Advertisement
ಎಜ್‌ಬಾಸ್ಟನ್ ಅಂಗಳದಲ್ಲಿ ನಡೆದ ದ್ವಿತೀಯ ಸೆಮಿಫೈನಲ್ ಏಕಪಕ್ಷೀಯವಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ನಾಕೌಟ್ ಜೋಶ್ ತೋರುವಲ್ಲಿ ಸಂಪೂರ್ಣ ವಿಫಲವಾಯಿತು. 49 ಓವರ್‌ಗಳಲ್ಲಿ ಕೇವಲ 223 ರನ್ನಿಗೆ ಆಲೌಟ್ ಆಯಿತು. ಬಿರುಸಿನ ಜವಾಬು ನೀಡತೊಡಗಿದ ಇಂಗ್ಲೆಂಡ್ 32.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 226 ರನ್ ಬಾರಿಸಿತು.
ಇದು ಇಂಗ್ಲೆಂಡ್ ಕಾಣುತ್ತಿರುವ 4ನೇ ಫೈನಲ್. ಹಿಂದಿನ ಮೂರೂ ಪ್ರಶಸ್ತಿ ಕಾಳಗದಲ್ಲಿ ಅದು ಎಡವಿತ್ತು. ಈ ಬಾರಿ ನೆಚ್ಚಿನ ತಂಡವಾಗಿ ಆಡಲಿಳಿ ದು ತವರಿನಂಗಳದಲ್ಲಿ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಫೈನಲ್‌ನಲ್ಲೂ ಈ ತೀವ್ರತೆಯನ್ನು ಕಾಯ್ದುಕೊಂಡರೆ ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡಿನ ಬಹು ಕಾಲದ ಕನಸೊಂದು ಸಾಕಾರಗೊಳ್ಳಲಿದೆ.
Related Articles
Advertisement
ಇಂಗ್ಲೆಂಡ್ ಆಲ್‌ರೌಂಡ್ ಶೋಇಂಗ್ಲೆಂಡ್ ಈ ಪಂದ್ಯದಲ್ಲಿ ಆಲ್‌ರೌಂಡ್ ಶೋ ಮೂಲಕ ಗಮನ ಸೆಳೆಯಿತು. ಬೌಲಿಂಗ್ ವೇಳೆ ಆಸೀಸ್‌ನ ಸ್ಟಾರ್ ಆರಂಭಿಕರಾದ ವಾರ್ನರ್, ಫಿಂಚ್ ಜತೆಗೆ ಹ್ಯಾಂಡ್ಸ್‌ಕಾಂಬ್ ಅವರನ್ನು 14 ರನ್ ಆಗುವಷ್ಟರಲ್ಲಿ ಪೆವಿಲಿಯನ್ನಿಗೆ ಅಟ್ಟಿತು. ಅಲ್ಲಿಗೆ ಕಾಂಗರೂಗಳ ಅರ್ಧ ಕತೆ ಮುಗಿಯಿತು. ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 4ನೇ ವಿಕೆಟಿಗೆ 103 ರನ್ ಪೇರಿಸಿದಾಗ ಹೋರಾಟದ ಸೂಚನೆಯೊಂದು ಲಭಿಸಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ಇಂಗ್ಲೆಂಡ್ ಬೌಲರ್‌ಗಳ ಕೈ ಮೇಲಾಯಿತು. ರಾಯ್-ಬೇರ್‌ಸ್ಟೊ ಆರ್ಭಟ
ಚೇಸಿಂಗ್ ವೇಳೆ ರಾಯ್-ಬೇರ್‌ಸ್ಟೊ ಕಾಂಗರೂ ಬೌಲರ್‌ಗಳನ್ನು ಪುಡಿಗುಟ್ಟಿದರು. 17.2 ಓವರ್‌ಗಳಲ್ಲಿ 124 ರನ್ ಸೂರೆಗೈದು ಗೆಲುವನ್ನು ಖಾತ್ರಿಗೊಳಿಸಿದರು. ರಾಯ್ 5 ಸಿಕ್ಸರ್, 9 ಬೌಂಡರಿ ಸಿಡಿಸಿ 65 ಎಸೆತಗಳಿಂದ 85 ರನ್ ಬಾರಿಸಿದರು. 1975ರ ಬಳಿಕ ಸೆಮಿ ಸೆಣಸಾಟ
ಆಸ್ಟ್ರೇಲಿಯ-ಇಂಗ್ಲೆಂಡ್ 1975ರ ಪ್ರಥಮ ವಿಶ್ವಕಪ್ ಬಳಿಕ ಮೊದಲ ಸಲ ಸೆಮಿಫೈನಲ್‌ನಲ್ಲಿ ಎದುರಾದವು. ಅಂದು ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ನಡೆದ ಸಣ್ಣ ಮೊತ್ತದ ಸ್ಪರ್ಧೆಯಲ್ಲಿ ಇಯಾನ್ ಚಾಪೆಲ್ ನೇತೃತ್ವದ ಆಸ್ಟ್ರೇಲಿಯ 4 ವಿಕೆಟ್‌ಗಳ ಜಯ ಸಾಧಿಸಿತ್ತು; ನೆಚ್ಚಿನ ತಂಡವಾಗಿದ್ದ ಆತಿಥೇಯರಿಗೆ ಆಘಾತವಿಕ್ಕಿತ್ತು.ಇದಕ್ಕೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು. ಮೈಕ್ ಡೆನ್ನಿಸ್ ನಾಯಕತ್ವದ ಇಂಗ್ಲೆಂಡ್ 36.2 ಓವರ್‌ಗಳಲ್ಲಿ ಬರೀ 93 ರನ್ನಿಗೆ ಕುಸಿದಿತ್ತು. ಸುಲಭದಲ್ಲಿ ಬೆನ್ನಟ್ಟುವ ಕನಸು ಕಾಣುತ್ತಿದ್ದ ಆಸ್ಟ್ರೇಲಿಯ ಭಾರೀ ಸಂಕಟಕ್ಕೆ ಸಿಲುಕಿತು. 39 ರನ್ ಆಗುವಷ್ಟರಲ್ಲಿ 6 ವಿಕೆಟ್ ಹಾರಿ ಹೋಯಿತು!ಆದರೆ 7ನೇ ವಿಕೆಟಿಗೆ ಜತೆಗೂಡಿದ ಡಗ್ ವಾಲ್ಟರ್ (ಔಟಾಗದೆ 20) ಮತ್ತು ಗ್ಯಾರಿ ಗಿಲ್ಮೋರ್ (ಔಟಾಗದೆ 28) ಇಂಗ್ಲೆಂಡ್ ದಾಳಿಗೆ ಸಡ್ಡು ಹೊಡೆದರು. ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ಕ್ಯಾರಿ ದವಡೆಗೆ ಚೆಂಡಿನೇಟು
ಜೋಫÅ ಆರ್ಚರ್ ಅವರ ಬೌನ್ಸರ್ ಒಂದು ಅಲೆಕ್ಸ್ ಕ್ಯಾರಿ ದವಡೆಗೆ ಸಾಕಷ್ಟು ನೋವು ಉಂಟುಮಾಡಿತು. ಚೆಂಡು ಹೆಲ್ಮೆಟ್‌ನ ಗ್ರಿಲ್ಸ್ ಗೆ ಅಪ್ಪಳಿಸಿದಾಗ ಅದು ತುಂಡಾಗಿ ಕ್ಯಾರಿ ದವಡೆಗೆ ಬಡಿಯಿತು. ರಕ್ತವೂ ಸುರಿಯಿತು. ಬ್ಯಾಂಡೇಜ್ ಸುತ್ತಿಕೊಂಡು ಆಡಿದರೂ ರಕ್ತ ನಿಲ್ಲಲಿಲ್ಲ. ಕೊನೆಗೆ ವೈದ್ಯರು ಇನ್ನೊಂದು ಬ್ಯಾಂಡೇಜ್ ಹಾಕಿದರು. ಕ್ಯಾರಿ ಗಳಿಕೆ 70 ಎಸೆತಗಳಿಂದ 46 ರನ್. ಸ್ಮಿತ್ ಸರ್ವಾಧಿಕ 85 ರನ್ ಮಾಡಿದರು. ಸ್ಕೋರ್ ಪಟ್ಟಿ
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಸಿ ಬೇರ್‌ಸ್ಟೊ ಬಿ ವೋಕ್ಸ್ 9
ಆರನ್ ಫಿಂಚ್ ಎಲ್‌ಬಿಡಬ್ಲ್ಯು ಆರ್ಚರ್ 0
ಸ್ಟೀವನ್ ಸ್ಮಿತ್ ರನೌಟ್ 85
ಹ್ಯಾಂಡ್ಸ್‌ಕಾಂಬ್ ಬಿ ವೋಕ್ಸ್ 4
ಅಲೆಕ್ಸ್ ಕ್ಯಾರಿ ಸಿ ವಿನ್ಸ್ (ಬದಲಿ) ಬಿ ರಶೀದ್ 46
ಸ್ಟೋಯಿನಿಸ್ ಎಲ್‌ಬಿಡಬ್ಲ್ಯು ರಶೀದ್ 0
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಮಾರ್ಗನ್ ಬಿ ಆರ್ಚರ್ 22
ಪ್ಯಾಟ್ ಕಮಿನ್ಸ್ ಸಿ ರೂಟ್ ಬಿ ರಶೀದ್ 6
ಮಿಚೆಲ್ ಸ್ಟಾರ್ಕ್ ಸಿ ಬಟ್ಲರ್ ಬಿ ವೋಕ್ಸ್ 29
ಜಾಸನ್ ಬೆಹೆÅಂಡಾಫ್ì ಬಿ ವುಡ್ 1
ನಥನ್ ಲಿಯೋನ್ ಔಟಾಗದೆ 5
ಇತರ 16
ಒಟ್ಟು (49 ಓವರ್‌ಗಳಲ್ಲಿ ಆಲೌಟ್) 223
ವಿಕೆಟ್ ಪತನ: 1-4, 2-10, 3-14, 4-117, 5-118, 6-157, 7-166, 8-217, 9-217.
ಬೌಲಿಂಗ್:
ಕ್ರಿಸ್ ವೋಕ್ಸ್ 8-0-20-3
ಜೋಫÅ ಆರ್ಚರ್ 10-0-32-2
ಬೆನ್ ಸ್ಟೋಕ್ಸ್ 4-0-22-0
ಮಾರ್ಕ್ ವುಡ್ 9-0-45-1
ಲಿಯಮ್ ಪ್ಲಂಕೆಟ್ 8-0-44-0
ಆದಿಲ್ ರಶೀದ್ 10-0-54-3
ಇಂಗ್ಲೆಂಡ್
ಜಾಸನ್ ರಾಯ್ ಸಿ ಕ್ಯಾರಿ ಬಿ ಕಮಿನ್ಸ್ 85
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಸ್ಟಾರ್ಕ್ 34
ಜೋ ರೂಟ್ ಔಟಾಗದೆ 49
ಇಯಾನ್ ಮಾರ್ಗನ್ ಔಟಾಗದೆ 45
ಇತರ 13
ಒಟ್ಟು (32.1 ಓವರ್‌ಗಳಲ್ಲಿ 2 ವಿಕೆಟಿಗೆ) 226
ವಿಕೆಟ್ ಪತನ: 1-124, 2-147.
ಬೌಲಿಂಗ್:
ಜಾಸನ್ ಬೆಹೆÅಂಡಾಫ್ì 8.1-2-38-0
ಮಿಚೆಲ್ ಸ್ಟಾರ್ಕ್ 9-0-70-1
ಪ್ಯಾಟ್ ಕಮಿನ್ಸ್ 7-0-34-1
ನಥನ್ ಲಿಯೋನ್ 5-0-49-0
ಸ್ಟೀವನ್ ಸ್ಮಿತ್ 1-0-21-0
ಮಾರ್ಕಸ್ ಸ್ಟೋಯಿನಿಸ್ 2-0-13-0
ಪಂದ್ಯಶ್ರೇಷ್ಠ: ಕ್ರಿಸ್ ವೋಕ್ಸ್