Advertisement

ಸೇನಾ ಸಮವಸ್ತ್ರದಲ್ಲಿ ಏಕರೂಪತೆ ಜಾರಿ

09:46 PM Aug 01, 2023 | Team Udayavani |

ನವದೆಹಲಿ: ಭಾರತೀಯ ಭೂಸೇನೆಯಲ್ಲಿ ಸಂಪೂರ್ಣ ಏಕರೂಪತೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಬ್ರಿಗೇಡಿಯರ್‌ ಮತ್ತು ಮೇಲಿನೆಲ್ಲ ಹುದ್ದೆಗಳಿಗೆ ಒಂದೇ ರೀತಿಯ ಸಮವಸ್ತ್ರ ಜಾರಿ ಮಾಡಲಾಗಿದೆ. ಇತ್ತೀಚೆಗೆ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭೂಸೇನಾ ಮೂಲಗಳು ಹೇಳಿವೆ.

Advertisement

ಏನು ಬದಲಾವಣೆ?:
ಬ್ರಿಗೇಡಿಯರ್‌, ಮೇಜರ್‌ ಜನರಲ್‌, ಲೆಫ್ಟಿನೆಂಟ್‌ ಜನರಲ್‌, ಜನರಲ್‌ ಸೇರಿದಂತೆ ಎಲ್ಲ ಮಹತ್ವದ ಹುದ್ದೆಗಳಲ್ಲಿ ಒಂದೇ ರೀತಿಯ ಸಮವಸ್ತ್ರವಿರುತ್ತದೆ. ಅವರು ಯಾವ ಹುದ್ದೆಯಲ್ಲಿದ್ದಾರೆಂದು ತಿಳಿಸುವ ರ್‍ಯಾಂಕ್‌ ಬ್ಯಾಡ್ಜ್ಗಳು, ಕಾಲರ್‌ನಲ್ಲಿ ಧರಿಸುವ ಪಟ್ಟಿ (ಗಾರ್ಜೆಟ್‌ ಪ್ಯಾಚಸ್‌), ಶೂಗಳು, ಬೆಲ್ಟ್‌ಗಳು ಒಂದೇ ರೀತಿಯಲ್ಲಿರುತ್ತವೆ. ಈ ಹಿಂದೆ ಬ್ರಿಗೇಡಿಯರ್‌ಗಳು ಧರಿಸುತ್ತಿದ್ದ ಸಮವಸ್ತ್ರ ಅವರು ಯಾವ ರೆಜಿಮೆಂಟ್‌ಗಳಲ್ಲಿದ್ದಾರೆ, ಯಾವ ಉದ್ದೇಶಕ್ಕೆ ನಿಯೋಜಿಸಲ್ಪಟ್ಟಿದ್ದಾರೆ ಎಂಬ ಆಧಾರದಲ್ಲಿ ನಿರ್ಧಾರವಾಗುತ್ತಿತ್ತು. ಈಗ ಅವೆಲ್ಲವನ್ನೂ ಬದಲಿಸಿ ಏಕರೂಪತೆ ತರಲಾಗಿದೆ.

ಕೇವಲ ಭೂಸೇನೆಯಲ್ಲಿ ಮಾತ್ರವಲ್ಲ ಕಾಲಕ್ರಮೇಣ ನೌಕಾಪಡೆ ಮತ್ತು ವಾಯುಪಡೆಗಳಲ್ಲೂ ಇಂತಹದ್ದೊಂದು ಬದಲಾವಣೆ ತರುವ ಉದ್ದೇಶ ಸರ್ಕಾರಕ್ಕಿದೆ. ಈ ಮೂರೂ ಪಡೆಗಳನ್ನು ಬೆಸೆಯುವ ಮಾರ್ಗದಲ್ಲಿ ಇದೊಂದು ಮಹತ್ವದ ಹೆಜ್ಜೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next