ಬೆಂಗಳೂರು: ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಬಿ.ಫಾರ್ಮಾ, ಡಿ.ಫಾರ್ಮಾ ಹಾಗೂ ಕೃಷಿ ಸಂಬಂಧಿಸಿದ ಕೋರ್ಸ್‌ಗಳ 2ನೇ ಸುತ್ತಿನ ಸೀಟು ಹಂಚಿಕೆ, ಆಪ್ಷನ್ ಎಂಟ್ರಿ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಈಗಾಗಲೇ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳಿಗೆ ನೀಟ್ ರ್‍ಯಾಂಕಿಂಗ್ ಆಧಾರದಲ್ಲಿ ಜು.17, 18ರಂದು ದಾಖಲಾತಿ ಪರಿಶೀಲನೆ ನಡೆಯಲಿದೆ. ಜು.16ರ ಬೆಳಗ್ಗೆ 11ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ.
ಅಂದು ಸಂಜೆ 4ರಿಂದ ಜು.19ರ ಮಧ್ಯಾಹ್ನ 1 ಗಂಟೆವರೆಗೆ ಅರ್ಹರಿಗೆ ಆಯ್ಕೆಗಳನ್ನು ಬದಲಾಯಿಸಲು ಅವಕಾಶವಿದೆ. ಜು.21ರಂದು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳು 4 ಆಯ್ಕೆಯಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಲು ಜು.23ರ ಮಧ್ಯಾಹ್ನ 1 ಗಂಟೆವರೆಗೂ ಅವಕಾಶವಿದೆ.
ಆಯ್ಕೆ-1 ಅಥವಾ ಆಯ್ಕೆ-2 ಮಾಡಿಕೊಂಡಿರುವ ಅಭ್ಯರ್ಥಿಗಳಲ್ಲಿ ಆಯ್ಕೆ-1ನ್ನು ಆಯ್ಕೆ ಮಾಡಿದವರು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಯ್ಕೆ 1 ಮತ್ತು ಚಾಯ್ಸ 2 ಮಾಡಿರುವ ಎಲ್ಲಾ ಅಭ್ಯರ್ಥಿಗಳು ಜು.24ರೊಳಗೆ ಶುಲ್ಕ ಪಾವತಿಸಬೇಕು. ಆಯ್ಕೆ 1 ಅನ್ನು ಮಾಡಿದ ಅಭ್ಯರ್ಥಿಗಳು ಜು.25ರೊಳಗೆ ಸಂಬಂಧಪಟ್ಟ ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಆಯುಷ್ ಸೀಟು ಹಂಚಿಕೆ: ಸರ್ಕಾರ ಆಯುಷ್ ಕೋರ್ಸ್‌ಗಳಿಗೆ(ಆಯುರ್ವೇದ, ಯೋಗ-ನ್ಯಾಚುರೋಪಥಿ, ಯುನಾನಿ, ಹೋಮಿಯೋಪಥಿ) ಸೀಟ್ ಮ್ಯಾಟ್ರಿಕ್ಸ್ ನೀಡಿದ್ದು, ಯುಜಿ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ನೀಟ್ ರೋಲ್ ನಂಬರ್ ನಮೂದಿಸಿ ಈಗಾಗಲೇ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವ ಅಭ್ಯರ್ಥಿಗಳು ಇನ್ನೊಮ್ಮೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ದಾಖಲಾತಿ ಪರಿಶೀಲನೆ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳು ಜು.17, 18ರಂದು ಸಂಬಂಧಪಟ್ಟ ಸಹಾಯವಾಣಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.