Advertisement
ನಾಗರಾಜ್ ಅವರು ಮೂಲತ ಕೃಷಿ ಕುಟುಂಬದಿಂದ ಬರದೇ ಇದ್ದರೂ ತಮ್ಮ ಕಾಲೇಜು ಜೀವನದಲ್ಲಿಯೇ ಬೇರೆಯವರ ಭೂಮಿಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಬಿ.ಎಸ್.ಸಿ ಕೃಷಿ ಪದವಿ ಮಾಡಬೇಕೆಂಬ ಕನಸನ್ನು ಹೊತ್ತರೂ ಅದು ಫಲಿಸದೇ ಬಿ.ಇ ಪದವಿ ಮುಗಿಸಿ ಬೆಂಗಳೂರಲ್ಲಿ ಎಂಜನೀಯರ್ ಆಗಿ ಕಳೆದ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ನಾಗರಾಜ್ ವಾರದಲ್ಲಿ ಶನಿವಾರ ಒಂದು ದಿನ ಪೂರ್ತಿ ಹಾಗೂ ನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಫಾರ್ಮ್ನಲ್ಲಿ ನೀರು ಹರಿಸುತ್ತಾರೆ. ಕಳೆ ಕೀಳುವ ಕೆಲಸದಲ್ಲಿ ತಲ್ಲೀನರಾಗುತ್ತಾರೆ. 4 ಎಕರೆಯಲ್ಲಿ 1,000 ಹೂಕೋಸು, ಒಂದೂವರೆ ಎಕರೆಯಲ್ಲಿ ಬೆಂಡೆ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಉಳಿದಂತೆ ಕ್ಯಾರೆಟ್, ಹಾಗಲಕಾಯಿ, ಹೀರೆಕಾಯಿ, ನುಗ್ಗೆಕಾಯಿ, ಉರುಳಿಕಾಯಿ ,ಮೆಂತ್ಯ ಹಾಗೂ ದಂಟಿನ ಸೊಪ್ಪು, ಕೊತ್ತಂಬರಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ವರ್ಷಕ್ಕೆ ಖರ್ಚು ಎಲ್ಲಾ ಖರ್ಚು ತೆಗೆದರೂ 2 ಲಕ್ಷ ರೂಗಳ ನಿವ್ವಳ ಆದಾಯ.
Related Articles
Advertisement
ಇನ್ನೊಂದು ವಿಶೇಷ ಎಂದರೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ ಇವರು ಬೆಂಗಳೂರಿನ ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್‌ಗಳ ಸುಮಾರು 100 ಮಧ್ಯಮ ವರ್ಗ ಕುಟುಂಬಗಳಿಗೆ ಹಾಪ್ ಕಾಮ್ಸ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ವ್ಯಾಟ್ಸ್ ಆಫ್ ಗುಂಪು ಸಹ ಮಾಡಿಕೊಂಡಿದ್ದಾರೆ. “ಮಧ್ಯಮ ವರ್ಗದ ಜನರಿಗೆ ವಿಷರಹಿತ ಶುದ್ಧ ತರಕಾರಿ ಹಾಗೂ ಹಣ್ಣು ತಲುಪಿಸುವ ಮಹಾದಾಸೆ ನನ್ನದು’ ಎನ್ನುತ್ತಾರೆ ನಾಗರಾಜ್.
– ಗುರುರಾಜ.ಬ.ಕನ್ನೂರ.ಆರೂಢನಂದಿಹಾಳ.