Advertisement

ಸಮಾಜ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ : ಸುರೇಶ್‌

07:45 AM Jul 27, 2017 | Team Udayavani |

ಕಿನ್ನಿಗೋಳಿ: ಸಮಾಜದಲ್ಲಿ ಪರಸ್ಪರ ಸ್ನೇಹ, ಸೌಹಾರ್ದವನ್ನು ಬೆಳೆಸಿ, ಸೇವೆಗಾಗಿ ಅದರ ಲಾಭವನ್ನು ವಿನಿಯೋಗಿಸಿ ಸಮಾಜ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿಯ 3181 ಜಿಲ್ಲಾ ಗರ್ವನರ್‌ ಎಂ.ಎಂ.ಸುರೇಶ್‌ ಚೆಂಗಪ್ಪ ಹೇಳಿದರು. 

Advertisement

ಅವರು ಜು.25 ರಂದು ಕಿನ್ನಿಗೋಳಿ ರೋಟರಿಯ ರಜತ ಭವನದಲ್ಲಿ ಕಿನ್ನಿಗೋಳಿಯ ರೋಟರಿ ಕ್ಲಬ್‌ ಅಧಿಕೃತ ಭೇಟಿ ಸಂದರ್ಭದಲ್ಲಿ ಮಾತನಾಡಿದರು. 

ಸಹಾಯಕ ಗವರ್ನರ್‌ ಜೊಸ್ಸಿ ಪಿಂಟೋ ಪರಿಸರ ಜಾಗೃತಿ ಹಾಗೂ ಮಾರಕ ರೋಗ ತಡೆಗೆಟ್ಟುವಿಕೆಯ ಬಗ್ಗೆ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ, ರೋಟರಿಯಂತಹ ಸೇವಾ ಸಂಸ್ಥೆಗಳು ಜನಪರವಾಗಿ ಸೇವೆ ನೀಡುತ್ತ ಸಮಾಜ ದಲ್ಲಿ ಗೌರವ ಸಂಪಾದನೆ ಮಾಡಿವೆ ಎಂದರು. 

ವಲಯ ಸೇನಾನಿ ಬಾಲಚಂದ್ರ ಸನಿಲ್‌ ರೋಟರಿಯ ಮುಖವಾಣಿ ಸಿಂಚನವನ್ನು ಬಿಡುಗಡೆಗೊಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. 
ನಿಕಟಪೂರ್ವ ಅಧ್ಯಕ್ಷ  ರಮಾನಂದ ಪೂಜಾರಿ, ರೋಟರಿ ಜಿಲ್ಲೆಯ ಪ್ರಥಮ ಮಹಿಳೆ  ದಮಯಂತಿ  ಉಪಸ್ಥಿತರಿ ದ್ದರು. ಅಧ್ಯಕ್ಷೆ ಸೆವ್ರಿನ್‌ ಲೋಬೋ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್‌ ಆಚಾರ್ಯ ವರದಿ ವಾಚಿಸಿದರು. ಎಸ್‌.ವಿ. ಶೆಣೈ, ಹೆರಿಕ್‌ ಪಾಯಸ್‌ ಪರಿಚಯಿಸಿದರು. ಸ್ವರಾಜ್‌ ಶೆಟ್ಟಿ  ವಂದಿಸಿದರು. ವೇದವ್ಯಾಸ ಉಡುಪ ಕಾರ್ಯಕ್ರಮ ನಿರೂಪಿಸಿದರು.

ಟಿಬಿ ಕಾಯಿಲೆ ಮುಕ್ತಗೊಳಿಸಲು ಯೋಜನೆ 
112 ವರ್ಷ ಇತಿಹಾಸವಿರುವ ರೋಟರಿ ಸಂಸ್ಥೆ ದೇಶ, ವಿದೇಶಗಳಲ್ಲಿ ವ್ಯಾಪಿಸಿ ಕೊಂಡಿದ್ದು, ಪೋಲಿಯೋ ಮುಕ್ತ ಮಾಡುವಲ್ಲಿ ಸಂಸ್ಥೆ ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದೆ. ಭಾರತ ದೇಶ ಪೋಲಿಯೋ ಮುಕ್ತ ದೇಶವಾಗಿದೆ ಎಂದು ರೋಟರಿಯ ಗವರ್ನರ್‌ ಎಂ.ಎಂ. ಸುರೇಶ್‌ ಚೆಂಗಪ್ಪ  ಹೇಳಿದರು. ಅವರು ಕಿನ್ನಿಗೋಳಿ ದುರ್ಗಾ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಲ ದೇಶವನ್ನು ಟಿಬಿ ಕಾಯಿಲೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ  ಅಧಿಕಾರಿ ವರ್ಗ ಹಾಗೂ ವೈದ್ಯಕೀಯ ಸಲಹೆಗಾರರನ್ನು ಸೇರಿಸಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಹಾಗೂ ರೋಟರಿ ಜಿಲ್ಲೆಯಲ್ಲಿ  ಪರಿಸರ ಜಾಗೃತಿಯ ಬಗ್ಗೆ  ಲಕ್ಷ ಸಸಿ ನೆಡುವ‌ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿದ್ಯುತ್‌ ಸಂಪರ್ಕ ಇಲ್ಲದ ಮನೆಗಳಿಗೆ ಅದ್ಯತೆ ಮೇರೆಗೆ ಸೋಲಾರ್‌ ದೀಪ ಅಳವಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ರೋಟರಿಯ ಸತೀಶ್‌ ರಾವ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next