Advertisement
ಇಲ್ಲಿನ ಎಲ್ಲ ಪಂದ್ಯಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆಯಲಿವೆ. 40 ವರ್ಷಗಳ ಬಳಿಕ ಇಂಗ್ಲೆಂಡ್-ಆಸ್ಟ್ರೇಲಿಯ ನಡುವಿನ ದ್ವಿಪಕ್ಷೀಯ ಏಕದಿನ ಸರಣಿಯ 3 ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಇತ್ತಂಡಗಳ ನಡುವಿನ 1979-80ರ ಸರಣಿಯ ಎಲ್ಲ ಪಂದ್ಯಗಳು ಮೆಲ್ಬರ್ನ್ ಅಂಗಳದಲ್ಲಿ ಏರ್ಪಟ್ಟಿದ್ದವು.
ಮೊದಲ ಸಲ ವಿಶ್ವಕಪ್ ಕಿರೀಟ ಏರಿಸಿಕೊಂಡಿರುವ ಇಂಗ್ಲೆಂಡ್ ಈ ಸರಣಿಯ ಫೇವರಿಟ್ ತಂಡವಾಗಿದೆ. ಇದಕ್ಕೆ ಕಾರಣ, ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದಿರುವುದು ಹಾಗೂ ಇದು ಮಾರ್ಗನ್ ಬಳಗದ ಪಾಲಿಗೆ ತವರಿನ ಸರಣಿ ಆಗಿರುವುದು. ಆಸೀಸ್ ಕಳಪೆ ಸಾಧನೆ
2019ರ ವಿಶ್ವಕಪ್ ಬಳಿಕ ಆಸ್ಟ್ರೇಲಿಯದ ಏಕದಿನ ಸಾಧನೆ ಅಷ್ಟೇನೂ ಉತ್ತಮ ಮಟ್ಟದಲ್ಲಿಲ್ಲ. ಆಡಿದ 7 ಪಂದ್ಯಗಳಲ್ಲಿ ಎರಡನ್ನಷ್ಟೇ ಗೆದ್ದಿದೆ. ಇಂಗ್ಲೆಂಡಿನ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಗಳೆರಡೂ ಅಮೋಘ ಫೈರ್‌ಪವರ್ ಹೊಂದಿವೆ ಎಂಬು ದಾಗಿ ಸ್ವತಃ ಆಸೀಸ್ ನಾಯಕ ಆರನ್ ಫಿಂಚ್ ಅವರೇ ಹೇಳಿದ್ದಾರೆ. ತಮಗೆ ಹೋಲಿಸಿದರೆ ಇಂಗ್ಲೆಂಡ್ ತಂಡ ಹೆಚ್ಚು ಅನುಭವಿಯೂ ಆಗಿದೆ ಎಂದಿದ್ದಾರೆ.