Advertisement

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

02:37 PM May 05, 2024 | Team Udayavani |

ಲಂಡನ್‌: ಕ್ರಿಕೆಟ್‌ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಂಗ್ಲೆಂಡ್‌ ಮಹಿಳಾ ತಂಡದ ಮುಖ್ಯ ತರಬೇತುದಾರ ಜಾನ್‌ ಲೆವಿಸ್‌ ಹೇಳಿದ್ದಾರೆ.

Advertisement

ಆಟಗಾರರನ್ನು ಆಯ್ಕೆ ಮಾಡುವಾಗ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದರಿಂದ ಹೆಚ್ಚಿನ ಅನುಕೂಲ ದೊರೆಯುತ್ತಿದೆ. ಪಂದ್ಯಗಳು ನಡೆಯುವ ಕ್ರೀಡಾಂಗಣ, ಎದುರಾಳಿ ತಂಡದ ಬಲಾಬಲಗಳನ್ನು ಲೆಕ್ಕ ಮಾಡಿ ಆ ಬಲಕ್ಕೆ ತಕ್ಕಂತೆ ಆಡುವಂತಹ ಆಟಗಾರರನ್ನು ಆಯ್ಕೆ ಮಾಡಬಹುದು ಎಂದು ಅವರು ಜಾನ್‌ ಹೇಳಿದ್ದಾರೆ.

ಕಳೆದ ವರ್ಷ ಮಹಿಳಾ ಐಪಿಎಲ್‌ ಪಂದ್ಯಾವಳಿಯ ವೇಳೆ ಯುಪಿ ವಾರಿಯರ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಈ ಎಐ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ ಜಾನ್‌ ಇದರ ಬಳಕೆಯನ್ನು ಆರಂಭಿಸಿದ್ದಾರೆ. ಎಐನ ಸಹಾಯದಿಂದ ಎದುರಾಳಿ ತಂಡಕ್ಕೆ ಸಮಾನವಾಗಿ ಹೋರಾಡಬಲ್ಲಂತಹ ತಂಡವನ್ನು ರಚನೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಇದೇ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಂಡು ಇಂಗ್ಲೆಂಡ್‌ನ‌ ರಗ್ಬಿ ಮತ್ತು ಫುಟ್‌ಬಾಲ್‌ ತಂಡವನ್ನು ಸಹ ಆಯ್ಕೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next