Advertisement

ಮಲ್ಯ ಕೇಸು: ವಿಚಾರಣೆ ಮುಂದೂಡಿದ ಲಂಡನ್‌ ಹೈಕೋರ್ಟ್‌

03:09 AM Apr 11, 2020 | Hari Prasad |

ಲಂಡನ್‌: ಉದ್ಯಮಿ ವಿಜಯ ಮಲ್ಯರಿಂದ 9,920 ಕೋಟಿ ರೂ.ಮೊತ್ತ ವಾಪಸ್‌ ಪಡೆದುಕೊಳ್ಳುವ ಬಗ್ಗೆ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಲಂಡನ್‌ ಹೈಕೋರ್ಟ್‌ ಮುಂದೂಡಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಮಲ್ಯ ಅರಿಕೆ ಮಾಡಿಕೊಂಡಿರುವ ಪಾವತಿ ಬಗೆಗಾಗಿನ ಅರ್ಜಿ ಮತ್ತು ಭಾರತದ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿ ಇತ್ಯರ್ಥಗೊಳ್ಳಬೇಕಾಗಿದೆ.

Advertisement

ಹೀಗಾಗಿ ತತ್‌ಕ್ಷಣಕ್ಕೆ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡು ವುದಾಗಿ ನ್ಯಾಯಮೂರ್ತಿ ಮೈಕೆಲ್‌ ಬ್ರಿಗ್ಸ್‌ ಹೇಳಿದ್ದಾರೆ. ಬ್ಯಾಂಕ್‌ಗಳು ಕೋರಿಕೊಂಡಂತೆ ಹಾಲಿ ಪರಿಸ್ಥಿತಿಯಲ್ಲಿ ಕಠಿನ ಕ್ರಮಕ್ಕೆ ಆದೇಶ ನೀಡಿದರೂ ಅವುಗಳಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಲಾರದು. ಜತೆಗೆ ವಿಜಯ್‌ ಮಲ್ಯರನ್ನು ದಿವಾಳಿ ಎಂದು ಘೋಷಿಸುವ ಬ್ಯಾಂಕ್‌ಗಳ ಕೋರಿಕೆಯೇ ಅಚ್ಚರಿ ಹುಟ್ಟಿಸುತ್ತದೆ. ಏಕೆಂದರೆ ಅವರ ವಿರುದ್ಧ ಕಾನೂನು ಕ್ರಮಗಳು ಇನ್ನೂ ಜಾರಿಯಲ್ಲಿದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next