ದುಬೈ: ಬಹು ನಿರೀಕ್ಷಿತ ಐಪಿಎಲ್ ಕೂಟ ಆರಂಭವಾಗಲು ಇನ್ನು ಒಂದೇ ದಿನ ಬಾಕಿಯಿದೆ. ಕೂಟಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿದೆ. ಈ ಮಧ್ಯೆ ಏಕದಿನ ಸರಣಿ ಮುಗಿಸಿರುವ ಇಂಗ್ಲೆಂಡ್ ಮತ್ತು ಆಸೀಸ್ ಆಟಗಾರರು ದುಬೈಗೆ ಆಗಮಿಸಿದ್ದಾರೆ.
ಮ್ಯಾಂಚೆಸ್ಟರ್ ನಿಂದ ಚಾರ್ಟಡ್ ವಿಮಾನದಲ್ಲಿ ಆಟಗಾರರು ದುಬೈಗೆ ಬಂದಿಳಿದರು. ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್ ಪಿಪಿಇ ಕಿಟ್ ಧರಿಸಿರುವ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಆಟಗಾರರು ಮೊದಲು ಕ್ವಾಂಟೈನ್ ಆಗಬೇಕಾಗುತ್ತದೆ. ಈ ಸಮಯದಲ್ಲಿ ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಆ ಟೆಸ್ಟ್ ನಲ್ಲಿ ನೆಗೆಟಿವ್ ಆದರೆ ಮಾತ್ರ ಫ್ರಾಂಚೈಸಿ ಬಯೋ ಬಬಲ್ ಗೆ ಅವರು ಪ್ರವೇಶ ಮಾಡಬಹುದು.
ಈ ಮೊದಲು ಆರು ದಿನಗಳ ಕ್ವಾರಂಟೈನ್ ಆಗಬೇಕು ಎಂಬ ನಿಯಮವಿತ್ತು. ಆದರೆ ಈ ಆಟಗಾರರು ಬಯೋ ಬಬಲ್ ನಲ್ಲಿ ಇದ್ದ ಕಾರಣ ಕ್ವಾರಂಟೈನ್ ಅವಧಿಯನ್ನು 36 ಗಂಟೆಗಳಿಗೆ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಉದಯವಾಣಿ ಅಭಿಯಾನದ ಫಲಶ್ರುತಿ; ಕರಾವಳಿಗರಿಗೆ ಸಂದ ಜಯ; ಪಿಸಿಐಟಿ ಕಚೇರಿ ಎತ್ತಂಗಡಿ ಇಲ್ಲ
ಇಂಗ್ಲೆಂಡ್ ಮತ್ತು ಆಸೀಸ್ ನ ಒಟ್ಟು 21 ಆಟಗಾರರು ದುಬೈ ಗೆ ಆಗಮಿಸಿದ್ದಾರೆ. ಸೆ 19ರಂದು ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ಮತ್ತು ಮುಂಬೈ ನಡುವೆ ನಡೆಯಲಿದೆ.