ಬೇತಮಂಗಲ: ಇಲ್ಲಿನ ಬ್ಯಾಟರಾಯನಹಳ್ಳಿ ಗ್ರಾಮದ ದೇಗುಲ ಆವರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಭಾಸ್ಕರ್ ಫೌಂಡೇಷನ್ ಸಂಸ್ಥೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೂಲಿ ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಗಾರೆ ಕೆಲಸ ದವರು, ಎತ್ತರ ಕಟ್ಟಡಗಳ ನಿರ್ಮಾಣದ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದುಕೊಂಡರು. ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸುವ ಮೂಲಕ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ಕೆಲಸದ ವೇಳೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಭಾಸ್ಕರ್ ಫೌಂಡೇಷನ್ ವ್ಯವಸ್ಥಾಪಕ ವಾಸು ದೇವಗುಣ ಹೇಳಿದರು.
ಮಂಗಳವಾರ ಜಕ್ಕರಸನಕುಪ್ಪ, ಮರ ದಗಟ್ಟ ಗ್ರಾಮ, ಬುಧವಾರ ಬ್ಯಾಟರಾಯನಹಳ್ಳಿ, ಕೆ.ಸಿ.ರೆಡ್ಡಿ ಗಾಂಡ್ಲಹಳ್ಳಿ, ಗುರುವಾರ ಮಾದನಾಯಕನಹಳ್ಳಿ, ರಾಮ ಸಾಗರದಲ್ಲಿ ತರಬೇತಿ ಹಮ್ಮಿ ಕೊಂಡಿ ರುವುದಾಗಿ ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವ ಕಾರ್ಮಿಕರಿಗೆ 750 ರೂ. ಸಹಾಯಧನ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ;- ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲು ಪೊಲೀಸ್ ಸುತ್ತೋಲೆ; ಗೃಹ ಸಚಿವರ ದೌಡು
ಫೌಂಡೇ ಷನ್ ಜಿಲ್ಲಾ ಸಂಯೋಜಕ ರತ್ನಪ್ಪ, ಸಿವಿಲ್ ಎಂಜಿನಿಯರ್ ರಮೇಶ್, ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ, ಹೋಬಳಿ ಅಧ್ಯಕ್ಷ ಗಂಗಿರೆಡ್ಡಿ, ಕಾರ್ಮಿಕ ಮುಖಂಡರಾದ ಶ್ರೀರಾಮ್, ಶಂಕರ್‌ರೆಡ್ಡಿ, ತಿಪ್ಪಣ್ಣ, ನಾಗರಾಜ್, ಅಪ್ಪಿ, ಕೃಷ್ಣಪ್ಪ, ರವಿ, ಕೊದಂಡಪ್ಪ, ಶ್ರೀನಿವಾಸ್, ವೆಂಕಟ ರಾಂ, ಗೋವಿಂದಪ್ಪ, ನಾಗಪ್ಪ, ಆನಂದ್, ಮೇಸಿŒಗಳು, ಕೂಲಿ ಕಾರ್ಮಿಕರು ಭಾಗವಹಿಸಿದ್ದರು.