Advertisement

ವಿಶ್ವಕಪ್‌ ಗೆದ್ದ ಹತ್ತೇ ದಿನದಲ್ಲಿ ಇಂಗ್ಲೆಂಡ್‌ 85 ಆಲೌಟ್‌

11:05 PM Jul 24, 2019 | Sriram |

ಲಂಡನ್‌: ಮೊದಲ ಸಲ ಏಕದಿನ ವಿಶ್ವಕಪ್‌ ಕಿರೀಟ ಧರಿಸಿಕೊಂಡು ಸಂಭ್ರಮಿಸಿದ ಹತ್ತೇ ದಿನಗಳಲ್ಲಿ, ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲೇ ಇಂಗ್ಲೆಂಡ್‌ 85 ರನ್ನಿಗೆ ಆಲೌಟಾಗಿದೆ!
ಜೋ ರೂಟ್‌ ನಾಯಕತ್ವದ ಇಂಗ್ಲೆಂಡ್‌ ಇಂಥದೊಂದು ಸಂಕಟಕ್ಕೆ ಸಿಲುಕಿದ್ದು ಪ್ರವಾಸಿ ಐರ್ಲೆಂಡ್‌ ವಿರುದ್ಧ ಬುಧವಾರ ಆರಂಭಗೊಂಡ ಟೆಸ್ಟ್‌ ಪಂದ್ಯದಲ್ಲಿ. ಸರಣಿಯ ಈ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಬರೀ 23.4 ಓವರ್‌ಗಳಲ್ಲಿ ಭೀಕರ ಕುಸಿತಕ್ಕೆ ಒಳಗಾಯಿತು.

Advertisement

ತನ್ನ ತವರು ಅಂಗಳದಲ್ಲಿ ಆಡುತ್ತಿದ್ದ ಮಿಡ್ಲ್ ಸೆಕ್ಸ್‌ ಸೀಮ್‌ ಬೌಲರ್‌ ಟಿಮ್‌ ಮುರ್ತಗ್‌ ಘಾತಕ ದಾಳಿ ನಡೆಸಿ ಆಂಗ್ಲರನ್ನು ಸಂಪೂರ್ಣವಾಗಿ ದಿಕ್ಕು ತಪ್ಪಿಸಿದರು. ಮುರ್ತಗ್‌ ಸಾಧನೆ 13 ರನ್ನಿಗೆ 5 ವಿಕೆಟ್‌. ಟೆಸ್ಟ್‌ ಇತಿಹಾಸದಲ್ಲಿ ಅತ್ಯಂತ ಬೇಗ ಹಾಗೂ ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್‌ ಹಾರಿಸಿದ ದಾಖಲೆಯಾಗಿದೆ.

ಮೊದಲ ಟೆಸ್ಟ್‌ ಆಡಲಿಳಿದ ಮಾರ್ಕ್‌ ಅಡೈರ್‌ 32ಕ್ಕೆ 3, ಬಾಯ್ಡ ರ್‍ಯಾಂಕಿನ್‌ 5 ರನ್ನಿಗೆ 2 ವಿಕೆಟ್‌ ಕಿತ್ತು ಇಂಗ್ಲೆಂಡ್‌ ಕತೆ ಮುಗಿಸಿದರು.

ಲಾರ್ಡ್ಸ್‌ನಲ್ಲಿ ಮೊದಲ ಕಳಂಕ
ಇದು ಲಾರ್ಡ್ಸ್‌ ಟೆಸ್ಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ಮೊದಲ ದಿನದಾಟದ ಭೋಜನ ವಿರಾಮಕ್ಕೂ ಮೊದಲು ಆಲೌಟ್‌ ಆದ ಮೊದಲ ನಿದರ್ಶನ.

ಹಾಗೆಯೇ ಕಳೆದ 3 ವರ್ಷಗಳಲ್ಲಿ ಟೆಸ್ಟ್‌ ಪಂದ್ಯದ ಒಂದೇ ಅವಧಿಯ ಆಟದಲ್ಲಿ ಇಂಗ್ಲೆಂಡ್‌ ತನ್ನೆಲ್ಲ ವಿಕೆಟ್‌ ಉದುರಿಸಿಕೊಂಡ 4ನೇ ದೃಷ್ಟಾಂತ. 1997ರ ಬಳಿಕ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ದಾಖಲಿಸಿದ ಕನಿಷ್ಠ ಸ್ಕೋರ್‌ ಇದಾಗಿದೆ. ಇದು ತವರಿನಲ್ಲಿ ಇಂಗ್ಲೆಂಡ್‌ ದಾಖಲಿಸಿದ 9ನೇ ಕನಿಷ್ಠ ಗಳಿಕೆ. ಎಸೆತಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡಿನ 5ನೇ ಅತ್ಯಂತ ಸಣ್ಣ ಇನ್ನಿಂಗ್ಸ್‌. ಅಂದಹಾಗೆ ಇದು ಐರ್ಲೆಂಡ್‌ ಆಡುತ್ತಿರುವ ಕೇವಲ 3ನೇ ಟೆಸ್ಟ್‌ ಪಂದ್ಯ!

Advertisement

ಇಂಗ್ಲೆಂಡ್‌ ಪರ 23 ರನ್‌ ಮಾಡಿದ ಜೋ ಡೆನ್ಲಿ ಅವರದೇ ಹೆಚ್ಚಿನ ಗಳಿಕೆ. ಜಾಸನ್‌ ರಾಯ್‌, ಓಲೀ ಸ್ಟೋನ್‌ ಪಾಲಿಗೆ ಇದು ಮೊದಲ ಟೆಸ್ಟ್‌ ಆಗಿತ್ತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌
ಜೋ ಬರ್ನ್ಸ್ ಸಿ ವಿಲ್ಸನ್‌ ಬಿ ಮುರ್ತಗ್‌ 6
ಜಾಸನ್‌ ರಾಯ್‌ ಸಿ ಸ್ಟರ್ಲಿಂಗ್‌ ಬಿ ಮುರ್ತಗ್‌ 5
ಜೋ ಡೆನ್ಲಿ ಎಲ್‌ಬಿಡಬ್ಲ್ಯು ಅಡೈರ್‌ 23
ಜೋ ರೂಟ್‌ ಎಲ್‌ಬಿಡಬ್ಲ್ಯು ಅಡೈರ್‌ 2
ಜಾನಿ ಬೇರ್‌ಸ್ಟೊ ಬಿ ಮುರ್ತಗ್‌ 0
ಮೊಯಿನ್‌ ಅಲಿ ಸಿ ವಿಲ್ಸನ್‌ ಬಿ ಮುರ್ತಗ್‌ 0
ಕ್ರಿಸ್‌ ವೋಕ್ಸ್‌ ಎಲ್‌ಬಿಡಬ್ಲ್ಯು ಮುರ್ತಗ್‌ 0
ಸ್ಯಾಮ್‌ ಕರನ್‌ ಸಿ ಮೆಕಲಮ್‌ ಬಿ ರ್‍ಯಾಂಕಿನ್‌ 18
ಸ್ಟುವರ್ಟ್‌ ಬ್ರಾಡ್‌ ಸಿ ವಿಲ್ಸನ್‌ ಬಿ ರ್‍ಯಾಂಕಿನ್‌ 3
ಓಲೀ ಸ್ಟೋನ್‌ ಬಿ ಅಡೈರ್‌ 19
ಜಾಕ್‌ ಲೀಚ್‌ ಔಟಾಗದೆ 1
ಇತರ 8
ಒಟ್ಟು (23.4 ಓವರ್‌ಗಳಲ್ಲಿ ಆಲೌಟ್‌) 85
ವಿಕೆಟ್‌ ಪತನ: 1-8, 2-36, 3-36, 4-42, 5-42, 6-42, 7-43, 8-58, 9-67.
ಬೌಲಿಂಗ್‌: ಟಿಮ್‌ ಮುರ್ತಗ್‌ 9-2-13-5
ಮಾರ್ಕ್‌ ಅಡೈರ್‌ 7.4-1-32-3
ಸ್ಟುವರ್ಟ್‌ ಥಾಮ್ಸನ್‌ 4-1-30-0
ಬಾಯ್ಡ ರ್‍ಯಾಂಕಿನ್‌ 3-1-5-2

ಜವಾಬು ನೀಡಲಾರಂಭಿಸಿದ ಐರ್ಲೆಂಡ್‌ 7 ವಿಕೆಟಿಗೆ 149 ರನ್‌ ಗಳಿಸಿ ಮೊದಲ ದಿನದಾಟ ಮುಂದುವರಿಸುತ್ತಿದೆ. ಆ್ಯಂಡಿ ಬಾಲ್ಬಿರ್ನಿ 55 ರನ್‌ ಕೊಡುಗೆ ಸಲ್ಲಿಸಿದರು.


Advertisement

Udayavani is now on Telegram. Click here to join our channel and stay updated with the latest news.

Next