Advertisement
ಪ್ರಸಕ್ತ ವಿಶ್ವಕಪ್ ಪಂದ್ಯಗಳನ್ನು ಅವಲೋಕಿಸು ವಾಗ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ತಂಡಗಳ ನಿರ್ವಹಣೆ ತದ್ವಿರುದ್ಧವಾಗಿದೆ. ಇಂಗ್ಲೆಂಡ್ ಮುನ್ನೂರು ಪ್ಲಸ್ ಮೊತ್ತದೊಂದಿಗೆ ಕೂಟದ ಅತ್ಯಧಿಕ ಮೊತ್ತ ದಾಖಲಿಸಿದರೆ, ಪಾಕಿಸ್ಥಾನ ಲೋ ಸ್ಕೋರ್ ಸಂಕಟಕ್ಕೆ ಸಿಲುಕಿದೆ. ಮಾರ್ಗನ್ ಪಡೆ ಅಧಿಕಾರಯುತ ಜಯ ಸಾಧಿಸಿ ದರೆ, ವಿಂಡೀಸ್ ವಿರುದ್ಧ ಠುಸ್ ಆದ ಪಾಕ್ ಸತತ 11 ಏಕದಿನ ಪಂದ್ಯಗಳ ಸೋಲಿನಿಂದ ತತ್ತರಿಸಿದೆ. ಸೋಮವಾರ ಇದು 12ಕ್ಕೆ ಏರಿದರೂ ಆಶ್ವರ್ಯವಿಲ್ಲ.
ವಿಶ್ವಕಪ್‌ಗೆ ಒಂದು ತಿಂಗಳಿರುವಾಗಲೇ ಇಂಗ್ಲೆಂಡಿಗೆ ಆಗಮಿಸಿದ ಪಾಕಿಸ್ಥಾನ 5 ಪಂದ್ಯಗಳ ಏಕದಿನ ಸರಣಿಯನ್ನಾಡಿತ್ತು. ನಿಜಕ್ಕಾದರೆ ಇದು ವಿಶ್ವಕಪ್ ದೃಷ್ಟಿಯಲ್ಲಿ ಪಾಕಿಗೆ ಭಾರೀ ಲಾಭವಾಗಿ ಪರಿಣಮಿಸಬೇಕಿತ್ತು. ಆದರೆ ಈ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡ ಪಾಕ್ ಪಾತಾಳದತ್ತ ಉರುಳಿತು. ಸರಣಿಯಲ್ಲಿ ಪಾಕಿಸ್ಥಾನ ದೊಡ್ಡ ಮೊತ್ತ ದಾಖಲಿಸಿತಾದರೂ ಇಂಗ್ಲೆಂಡ್ ಇದನ್ನು ಮೀರಿ ನಿಂತಿತು. ಆದರೆ ವೆಸ್ಟ್ ಇಂಡೀಸ್ ಎದುರಿನ ಮೊದಲ ಪಂದ್ಯದಲ್ಲಿ ಪಾಕ್ ಬ್ಯಾಟಿಂಗ್ ಚಿಂತಾಜನಕ ಸ್ಥಿತಿಗೆ ತಲುಪಿತು. ಬರೀ 105 ರನ್ನಿಗೆ ಕುಸಿದು ಇದು ವಿಶ್ವಕಪ್ ಪಂದ್ಯವೋ, ಕ್ಲಬ್ ಪಂದ್ಯವೋ ಎಂಬ ಪ್ರಶ್ನೆ ಮೂಡಿಸಿತು. ತೀವ್ರ ಸಂಕಟದಲ್ಲಿರುವ ಪಾಕ್ ಬಲಾಡ್ಯ ಇಂಗ್ಲೆಂಡ್ ಎದುರು ಸಿಡಿದು ನಿಂತೀತು ಎಂದು ಹೇಳುವ ಧೈರ್ಯ ಯಾರಲ್ಲೂ ಇಲ್ಲ. ಸತತ 2 ಪಂದ್ಯಗಳನ್ನು ಸೋತರೆ ಪಾಕಿಸ್ಥಾನದ ಹಾದಿ ಕಠಿನವಾಗುವುದರಲ್ಲಿ ಅನುಮಾನವಿಲ್ಲ.
Related Articles
Advertisement
ಇಂಗ್ಲೆಂಡ್ ನಿರಾಳ!ಕೂಟದ ಫೇವರಿಟ್ ತಂಡವಾಗಿರುವ ಇಂಗ್ಲೆಂಡ್ ನಿರಾಳವಾಗಿದೆ. ದಕ್ಷಿಣ ಆಫ್ರಿಕಾವನ್ನು ಸೊಲ್ಲೆತ್ತದಂತೆ ಮಾಡಿ ಮೊದಲ ಪಂದ್ಯದಲ್ಲೇ ಸಾಧಿಸಿದ ಅಮೋಘ ಗೆಲುವು ಮಾರ್ಗನ್ ಪಡೆಯ ಮುಂದಿನ ಮಾರ್ಗ ಯಾವುದೆಂಬುದಕ್ಕೆ ದಿಕ್ಸೂಚಿಯಾಗಿದೆ. ಇಂಗ್ಲೆಂಡ್ ಪಾಲಿಗೆ ಪಾಕಿಸ್ಥಾನದೆದುರಿನ ಪಂದ್ಯ ಬಹುಶಃ ಏಕದಿನ ಸರಣಿಯ 6ನೇ ಪಂದ್ಯವಾಗಿರಲಿಕ್ಕೂ ಸಾಕು! ಘಟಾನುಘಟಿ ಆಟಗಾರರ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಇಂಗ್ಲೆಂಡಿಗೆ ಕಡಿವಾಣ ಹಾಕುವುದು ಸುಲಭವಲ್ಲ. ಪಾಕಿಗೆ ಈಗಾಗಲೇ ಇದು ಸ್ಪಷ್ಟವಾಗಿದೆ. ಹೀಗಾಗಿ “ಡಿಫರೆಂಟ್ ಬಾಲ್ ಗೇಮ್’ಆಗಿರುವ ವಿಶ್ವಕಪ್‌ನಲ್ಲಿ ಸಫìರಾಜ್ ಬಳಗಕ್ಕೆ ಇದು ನಿಜಕ್ಕೂ ಅಗ್ನಿಪರೀಕ್ಷೆ. ಸಂಭಾವ್ಯ ತಂಡಗಳು
ಇಂಗ್ಲೆಂಡ್: ಜಾಸನ್ ರಾಯ್, ಜಾನಿ ಬೇರ್‌ಸ್ಟೊ, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್ , ಆದಿಲ್ ರಶೀದ್, ಲಿಯಮ್ ಪ್ಲಂಕೆಟ್, ಜೋಫÅ ಆರ್ಚರ್. ಪಾಕಿಸ್ಥಾನ: ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಬಾಬರ್ ಆಜಂ, ಹ್ಯಾರಿಸ್ ಸೊಹೈಲ್, ಸಫìರಾಜ್ ಅಹ್ಮದ್ (ನಾಯಕ), ಮೊಹಮ್ಮದ್ ಹಫೀಜ್, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾದ್, ಮೊಹಮ್ಮದ್ ಆಮಿರ್.