Advertisement

England ಜಾಕ್‌ ಲೀಚ್‌ ಗಾಯಾಳು : ದ್ವಿತೀಯ ಟೆಸ್ಟ್‌ಗೆ ಅನುಮಾನ

12:24 AM Feb 01, 2024 | Team Udayavani |

ವಿಶಾಖಪಟ್ಟಣ: ಇಂಗ್ಲೆಂಡ್‌ನ‌ ಅನುಭವಿ ಸ್ಪಿನ್ನರ್‌ ಜಾಕ್‌ ಲೀಚ್‌ ಗಾಯಾಳಾಗಿದ್ದು, ಬುಧವಾರದ ಅಭ್ಯಾಸದಿಂದ ಹೊರಗುಳಿದಿದ್ದಾರೆ. ಇದರಿಂದ ಶುಕ್ರವಾರ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

Advertisement

ಹೈದರಾಬಾದ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಫೀಲ್ಡಿಂಗ್‌ ನಡೆಸುತ್ತಿದ್ದ ವೇಳೆ ಜಾಕ್‌ ಲೀಚ್‌ ಎಡ ಮೊಣಕಾಲಿನ ನೋವಿಗೆ ಸಿಲುಕಿದ್ದರು. ನೋವಿನಲ್ಲೇ ಆಡಿದ್ದರು. ಆದರೆ ಈ ನೋವು ಇನ್ನೂ ವಾಸಿಯಾಗಿಲ್ಲ. ತಂಡದ ಫಿಸಿಯೋ ಅವರೇ ಲೀಚ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಅವರು ಅಭ್ಯಾಸಕ್ಕೆ ಇಳಿಯಲಿಲ್ಲ. ಗುರುವಾರ ಅವರ ಪರಿಸ್ಥಿತಿಯನ್ನು ಗಮನಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ತಂಡದ ಆರಂಭಕಾರ ಜಾಕ್‌ ಕ್ರಾಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಶೀರ್‌ಗೆ ಅವಕಾಶ
ಒಂದು ವೇಳೆ ಜಾಕ್‌ ಲೀಚ್‌ ಆಡದೇ ಹೋದರೆ ಇವರ ಸ್ಥಾನದಲ್ಲಿ ಆಫ್ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಬೌಲಿಂಗ್‌ ದಾಳಿಗಿಳಿಯಲಿದ್ದಾರೆ. ವೀಸಾ ಸಿಗದ ಕಾರಣ ಬಶೀರ್‌ ವಿಳಂಬವಾಗಿ ಭಾರತಕ್ಕೆ ಆಗಮಿಸಿದ್ದರು. ಹೀಗಾಗಿ ಮೊದಲ ಟೆಸ್ಟ್‌ನಲ್ಲಿ ಆಡಲಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next