Advertisement

World Cup; ಸೋಲಿನೊಂದಿಗೆ ಹೊರಬಿದ್ದ ಪಾಕ್‌: ಇಂಗ್ಲೆಂಡ್‌ಗೆ ಗೆಲುವಿನ ವಿದಾಯ

10:31 PM Nov 11, 2023 | Team Udayavani |

ಕೋಲ್ಕತಾ: ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಸೊಗಸಾದ ಜಯದೊಂದಿಗೆ ವಿಶ್ವಕಪ್‌ ಪಂದ್ಯಾವಳಿಗೆ ವಿದಾಯ ಹೇಳಿದೆ. ಇನ್ನೊಂದೆಡೆ ಸಾಧ್ಯವೇ ಇಲ್ಲದ ಟಾರ್ಗೆಟ್‌ ಪಡೆದಿದ್ದ ಪಾಕಿಸ್ಥಾನ ದೊಡ್ಡದೊಂದು ಸೋಲು ಹೊತ್ತು ಕೂಟದಿಂದ ನಿರ್ಗಮಿಸಿತು. ಅರ್ಥಾತ್‌, ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಶನಿವಾರದ ಮುಖಾಮುಖೀಯಲ್ಲಿ ಇಂಗ್ಲೆಂಡ್‌ 93 ರನ್ನುಗಳ ಅಂತರದಿಂದ ಬಾಬರ್‌ ಪಡೆಯನ್ನು ಹಿಮ್ಮೆಟ್ಟಿಸಿತು.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 9 ವಿಕೆಟಿಗೆ 337 ರನ್‌ ಪೇರಿಸಿದರೆ, ಪಾಕಿಸ್ಥಾನ 43.3 ಓವರ್‌ಗಳಲ್ಲಿ 244ಕ್ಕೆ ಆಲೌಟ್‌ ಆಯಿತು. ಇದು ಆಂಗ್ಲರಿಗೆ ಒಲಿದ 3ನೇ ಗೆಲುವಾದರೆ, ಪಾಕ್‌ ಅನುಭವಿಸಿದ 5ನೇ ಸೋಲು. ಇದರೊಂದಿಗೆ ಇಂಗ್ಲೆಂಡ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಅರ್ಹತೆ ಸಂಪಾದಿಸಿತು.

ಚೇಸಿಂಗ್‌ ವೇಳೆ ಆರಂಭಿಕರನ್ನು 10 ರನ್‌ ಆಗುವಷ್ಟ ರಲ್ಲಿ ಕಳೆದುಕೊಂಡ ಪಾಕಿಸ್ಥಾನ, ಈ ಆಘಾತದಿಂದ ಚೇತರಿಸಿ ಕೊಳ್ಳಲೇ ಇಲ್ಲ. ಇಂಗ್ಲೆಂಡ್‌ ಸಾಂಫಿಕ ಬೌಲಿಂಗ್‌ ದಾಳಿಯ ಮೂಲಕ ಪಾಕ್‌ ಮೇಲೆರಗಿತು. ಎಲ್ಲ 5 ಬೌಲರ್‌ಗಳೂ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಆಘಾ ಸಲ್ಮಾನ್‌ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (51).

ಸತತ 2ನೇ 300 ರನ್‌
ಕೂಟದಿಂದ ಹೊರಬಿದ್ದ ಬಳಿಕ ಚಾಂಪಿಯನ್‌ ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಚಿಗುರಿದ್ದು ವಿಶೇಷ. ಸತತ 2 ಪಂದ್ಯಗಳಲ್ಲಿ ಅದು 300 ಪ್ಲಸ್‌ ರನ್‌ ಬಾರಿಸಿತು. ಇದಕ್ಕೂ ಮೊದಲು ನೆದರ್ಲೆಂಡ್ಸ್‌ ವಿರುದ್ಧ 9ಕ್ಕೆ 339 ರನ್‌ ಮಾಡಿತ್ತು. ಇಲ್ಲಿ 2 ರನ್‌ ಕಡಿಮೆ, ಅಷ್ಟೇ.

ಇಂಗ್ಲೆಂಡ್‌ನ‌ 340 ರನ್‌ ಗುರಿಯನ್ನು ಪಾಕಿಸ್ಥಾನ 6.4 ಓವರ್‌ಗಳಲ್ಲಿ, ಅರ್ಥಾತ್‌ 40 ಎಸೆತಗಳಲ್ಲಿ ಮೀರಿ ನಿಲ್ಲಬೇಕಿತ್ತು. ಈ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದರೂ ಗಳಿಸಲು ಸಾಧ್ಯವಿದ್ದುದು 240 ರನ್‌ ಮಾತ್ರ. ಮುಂದಿನದು 5ನೇ ಸ್ಥಾನ ಉಳಿಸಿಕೊಳ್ಳಬೇಕಾದ ಒತ್ತಡ. ಇದಕ್ಕೆ 188 ರನ್‌ ಗಳಿಸಬೇಕಿತ್ತು.

Advertisement

ಇಂಗ್ಲೆಂಡ್‌ನ‌ ಈ ಬೃಹತ್‌ ಮೊತ್ತಕ್ಕೆ ಮೂವರ ಅರ್ಧ ಶತಕ ಕಾರಣ. ಆರಂಭಕಾರ ಜಾನಿ ಬೇರ್‌ಸ್ಟೊ 59, ಜೋ ರೂಟ್‌ 60 ಹಾಗೂ ಬೆನ್‌ ಸ್ಟೋಕ್ಸ್‌ 84 ರನ್‌ ಬಾರಿಸಿದರು. 40ನೇ ಓವರ್‌ ಅಂತ್ಯಕ್ಕೆ ಇಂಗ್ಲೆಂಡ್‌ ಕೇವಲ 2 ವಿಕೆಟ್‌ ಕಳೆದುಕೊಂಡು 240 ರನ್‌ ಗಳಿಸಿತ್ತು. ಅಂತಿಮ 10 ಓವರ್‌ಗಳಲ್ಲಿ ಇದೇ ಲಯದಲ್ಲಿ ಸಾಗಲು ವಿಫ‌ಲವಾಯಿತು. ಇಲ್ಲಿ 97 ರನ್ನಿಗೆ 7 ವಿಕೆಟ್‌ ಉದುರಿತು.

ಡೇವಿಡ್‌ ಮಲಾನ್‌ (31) ಮತ್ತು ಜಾನಿ ಬೇರ್‌ಸ್ಟೊ (59) ಸೇರಿಕೊಂಡು ಉತ್ತಮ ಆರಂಭ ಒದಗಿಸಿದರು. 13.3 ಓವರ್‌ಗಳಲ್ಲಿ 82 ರನ್‌ ಒಟ್ಟುಗೂಡಿತು. ಮಲಾನ್‌ ಗಳಿಕೆ 31 ರನ್‌. 39 ಎಸೆತ ಎದುರಿಸಿದ ಅವರು 5 ಬೌಂಡರಿ ಬಾರಿಸಿದರು. ಇಫ್ತಿಕಾರ್‌ ಅಹ್ಮದ್‌ ಪಾಕ್‌ಗೆ ಮೊದಲ ಬ್ರೇಕ್‌ ಒದಗಿಸಿದರು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಡೇವಿಡ್‌ ಮಲಾನ್‌ ಸಿ ರಿಜ್ವಾನ್‌ ಬಿ ಇಫ್ತಿಕಾರ್‌ 31
ಜಾನಿ ಬೇರ್‌ಸ್ಟೊ ಸಿ ಸಲ್ಮಾನ್‌ ಬಿ ರವೂಫ್ 59
ಜೋ ರೂಟ್‌ ಸಿ ಶದಾಬ್‌ ಬಿ ಅಫ್ರಿದಿ 60
ಬೆನ್‌ ಸ್ಟೋಕ್ಸ್‌ ಬಿ ಅಫ್ರಿದಿ 84
ಜೋ ರೂಟ್‌ ರನೌಟ್‌ 27
ಹ್ಯಾರಿ ಬ್ರೂಕ್‌ ಸಿ ಅಫ್ರಿದಿ ಬಿ ರವೂಫ್ 30
ಮೊಯಿನ್‌ ಅಲಿ ಬಿ ರವೂಫ್ 8
ಕ್ರಿಸ್‌ ವೋಕ್ಸ್‌ ಔಟಾಗದೆ 4
ಡೇವಿಡ್‌ ವಿಲ್ಲಿ ಸಿ ಇಫ್ತಿಕಾರ್‌ ಬಿ ವಾಸಿಮ್‌ 15
ಗಸ್‌ ಅಟಿRನ್ಸನ್‌ ಬಿ ವಾಸಿಮ್‌ 0
ಆದಿಲ್‌ ರಶೀದ್‌ ಔಟಾಗದೆ 0
ಇತರ 19
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 337
ವಿಕೆಟ್‌ ಪತನ: 1-82, 2-108, 3-240, 4-257, 5-302, 6-306, 7-317, 8-336, 9-336.
ಬೌಲಿಂಗ್‌: ಶಾಹೀನ್‌ ಶಾ ಅಫ್ರಿದಿ 10-1-72-2
ಹ್ಯಾರಿಸ್‌ ರವೂಫ್ 10-0-64-3
ಇಫ್ತಿಕಾರ್‌ ಅಹ್ಮದ್‌ 7-0-38-1
ಮೊಹಮ್ಮದ್‌ ವಾಸಿಮ್‌ ಜೂ. 10-0-74-2
ಶದಾಬ್‌ ಖಾನ್‌ 10-0-57-0
ಆಘಾ ಸಲ್ಮಾನ್‌ 3-0-25-0

ಪಾಕಿಸ್ಥಾನ
ಅಬ್ದುಲ್ಲ ಶಫೀಕ್‌ ಎಲ್‌ಬಿಡಬ್ಲ್ಯು ವಿಲ್ಲಿ 0
ಫ‌ಖರ್‌ ಜಮಾನ್‌ ಸಿ ಸ್ಟೋಕ್ಸ್‌ ಬಿ ವಿಲ್ಲಿ 1
ಬಾಬರ್‌ ಆಜಂ ಸಿ ರಶೀದ್‌ ಬಿ ಅಟಿRನ್ಸನ್‌ 38
ಮೊಹಮ್ಮದ್‌ ರಿಜ್ವಾನ್‌ ಬಿ ಮೊಯಿನ್‌ 36
ಸೌದ್‌ ಶಕೀಲ್‌ ಬಿ ರಶೀದ್‌ 29
ಆಘಾ ಸಲ್ಮಾನ್‌ ಸಿ ಸ್ಟೋಕ್ಸ್‌ ಬಿ ವಿಲ್ಲಿ 51
ಇಫ್ತಿಕಾರ್‌ ಅಹ್ಮದ್‌ ಸಿ ಮಲಾನ್‌ ಬಿ ಅಲಿ 3
ಶದಾಬ್‌ ಖಾನ್‌ ಬಿ ರಶೀದ್‌ 4
ಶಾಹೀನ್‌ ಶಾ ಅಫ್ರಿದಿ ಎಲ್‌ಬಿಡಬ್ಲ್ಯು ಅಟಿRನ್ಸನ್‌ 25
ಮೊಹಮ್ಮದ್‌ ವಾಸಿಮ್‌ ಔಟಾಗದೆ 16
ಹ್ಯಾರಿಸ್‌ ರವೂಫ್ ಸಿ ಸ್ಟೋಕ್ಸ್‌ ಬಿ ವೋಕ್ಸ್‌ 35
ಇತರ 6
ಒಟ್ಟು (43.3 ಓವರ್‌ಗಳಲ್ಲಿ ಆಲೌಟ್‌) 244
ವಿಕೆಟ್‌ ಪತನ: 1-0, 2-10, 3-61, 4-100, 5-126, 6-145, 7-150, 8-186, 9-191.
ಬೌಲಿಂಗ್‌:
ಡೇವಿಡ್‌ ವಿಲ್ಲಿ 10-0-56-3
ಕ್ರಿಸ್‌ ವೋಕ್ಸ್‌ 5.3-0-27-1
ಆದಿಲ್‌ ರಶೀದ್‌ 10-0-55-2
ಗಸ್‌ ಅಟಿನ್ಸನ್‌ 8-0-45-2
ಮೊಯಿನ್‌ ಅಲಿ 10-0-60-2
ಪಂದ್ಯಶ್ರೇಷ್ಠ: ಡೇವಿಡ್‌ ವಿಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next