Advertisement

ಬಾಂಗ್ಲಾ ವಿರುದ್ಧ ಸೇಡಿನ ತವಕದಲ್ಲಿ ಇಂಗ್ಲೆಂಡ್‌

01:32 AM Jun 08, 2019 | Team Udayavani |

ಕಾರ್ಡಿಫ್: ಕೂಟದ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್‌ ದಿಢೀರ್‌ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಕಾರಣ, ಪಾಕಿಸ್ಥಾನ ವಿರುದ್ಧ ಅನುಭವಿಸಿದ ಸೋಲು. ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡ ಮಾರ್ಗನ್‌ ಪಡೆ ವಿಶ್ವಕಪ್‌ನಲ್ಲಿ ಮಾತ್ರ ಪಾಕ್‌ ವಿರುದ್ಧ ಸೋಲಿನ ಮಾರ್ಗ ಹಿಡಿದಿತ್ತು.

Advertisement

ಪಾಕ್‌ ಸರಿಯಾದ ಹೊತ್ತಿನಲ್ಲೇ ತಿರುಗಿ ಬಿದ್ದಿತ್ತು. ಹೀಗಾಗಿ ಶನಿವಾರ ಬಾಂಗ್ಲಾದೇಶವನ್ನು ಎದುರಿಸುವಾಗ ಆತಿಥೇಯರು ತೀರಾ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. 2015ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲುವ ಮೂಲಕವೇ ಇಂಗ್ಲೆಂಡ್‌ ಲೀಗ್‌ ಹಂತದಲ್ಲೇ ಕೂಟದಿಂದ ನಿರ್ಗಮಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಕೆಲಸವೂ ಆಗಬೇಕಿದೆ.

ಅಂದಿನ ಅಡಿಲೇಡ್‌ ಓವಲ್‌ ಪಂದ್ಯದಲ್ಲಿ ಮಹಮದುಲ್ಲ ಶತಕ ಸಾಹಸದಿಂದ (103) ಬಾಂಗ್ಲಾ 7 ವಿಕೆಟಿಗೆ 275 ರನ್‌ ಪೇರಿಸಿತ್ತು. ಜವಾಬಿತ್ತ ಇಂಗ್ಲೆಂಡ್‌ 260ಕ್ಕೆ ಆಲೌಟ್‌ ಆಗಿ 15 ರನ್ನುಗಳ ಸೋಲಿಗೆ ತುತ್ತಾಗಿತ್ತು.

ಅಪಾಯಕಾರಿ ಬಾಂಗ್ಲಾ...
ಸಾಕಷ್ಟು ಅನುಭವಿ ಆಟಗಾರರನ್ನು ಹೊಂದಿರುವ ಬಾಂಗ್ಲಾದೇಶ ಈಗಲೂ ಅಪಾಯಕಾರಿಯೇ. ತನ್ನ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾವನ್ನು ನೆಲಕ್ಕುರುಳಿಸಿದ್ದೇ ಇದಕ್ಕೆ ಸಾಕ್ಷಿ. ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ಸ್ವಲ್ಪದರಲ್ಲೇ ಗೆಲುವನ್ನು ತಪ್ಪಿಸಿಕೊಂಡಿತ್ತು.

ಎರಡೂ ತಂಡಗಳಿಗೆ ತನ್ನ ಬೌಲಿಂಗ್‌ ಬಿಸಿ ಮುಟ್ಟಿಸಿದ ಬಾಂಗ್ಲಾದೇಶ, ಆತಿಥೇಯರಿಗೂ ಇದರ ರುಚಿ ತೋರಿಸುವ ಯೋಜನೆಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಶಕಿಬ್‌ ಸತತ 2 ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.ಆದರೆ ಇಂಗ್ಲೆಂಡಿಗೆ ಒತ್ತಡವನ್ನು ಮೀರಿ ನಿಲ್ಲುವ ತಾಕತ್ತು ಖಂಡಿತ ಇದೆ.

Advertisement

ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ, ಮೊಹಮ್ಮದ್‌ ಮಿಥುನ್‌, ಮಹಮದುಲ್ಲ, ಮೊಸದ್ದೆಕ್‌ ಹೊಸೈನ್‌, ಮೆಹಿದಿ ಹಸನ್‌, ಮೊಹಮ್ಮದ್‌ ಸೈಫ‌ುದ್ದೀನ್‌, ಮಶ್ರಫೆ ಮೊರ್ತಜ (ನಾಯಕ), ಮುಸ್ತಫಿಜುರ್‌ ರಹಮಾನ್‌.

ಇಂಗ್ಲೆಂಡ್‌
ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಜಾಸ್‌ ಬಟ್ಲರ್‌, ಮೊಯಿನ್‌ ಅಲಿ, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಲಿಯಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋಫ‌Å ಆರ್ಚರ್‌.

Advertisement

Udayavani is now on Telegram. Click here to join our channel and stay updated with the latest news.

Next