶಾಲೆಗಳಿದ್ದು, 25 ಶಾಲೆ ಗಳನ್ನು ಆಯ್ದು ಕೊಂಡು, ವರ್ಷವಿಡೀ ಇಂಗ್ಲಿಷ್ ಚಟುವಟಿಕೆ ನಡೆಸಲು ಬದ್ಧರಾಗಿರುವ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಯಿತು. 2021ರ ಎ. 3ರಿಂದ ಪ್ರತೀ ಶನಿವಾರ ಅಪರಾಹ್ನ ಬ್ರಹ್ಮಾವರದ ಬಿ.ಆರ್.ಸಿ. ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅತ್ಯುತ್ತಮ ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಸಂವಹನ ತಂತ್ರಗಳ ತರಬೇತಿ ನೀಡಲಾಯಿತು.
Related Articles
Advertisement
ವಿದ್ಯಾರ್ಥಿಗಳಿಗೆ ಅನುಷ್ಠಾನಆರಂಭದಲ್ಲಿ ಇದ್ದುದು ಶಾಲೆಗಳಲ್ಲಿ ನೇರ ತರಗತಿಯ ಮೂಲಕ ಮಕ್ಕಳಿಗೆ ಇಂಗ್ಲಿಷ್ ಸಂವಹನ ಕೌಶಲ ಹೆಚ್ಚಿಸುವ ಗುರಿ. ಕೋವಿಡ್ ಸಮಸ್ಯೆ ಎದುರಾದಾಗ ಜೂ. 15ರಿಂದ ಅದನ್ನು ಆನ್‌ಲೈನ್ ಆಗಿ ಮುಂದುವರಿಸಲಾಯಿತು. ಪ್ರತೀ ದಿನ ಒಂದೆರಡು ತಾಸು ಇಂಗ್ಲಿಷ್ ತರಬೇತಿಗೆ ಮೀಸಲಿಟ್ಟಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದಾರೆ. ಹೆತ್ತವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಂತಹಂತವಾಗಿ ಎಲ್ಲ ಶಾಲೆಗಳಿಗೆ
ಬ್ರಹ್ಮಾವರ ವಲಯದ ಕೋಡಿ ಬೆಂಗ್ರೆ, ಚೇರ್ಕಾಡಿ, ಬಾಳುದ್ರು, ಮಿಯಾರ ಬೆಟ್ಟು, ಹಂಗಾರಕಟ್ಟೆ, ಕಾರ್ಕಡ, ಸಗ್ರಿ ನೋಳೆ, ಶಿರಿ ಯಾರ, ಪಡುಕರೆ-ಮಣೂರು, ಕೋಟತಟ್ಟು, ಕುಕ್ಕೆಹಳ್ಳಿ, ಸಾೖಬ್ರಕಟ್ಟೆ, ಹೊಸಾಳ, ಕೋಟ, ನುಕ್ಕೂರು, ಹೊಸಾಳ ಸೇರಿದಂತೆ ಒಟ್ಟು 25 ಪ್ರಾಥಮಿಕ ಶಾಲೆಗಳ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ಅನುಷ್ಠಾನಗೊಳಿಸಿದ್ದಾರೆ. ಕಾರ್ಯಕ್ರಮವನ್ನು ಉಳಿದ 68 ಶಾಲೆಗಳಿಗೂ ವಿಸ್ತರಿಸುವ ಇರಾದೆ ಕ್ಷೇತ್ರ ಶಿಕ್ಷಣ ಇಲಾಖೆಗಿದೆ. ನೇರ ತರಗತಿ ಆರಂಭವಾದ ಬಳಿಕ ವಾರದಲ್ಲಿ ಮೂರ್‍ನಾಲ್ಕು ಅವಧಿಗಳನ್ನು ಇದಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ. ಸರಕಾರಿ ಶಾಲೆಗಳ ಮಕ್ಕಳು ನಿರರ್ಗಳವಾಗಿ ಇಂಗ್ಲಿಷ್ ಸಂವಹನ ನಡೆಸಬೇಕು, ನಮ್ಮ ಮಕ್ಕಳಲ್ಲೂ ಆತ್ಮವಿಶ್ವಾಸ ಬೆಳೆಸಬೇಕು ಎಂದು ಯೋಜನೆ ಆರಂಭಿಸಿದೆವು. ಪ್ರಥಮ ಹಂತದ ತರಬೇತಿ ಮತ್ತು ಅನುಷ್ಠಾನ ಯಶಸ್ವಿಯಾಗಿ ನಡೆದಿದೆ.
– ಒ.ಆರ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಆಂಗ್ಲ ಸಂವಹನ ತರಗತಿ ಉತ್ತಮವಾಗಿ ನಡೆಯುತ್ತಿದೆ. ಶಿಕ್ಷಕರು ಹೇಳಿ ಕೊಡುವು ದನ್ನು ಮಕ್ಕಳು ಚೆನ್ನಾಗಿ ಗ್ರಹಿಸು ತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಲ್ಲೂ ಆಂಗ್ಲ ಮಾಧ್ಯಮಕ್ಕೆ ಸರಿಸಾಟಿಯಾದ ಗುಣಮಟ್ಟದ ಶಿಕ್ಷಣ ಪಡೆಯಲು ಇದು ಸಹಕಾರಿ.
– ಆಶಾ ಮಣಿಕಾಂತ್, ಕೋಡಿಬೆಂಗ್ರೆ, ವಿದ್ಯಾರ್ಥಿಯ ಹೆತ್ತವರು