Advertisement
ಈಗ ಅದು ಪಡೆದುಕೊಂಡಿರುವ ರೂಪವೇ ಬೇರೆ.ನಾಲ್ಕೈದು ತಿಂಗಳ ಹಿಂದೆ ಭಾರತ ತಂಡ ಅತ್ಯಂತಪ್ರಬಲವಾಗಿ ಗೋಚರಿಸಿತ್ತು. ವಿಶ್ವಕಪ್ ಗೆಲ್ಲಬಲ್ಲ ತಂಡಗಳ ಪಟ್ಟಿ ತೆಗೆದು ನೋಡಿದಾಗ ಭಾರತಕ್ಕೆ ಮೆಚ್ಚಿನ ತಂಡವೆಂಬ ಗೌರವ ಲಭಿಸಿತ್ತು. ಈಗ 3 ತಿಂಗಳ ಹಿಂದೆ ಆ ಅಭಿಪ್ರಾಯ ಬದಲಾಯಿತು. ಈಗ ಮೆಚ್ಚಿನ ತಂಡಗಳ ಪಟ್ಟಿಯಲ್ಲಿಭಾರತಕ್ಕೆ ಎರಡೋ, ಮೂರನೆಯಧ್ದೋ ಸ್ಥಾನ. ಅಗ್ರಸ್ಥಾನ ಆತಿಥೇಯ ಇಂಗ್ಲೆಂಡ್‌ಗೆ ಸಿಕ್ಕಿದೆ. ಇದುವರೆಗೆ ಒಮ್ಮೆಯೂ ಏಕದಿನ ವಿಶ್ವಕಪ್ ಗೆಲ್ಲದ ಇಂಗ್ಲೆಂಡ್‌ಗೆ ಇದು ಅತ್ಯಂತ
ಮಹತ್ವದ ಅವಕಾಶ.
Related Articles
ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ಗೆ ಆಶೆಯೊಂದು ಚಿಗುರಿಕೊಂಡಿದೆ. 1975ರಿಂದ ಇದುವರೆಗೆ 11 ವಿಶ್ವಕಪ್‌ಗ್ಳು ನಡೆದಿವೆ.ಇಂಗ್ಲೆಂಡ್ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಗೆಲ್ಲಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಪ್ರಬಲ ತಂಡವಾಗಿದ್ದ ಅದು ನಂತರ ಲಯ ಕಳೆದುಕೊಂಡು ದುರ್ಬಲವಾಗಿ ಬದಲಾಯಿತು. ಕಳೆದ ವಿಶ್ವಕಪ್‌ನಿಂದ ಮತ್ತೆ ಪ್ರಬಲವಾಗಿ ಬದಲಾಗಿದೆ. ಈ ಬಾರಿಯಂತೂ ಆಲ್‌ರೌಂಡರ್‌ಗಳು, ಬ್ಯಾಟ್ಸ್‌ಮನ್‌ಗಳು, ವೇಗಿಗಳನ್ನು ಪರಿಗಣಿಸಿದರೆ ಇಂಗ್ಲೆಂಡ್ ಅತ್ಯಂತ ಬಲಿಷ್ಠ ತಂಡ. ಜೋ ರೂಟ್, ಜೋಸ್‌ಬಟ್ಲರ್, ಜೇಸನ್ ರಾಯ್ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಬೆನ್‌ಸ್ಟೋಕ್ಸ್, ಕ್ರಿಸ್ ವೋಕ್ಸ್, ಮೋಯಿನ್ ಅಲಿ ಅತ್ಯುತ್ತಮ ಆಲ್‌ರೌಂಡರ್‌ಗಳು. ತಂಡದ ಪ್ರಮುಖ ಬೌಲರ್‌ಗಳೆಲ್ಲ ಆಲ್‌ರೌಂಡರ್ ಪಟ್ಟಿಯಲ್ಲೇ ಇದ್ದಾರೆ. ಇದು ಇಂಗ್ಲೆಂಡ್ ಪಾಲಿನ ಗಮನಾರ್ಹ ಸಂಗತಿ.
Advertisement
ಬಹುತೇಕ ಆಟಗಾರರು ಆಲ್‌ರೌಂಡರ್‌ಗಳಾಗಿರುವುದರಿಂದ, ತಂಡ ಸಂಪೂರ್ಣ ಬಲಿಷ್ಠವಾಗಿರುತ್ತದೆ. ಹೆಚ್ಚುವರಿ ಆಟಗಾರರನ್ನು ತೆಗೆದುಕೊಳ್ಳಬೇಕಾದ ಅಗತ್ಯವೇ ಇರುವುದಿಲ್ಲ. ಉದಾಹರಣೆಗೆ, ಈಗ ಇಂಗ್ಲೆಂಡ್ ತಂಡದಲ್ಲಿರುವ ಆಲ್ ರೌಂಡರ್‌ಗಳಾದ ಬೆನ್‌ಸ್ಟೋಕ್ಸ್, ಕ್ರಿಸ್‌ವೋಕ್ಸ್ ಮುಖ್ಯವೇಗಿಗಳ ಪಾತ್ರ ನಿರ್ವಹಿಸುತ್ತಾರೆ. ಮೋಯಿನ್ ಅಲಿ ಬ್ಯಾಟಿಂಗ್ ಜೊತೆಗೆ ಮುಖ್ಯ ಸ್ಪಿನ್ನರ್ ಪಾತ್ರ ನಿರ್ವಹಿಸುತ್ತಾರೆ. ಇದರ ಪರಿಣಾಮ ತಂಡದ 8ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಬಲಿಷ್ಠವಾಗಿದೆ. ಆಗ ಯಾರೋ ಒಬ್ಬರು ಆಡಿ ತಂಡವನ್ನು ಗೆಲ್ಲಿಸುವ ವಿಶ್ವಾಸವಿರುತ್ತದೆ.
ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದರೆ, ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನತದೃಷ್ಟ ತಂಡವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಇದು ಸಕಾಲ. 40ಕ್ಕೂ ಅಧಿಕ ವರ್ಷಗಳ ವಿಶ್ವಕಪ್ ಗೆಲ್ಲದೇ ಬರ ಅನುಭವಿಸಿರುವ ಇಂಗ್ಲೆಂಡ್, ಈ ಬಾರಿ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಕಾತುರದಿಂದ ಕಾದು ನಿಂತಿದೆ. ಅದಕ್ಕೆ ಪೂರಕವಾಗಿ ತಂಡವನ್ನು ರಚಿಸಿಕೊಂಡಿದೆ. ಅದು ಉಪಾಂತ್ಯ ಮತ್ತು ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯತಂಡಗಳು ಒಡ್ಡುವ ಸವಾಲನ್ನು ಮೀರಿ ನಿಂತರೆ ವಿಶ್ವಕಪ್ ಗೆಲ್ಲುವುದು ಖಾತ್ರಿ. ರೌಂಡ್ ರಾಬಿನ್
ಮಾದರಿ ಹೇಗಿರುತ್ತದೆ?
ಒಂದು ಗುಂಪಿನಲ್ಲಿರುವ ಒಂದು ತಂಡ ಉಳಿದೆಲ್ಲ ತಂಡಗಳ ವಿರುದಟಛಿ ಸೆಣಸುವುದನ್ನು ರೌಂಡ್ ರಾಬಿನ್ ಲೀಗ್ ಎನ್ನುತ್ತಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಒಂದೇ ಗುಂಪು ಮಾಡಲಾಗಿದೆ. ಪಾಲ್ಗೊಳ್ಳುವ ಹತ್ತೂ ತಂಡಗಳು, ಮತ್ತೂಂದು ತಂಡದ ವಿರುದ್ಧ ಸೆಣಸುತ್ತವೆ. ಅಗ್ರಸ್ಥಾನ ಪಡೆದ ನಂತರ 4 ತಂಡಗಳು ಸೆಮಿಫೈನಲ್‌ಗೆ ಸ್ಥಾನ ಪಡೆಯುತ್ತವೆ. ಅಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೇರುತ್ತವೆ. ಅಲ್ಲಿ ಗೆದ್ದ ತಂಡಕ್ಕೆ ಟ್ರೋಫಿ.ಈ ಬಾರಿ ವಿಶ್ವಕಪ್‌ನಲ್ಲಿ ಇದೇ ಮಾದರಿಯನ್ನು ಅಳವಡಿಸಲಾಗಿದೆ. ವಿಶ್ವಕಪ್‌ನ ಆರಂಭದ ಕಾಲದಲ್ಲಿ ಈ ಮಾದರಿಯನ್ನು ಬಳಸಿಕೊಳ್ಳಲಾಗಿತ್ತು. ಅದಾದ ನಂತರ ಅಪರೂಪಕ್ಕೆ ಇಂತಹ ಪ್ರಯೋಗ ಮಾಡಲಾಗಿದೆ.