Advertisement
ಈ ಫಲಿತಾಂಶದಿಂದ ಇಂಗ್ಲೆಂಡ್ ಅಂಕ ಪಟ್ಟಿ ಯಲ್ಲಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ನೆಗೆಯಿತು. ಇದೇ ಸ್ಥಾನ ಉಳಿಸಿಕೊಂಡರೆ ಅದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಸಂಪಾದಿಸಲಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 9 ವಿಕೆಟಿಗೆ 339 ರನ್ ಪೇರಿಸಿದರೆ, ನೆದರ್ಲೆಂಡ್ಸ್ 37.2 ಓವರ್‌ಗಳಲ್ಲಿ 179ಕ್ಕೆ ಆಲೌಟ್ ಆಯಿತು. ಇದಕ್ಕೂ ಮೊದಲು ಇಂಗ್ಲೆಂಡ್ ಅ. 10ರಂದು ಬಾಂಗ್ಲಾದೇಶವನ್ನು 137 ರನ್ನುಗಳಿಂದ ಮಣಿಸಿತ್ತು. ಶನಿವಾರದ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.
ಆದಿಲ್ ರಶೀದ್, ಮೊಯಿನ್ ಅಲಿ ಜೋಡಿಯ ಸ್ಪಿನ್ ದಾಳಿಯನ್ನು ನಿಭಾಯಿಸಿ ನಿಲ್ಲಲು ನೆದರ್ಲೆಂಡ್ಸ್‌ನಿಂದ ಸಾಧ್ಯವಾಗಲಿಲ್ಲ. ಇಬ್ಬರೂ ತಲಾ 3 ವಿಕೆಟ್ ಉರುಳಿಸಿದರು. ಅಜೇಯ 41 ರನ್ ಮಾಡಿದ ಆಂಧ್ರ ಮೂಲದ ತೇಜ ನಿಡಮನೂರು ಅವರದು ನೆದರ್ಲೆಂಡ್ಸ್ ಸರದಿಯ ಗರಿಷ್ಠ ಗಳಿಕೆ.
“ಮಾಜಿ’ ಆದ ಬಳಿಕ ಇಂಗ್ಲೆಂಡ್ ಅತ್ಯುತ್ತಮ ಬ್ಯಾಟಿಂಗ್ ಸಾಹಸವೊಂದನ್ನು ಪ್ರದರ್ಶಿಸಿತು. 9ಕ್ಕೆ 339 ರನ್ ಪೇರಿಸಿತು. ಇದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ದಾಖಲಿ ಸಿದ 4ನೇ 300 ಪ್ಲಸ್ ಗಳಿಕೆ. ಇದೇ ಕೂಟದಲ್ಲಿ ಬಾಂಗ್ಲಾದೇಶ ವಿರುದ್ಧ 9ಕ್ಕೆ 364 ರನ್ ಪೇರಿಸಿತ್ತು. ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ 300 ಪ್ಲಸ್ ರನ್ ಪೇರಿಸಿದ 2 ಪಂದ್ಯಗಳಲ್ಲಷ್ಟೇ ಕ್ರಿಕೆಟ್ ಜನಕರಿಗೆ ಗೆಲುವು ಒಲಿದಂತಾಯಿತು. ಇಂಗ್ಲೆಂಡ್‌ನ ಈ ಬೃಹತ್ ಮೊತ್ತಕ್ಕೆ ಕಾರಣ ರಾದವರು ಮೂವರು-ಬೆನ್ ಸ್ಟೋಕ್ಸ್, ಡೇವಿಡ್ ಮಲಾನ್ ಮತ್ತು ಕ್ರಿಸ್ ವೋಕ್ಸ್. ಇವರಲ್ಲಿ ಸ್ಟೋಕ್ಸ್ ಆಕರ್ಷಕ ಶತಕ ಬಾರಿಸಿದರೆ, ಮಲಾನ್ ಸ್ವಲ್ಪದರಲ್ಲೇ ಸೆಂಚುರಿ ತಪ್ಪಿಸಿಕೊಂಡರು. ವೋಕ್ಸ್ ಕೆಳ ಹಂತದಲ್ಲಿ ಬಿರುಸಿನ ಆಟವಾಡಿ ಅರ್ಧ ಶತಕ ಪೂರೈಸಿದರು.
Related Articles
Advertisement
ಕೊನೆಯಲ್ಲಿ ಕ್ರಿಸ್ ವೋಕ್ಸ್ ಬಿರುಸಿನ ಅರ್ಧ ಶತಕವೊಂದನ್ನು ಬಾರಿಸಿದ್ದರಿಂದ ತಂಡದ ಮೊತ್ತದಲ್ಲಿ ದೊಡ್ಡ ಮಟ್ಟದ ಪ್ರಗತಿ ಕಂಡುಬಂತು. ವೋಕ್ಸ್ 45 ಎಸೆತಗಳಿಂದ 51 ರನ್ ಮಾಡಿದರು (5 ಬೌಂಡರಿ, 1 ಸಿಕ್ಸರ್). ಇಂಗ್ಲೆಂಡ್‌ನ ಬ್ಯಾಟಿಂಗ್ ಮಿಂಚಿದ್ದು ಮೊದಲ 20 ಓವರ್ ಹಾಗೂ ಕೊನೆಯ 10 ಓವರ್‌ಗಳಲ್ಲಿ ಮಾತ್ರ. ಈ ಅವಧಿಯಲ್ಲಿ ಕ್ರಮವಾಗಿ ಒಂದಕ್ಕೆ 132 ರನ್ ಹಾಗೂ 3ಕ್ಕೆ 124 ರನ್ ಒಟ್ಟುಗೂಡಿತು.
ಸ್ಕೋರ್ ಪಟ್ಟಿಇಂಗ್ಲೆಂಡ್
ಜಾನಿ ಬೇರ್‌ಸ್ಟೊ ಸಿ ಮೀಕರೆನ್ ಬಿ ದತ್ 15
ಡೇವಿಡ್ ಮಲಾನ್ ರನೌಟ್ 87
ಜೋ ರೂಟ್ ಬಿ ವಾನ್ ಬೀಕ್ 28
ಬೆನ್ ಸ್ಟೋಕ್ಸ್ ಸಿ ಸಿಬ್ರಾಂಡ್ ಬಿ ವಾನ್ ಬೀಕ್ 108
ಹ್ಯಾರಿ ಬ್ರೂಕ್ ಸಿ ಆ್ಯಕರ್‌ಮನ್ ಬಿ ಡಿ ಲೀಡ್ 11
ಜಾಸ್ ಬಟ್ಲರ್ ಸಿ ತೇಜ ಬಿ ಮೀಕರೆನ್ 5
ಮೊಯಿನ್ ಅಲಿ ಸಿ ಡಿ ಲೀಡ್ ಬಿ ದತ್ 4
ಕ್ರಿಸ್ ವೋಕ್ಸ್ ಸಿ ಎಡ್ವರ್ಡ್ಸ್ ಬಿ ಡಿ ಲೀಡ್ 51
ಡೇವಿಡ್ ವಿಲ್ಲಿ ಸಿ ಸಿಬ್ರಾಂಡ್ ಬಿ ಡಿ ಲೀಡ್ 6
ಗಸ್ ಅಟಿRನ್ಸನ್ ಔಟಾಗದೆ 2
ಆದಿಲ್ ರಶೀದ್ ಔಟಾಗದೆ 1
ಇತರ 21
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 339 ವಿಕೆಟ್ ಪತನ: 1-48, 2-133, 3-139, 4-164, 5-178, 6-192, 7-321, 8-327, 9-334.
ಬೌಲಿಂಗ್: ಆರ್ಯನ್ ದತ್ 10-0-67-2
ಲೋಗನ್ ವಾನ್ ಬೀಕ್ 10-0-88-2
ಪಾಲ್ ವಾನ್ ಮೀಕರೆನ್ 10-0-57-1
ಬಾಸ್ ಡಿ ಲೀಡ್ 10-0-74-3
ರೋಲ್ಫ್ ವಾನ್ ಡರ್ ಮರ್ವ್ 3-0-22-0
ಕಾಲಿನ್ ಆ್ಯಕರ್‌ಮನ್ 7-0-31-0 ನೆದರ್ಲೆಂಡ್ಸ್
ವೆಸ್ಲಿ ಬರೇಸಿ ರನೌಟ್ 37
ಮ್ಯಾಕ್ಸ್ ಓ’ಡೌಡ್ ಸಿ ಅಲಿ ಬಿ ವೋಕ್ಸ್ 5
ಕಾಲಿನ್ ಆ್ಯಕರ್‌ಮನ್ ಸಿ ಬಟ್ಲರ್ ಬಿ ವಿಲ್ಲಿ 0
ಸಿಬ್ರಾಂಡ್ ಎಂಗಲ್‌ಬ್ರೆಟ್ ಸಿ ವೋಕ್ಸ್ ಬಿ ವಿಲ್ಲಿ 33
ಸ್ಕಾಟ್ ಎಡ್ವರ್ಡ್ಸ್ ಸಿ ಮಲಾನ್ ಬಿ ಅಲಿ 38
ಬಾಸ್ ಡಿ ಲೀಡ್ ಬಿ ರಶೀದ್ 10
ತೇಜ ನಿಡಮನೂರು ಔಟಾಗದೆ 41
ಲೋಗನ್ ವಾನ್ ಬೀಕ್ ಸಿ ಮಲಾನ್ ಬಿ ರಶೀದ್ 2
ರೋಲ್ಫ್ ವಾನ್ ಡರ್ ಮರ್ವ್ ಸಿ ರಶೀದ್ ಬಿ ಅಲಿ 0
ಆರ್ಯನ್ ದತ್ ಬಿ ರಶೀದ್ 1
ಪಾಲ್ ವಾನ್ ಮೀಕರೆನ್ ಸ್ಟಂಪ್ಡ್ ಬಟ್ಲರ್ ಬಿ ಅಲಿ 4
ಇತರ 8
ಒಟ್ಟು (37.2 ಓವರ್‌ಗಳಲ್ಲಿ ಆಲೌಟ್) 179
ವಿಕೆಟ್ ಪತನ: 1-12, 2-13, 3-68, 4-90, 5-104, 6-163, 7-166, 8-167, 9-174.
ಬೌಲಿಂಗ್:
ಕ್ರಿಸ್ ವೋಕ್ಸ್ 7-0-19-1
ಡೇವಿಡ್ ವಿಲ್ಲಿ 7-2-19-2
ಗಸ್ ಅಟಿನ್ಸನ್ 7-0-41-0
ಮೊಯಿನ್ ಅಲಿ 8.2-0-42-3
ಆದಿಲ್ ರಶೀದ್ 8-0-54-3 ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್