Advertisement
ಮೊದಲ ಅವಧಿಯಲ್ಲಿ ಸ್ಪೇನ್ ಮೇಲುಗೈ: ಕೂಟದಲ್ಲಿ ಈ ಹಿಂದಿನ ಎಲ್ಲಾ ಪಂದ್ಯಗಳನ್ನು ಗಮನಿಸಿದಾಗ ಇಂಗ್ಲೆಂಡ್ ಮತ್ತು ಸ್ಪೇನ್ ಎರಡೂ ತಂಡಗಳು ಬಲಿಷ್ಠವಾಗಿದ್ದವು. ಇದರಿಂದಾಗಿ ಪಂದ್ಯದ ಮೇಲೆ ಅಭಿಮಾನಿಗಳ ಕ್ರೇಜ್ ಹೆಚ್ಚಾಗಿತ್ತು. ಯಾವ ತಂಡ ಗೆಲುವು ಪಡೆದರೂ ಅ-17 ವಿಶ್ವಕಪ್‌ಗೆ ಚೊಚ್ಚಲ ಚಾಂಪಿಯನ್ ಪಟ್ಟವಾಗಿತ್ತು.
ಇದರಿಂದ ವಿಚಲಿತರಾದಂತೆ ಕಂಡುಬಂದ ಇಂಗ್ಲೆಂಡ್ ಆಟಗಾರರು ಆಟವನ್ನು ಚುರುಕಾಗಿಸಿದರು. ಇದರ ಫಲವಾಗಿ 44ನೇ ನಿಮಿಷದಲ್ಲಿ ರೈಯಾನ್ ಬ್ರೆಸ್ಟರ್ ಗೋಲು ದಾಖಲಿಸಿ ಇಂಗ್ಲೆಂಡ್ ತಂಡದ ಗೋಲಿನ ಖಾತೆ ತೆರೆಸಿದರು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಸ್ಪೇನ್ 2-1 ಗೋಲುಗಳಿಂದ ಮುನ್ನಡೆ ಪಡೆದಿತ್ತು.
ತಿರುಗೇಟು ನೀಡಿದ ಇಂಗ್ಲೆಂಡ್: ಮೊದಲ ಅವಧಿಯಲ್ಲಿ ಮುನ್ನಡೆ ಪಡೆದಿದ್ದ ಸ್ಪೇನ್ ತಂಡಕ್ಕೆ ಇಂಗ್ಲೆಂಡ್ 2ನೇ ಅವಧಿಯಲ್ಲಿ ಶಾಕ್ ನೀಡಿತು. 58ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಮಾರ್ಗನ್ ಗಿಬ್ಸ್ ವೈಟ್ ಗೋಲು ಸಿಡಿಸಿದರು. ಇದರಿಂದ ಇಂಗ್ಲೆಂಡ್ 2-2ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇಲ್ಲಿಯವರೆಗೂ ಉತ್ಸಾಹದಲ್ಲಿದ್ದ ಸ್ಪೇನ್ ಕುಗ್ಗಿತು. ಅದೃಷ್ಟ ಕೈಕೊಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ಅದು 69ನೇ ನಿಮಿಷದಲ್ಲಿಯೇ ಸಾಬೀತಾಯಿತು.
69ನೇ ನಿಮಿಷದಲ್ಲಿ ಪಾಸ್ ಆಗಿ ಬಂದ ಚೆಂಡನ್ನು ಇಂಗ್ಲೆಂಡ್‌ನ ಫಿಲಿಪ್ ಫೋರ್ಡೆನ್ ಸ್ಪೇನ್‌ನ ಗೋಲು ಕೀಪರ್ ವಂಚಿಸಿ ಚೆಂಡನ್ನು ಬಲೆಯೊಳಗೆ ಸೇರಿಸಿದರು. ಈ ಸಂದರ್ಭದಲ್ಲಿಯೇ ಇಂಗ್ಲೆಂಡ್ ಪಂದ್ಯವನ್ನು ಗೆದ್ದಷ್ಟೇ ಸಂಭ್ರಮಿಸಿದರು.ನಂತರದ ಹಂತದಲ್ಲಿ ಇಂಗ್ಲೆಂಡ್ ಆಟಗಾರರು ಆಡಿದ್ದೆ ಆಟವಾಯ್ತು. ಇವರ ಅಬ್ಬರಕ್ಕೆ ಸ್ಪೇನ್ ಆಟಗಾರರು ದಿಕ್ಕು ತೋಚದಂತಾಗಿ ನಿರಾಶರಾದರು. ಇಂಗ್ಲೆಂಡ್ ಪರ 88ನೇ ನಿಮಿಷದಲ್ಲಿ ಫಿಲಿಪ್ ಫೋರ್ಡೆನ್ ಮತ್ತೂಂದು ಗೋಲು ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ನಂತರ 84ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಮಾರ್ಕ್ ಮತ್ತೂಂದು ಗೋಲು ಸಿಡಿಸಿದರು. ಇಲ್ಲಿಗೆ ಸ್ಪೇನಿನ ಅಳಿದುಳಿದ ಆಶೆಯೂ ನಾಶವಾಯಿತು.