Advertisement

Rashid: ಜೈಲಿನಲ್ಲಿದ್ದೇ ಗೆದ್ದ ಇಂಜಿನಿಯರ್‌ ರಶೀದ್‌… ಓಮರ್‌ ಅಬ್ದುಲ್ಲಾಗೆ ಸೋಲು

08:24 PM Jun 04, 2024 | Team Udayavani |

ಶ್ರೀನಗರ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ತಿಹಾರ್‌ ಜೈಲಿನಲ್ಲಿರುವ ಜಮ್ಮು -ಕಾಶ್ಮೀರದ ಮಾಜಿ ಶಾಸಕ ಶೇಖ್‌ ಅಬ್ದುಲ್‌ ರಶೀದ್‌, ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Advertisement

ಅಲ್ಲದೇ, ತಮ್ಮ ವಿರುದ್ಧ ಸ್ಪರ್ಧಿಸಿದ್ದ ಕಣಿವೆಯ ಮಾಜಿ ಸಿಎಂ ಓಮರ್‌ ಅಬ್ದುಲ್ಲಾ ಅವರಿಗೆ ಸೋಲುಣಿಸಿದ್ದಾರೆ. ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಶೀದ್‌ ಕಣಿವೆಯಲ್ಲಿ ಇಂಜಿನಿಯರ್‌ ರಶೀದ್‌ ಎಂದೇ ಪ್ರಸಿದ್ಧರಾಗಿದ್ದಾರೆ. 2019ರಲ್ಲಿ ಯುಎಪಿಎ ಅನ್ವಯ ಕಾಯ್ದೆ ಅನ್ವಯ ಬಂಧನಕ್ಕೀಡಾಗಿರುವ ಇವರ ಪರವಾಗಿ ಅವರ ಪುತ್ರರೇ ಪ್ರಚಾರ ನಡೆಸಿದ್ದರು.

ಇದನ್ನೂ ಓದಿ: Modi, ಶಾ ಪ್ರಚಾರ ಮಾಡಿದ ಸ್ಥಳಗಳಲ್ಲಿ ಬಿಜೆಪಿಗೆ ಭರ್ಜರಿ ಜಯ

Advertisement

Udayavani is now on Telegram. Click here to join our channel and stay updated with the latest news.

Next