ಲಂಡನ್: ಮೊದಲ ಇನ್ನಿಂಗ್ಸ್‌ನಲ್ಲಿ 85 ರನ್ನಿಗೆ ಕುಸಿದು ತೀವ್ರ ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್, ಲಾರ್ಡ್ಸ್‌ಟೆಸ್ಟ್ ಪಂದ್ಯದಲ್ಲಿ ಎದುರಾಳಿ ಐರ್ಲೆಂಡನ್ನು 38 ರನ್ನಿಗೆ ಉಡಾಯಿಸಿ 143 ರನ್ನುಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಗೆಲುವಿಗೆ 182 ರನ್ ಗುರಿ ಪಡೆದ ಐರ್ಲೆಂಡ್ 15.4 ಓವರ್‌ಗಳಲ್ಲಿ 38 ರನ್ನಿಗೆ ಆಲೌಟ್ ಆಯಿತು. ಕಾಕತಾಳೀಯವೆಂದರೆ, 1955ರಲ್ಲಿ ನ್ಯೂಜಿಲ್ಯಾಂಡ್ ಟೆಸ್ಟ್ ಚರಿತ್ರೆಯ ಕನಿಷ್ಠ ಮೊತ್ತಕ್ಕೆ (26) ಆಲೌಟಾದ ಬಳಿಕ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. ಟೆಸ್ಟ್ ಕ್ರಿಕೆಟಿನ ಕನಿಷ್ಠ ಸ್ಕೋರ್ ಯಾದಿಯಲ್ಲಿ ಇದಕ್ಕೆ 7ನೇ ಸ್ಥಾನ.
ಕ್ರಿಸ್ ವೋಕ್ಸ್ (17ಕ್ಕೆ 6) ಮತ್ತು ಸ್ಟುವರ್ಟ್ ಬ್ರಾಡ್ (19ಕ್ಕೆ 4) ಇಬ್ಬರೇ ಸೇರಿಕೊಂಡು ಐರ್ಲೆಂಡ್ ಕತೆ ಮುಗಿಸಿದರು. ಎರಡಂಕೆಯ ಮೊತ್ತ ಗಳಿಸಿದ್ದು ಆರಂಭಕಾರ ಜೇಮ್ಸ್ ಮೆಕಲಮ್ ಮಾತ್ರ (11).
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-85 ಮತ್ತು 303. ಐರ್ಲೆಂಡ್-207 ಮತ್ತು 38.
ಪಂದ್ಯಶ್ರೇಷ್ಠ: ಜಾಕ್ ಲೀಚ್.