ವಿಜಯಪುರ: ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮಸೂದೆ ಮಂಡಿಸುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದ ಹೊರ ವಲಯದ ಭೂತನಾಳ ಬಳಿ ಇರಿವ ಕೆಎಂಎಫ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದಲ್ಲಿ ಉಂಟಾಗುವ ಸಾಧಕ, ಬಾಧಕಗಳ ಕುರಿತು ಅಧ್ಯಯನ ನಡೆಸಲು ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಇದನ್ನೂ ಓದಿ:ಸುಮಲತಾ ಅವರು ನಾಗರಹಾವು ಸಿನಿಮಾದ ಜಲೀಲ ನೆನಪಾಗಿ ಡೈಲಾಗ್ ಹೇಳಿದ್ದಾರೆ: ಪ್ರತಾಪ್ ಸಿಂಹ
ಸದರಿ ಸಮಿತಿ ಈಗಾಗಲೇ ಗೋಹತ್ಯೆ ನಿಷೇಧಿಸಿರುವ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ವರದಿ ಬರುತ್ತಲೇ ಪರಿಶೀಲನೆ ನಡೆಸಿ, ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಕಸಾಯಿಖಾನೆಗೆ ಗೋವುಗಳು ಹೋಗದಂತೆ ತಡೆಯಬೇಕಿದೆ. ಗೋವು ನಮ್ಮೆರನ್ನು ಸಲಹುವ ಮಾತೆ. ಆಕೆಯ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಎಂದರು.