Advertisement

ಕರ್ವಾಲು ಭೇಟಿಯಿಂದ ಚೈತನ್ಯ: ರವಿಶಾಸ್ತ್ರಿ

03:45 AM Mar 02, 2017 | Team Udayavani |

ಕಾರ್ಕಳ : ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ಮತ್ತು ಇಲ್ಲಿನ ಜನತೆಯ ಆತ್ಮೀಯತೆಯು ತನಗೆ ವಿಶೇಷ ಸ್ಫೂರ್ತಿ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತಿದೆ ಎಂದು ಖ್ಯಾತ ಕ್ರಿಕೆಟ್‌ ವೀಕ್ಷಕ ವಿವರಣೆಗಾರ, ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ಹೇಳಿದರು.

Advertisement

ಶ್ರೀ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿದ ಅವರು ಶ್ರೀ ದೇವರಿಗೆ ಹೂವಿನ ಪೂಜೆ, ನಾಗಬನದಲ್ಲಿ ಪಂಚಾಮೃತಾಭಿಷೇಕ ಪೂಜಾ ಸೇವೆ ಅರ್ಪಿಸಿದರು. (ಕೆಲವು ತಲೆಮಾರುಗಳ ಹಿಂದೆ ರವಿ ಅವರ ಪೂರ್ವಿಕರು ಕರ್ವಾಲಿನವರಾಗಿದ್ದರು). ಪ್ರತೀ ಭೇಟಿಯೂ ತನ್ನ ಪಾಲಿಗೆ ಆಹ್ಲಾದಕರವಾಗಿದೆ. ಚೈತನ್ಯ ತುಂಬುತ್ತದೆ. ಇದರ ಫಲಿತಾಂಶವನ್ನು ಮುಂದಿನ ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ತನ್ನ ವಿವರಣೆಯಲ್ಲಿ ನೀವು ಗಮನಿಸಲಿದ್ದೀರಿ ಎಂದರು!

ಕ್ರಿಕೆಟ್‌ ಬಗ್ಗೆ ಅವರು ಹೆಚ್ಚು ಮಾತನಾಡಲಿಲ್ಲ. ಆದರೆ, ಆಸ್ಟ್ರೇಲಿಯ ಎದುರಿನ ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಕರ್ವಾಲು ಕ್ಷೇತ್ರದ ಬಗ್ಗೆ ತನಗೆ ಅಪಾರ ಅಭಿಮಾನವಿದೆ. ಈ ಊರ ಜನತೆಗೆ ಸದಾ ಒಳಿತಾಗಲಿ ಎಂದು ಹಾರೈಸಿದರು. ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ರವಿಶಾಸ್ತಿÅ ಅವರ ಬಂಧು ಮನೋಹರ ಪ್ರಸಾದ್‌ ಅವರು ಅಭಿನಂದನಾ ಭಾಷಣವಿತ್ತರು.

ಗೌರವಾಧ್ಯಕ್ಷ ಎಚ್‌. ಯುವರಾಜ್‌ ನಾಯ್ಕ, ಅಧ್ಯಕ್ಷ ಭೋಜ ಶೆಟ್ಟಿ, ಪದಾಧಿಕಾರಿಗಳಾದ ಕೆ. ಅನಂತ ಪಟ್ಟಾಭಿರಾವ್‌, ಕೆ. ಹರಿಶ್ಚಂದ್ರ ರಾವ್‌, ಸತೀಶ್‌ ಶೆಟ್ಟಿ, ಸುಧಾಕರ ಹೆಗ್ಡೆ ಅವರು ಸಮ್ಮಾನಿಸಿದರು. ಡಾ | ಸಂತೋಷ್‌ಕುಮಾರ್‌ ಶಾಸ್ತಿÅ, ವಾಸುದೇವ ಪೆಜತ್ತಾಯ ಉಪಸ್ಥಿತರಿದ್ದರು.

ಕರ್ವಾಲು ಭೋಜನ
ಕರ್ವಾಲು ದೇವಸ್ಥಾನದಲ್ಲಿ ರವಿಶಾಸ್ತ್ರಿ ಅವರು ತಮ್ಮ ಮೆಚ್ಚಿನ ಕರ್ವಾಲು ಭೋಜನ ಸ್ವೀಕರಿಸಿದರು: ಕೊಸಂಬರಿ, ಅನ್ನ, ಸಾರು, ಹಪ್ಪಳ, ಗುಜ್ಜೆ ಕಡ್ಲೆ ಗಸಿ, ಅನಾನಸು ಮೆಣಸ್ಕಾಯಿ, ಕುಕ್ಕು ಉಪ್ಪಡ್‌, ಗುಳ್ಳ ಕೊದ್ದೆಲ್‌, ಮುಂಚಿ ಪೋಡಿ, ಗಸಿ, ಹೋಳಿಗೆ- ಸಕ್ಕರೆ- ಕಾಯಿಹಾಲು, ಶೀರ, ಕಡಿ ಪಾಯಸ, ಮಜ್ಜಿಗೆ!ಶ್ರೀ ಕ್ಷೇತ್ರಕ್ಕೆ ಬಂಧು ಸಂತಾನಭಾಗ್ಯದ ಹರಕೆಯ ಅಭೀಷ್ಠೆ ಈಡೇರಿದ ಬಳಿಕ; ವರ್ಷಕ್ಕೊಮ್ಮೆ ಇಲ್ಲಿಗೆ ಬರುವುದಾಗಿ ಅವರು ಹೇಳಿದ್ದರು. ಇದು ಅವರ 8ನೇ ಭೇಟಿ. 
 
ರವಿಶಾಸ್ತ್ರೀ  ಕೊಲ್ಲೂರು ಭೇಟಿ
ಕೊಲ್ಲೂರು:
ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ರವಿಶಾಸ್ತ್ರೀ  ಅವರು ಮಾ.1ರಂದು ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ದೇವಳದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಹಾಗೂ ದೇವಳದ ಅರ್ಚಕರು ರವಿಶಾಸ್ತ್ರೀ ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next