Advertisement

ಎಂಡೋಸಲ್ಫಾನ್‌ ಸಂತ್ರಸ್ತರ ಸಮಸ್ಯೆಗೆ ತಾರ್ಕಿಕ ಅಂತ್ಯ

02:50 AM Jun 30, 2018 | Karthik A |

ಕೊಕ್ಕಡ: ಎಂಡೋ ಸಂತ್ರಸ್ತರ ದಾರುಣ ಪರಿಸ್ಥಿತಿಯನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸಿ ಎಂಡೋ ಸಂತ್ರಸ್ತರ ಬೇಡಿಕೆ ಗಳನ್ನು ಈಡೇರಿಸಿಯೇ ಸಿದ್ಧ. ಸ್ಥಳೀಯ ವಿಧಾನಪರಿಷತ್‌ ಸದಸ್ಯರನ್ನೂ ಜತೆಗೂಡಿಸಿಕೊಂಡು ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಕಾಣಿಸುವುದಾಗಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ  ಭರವಸೆ ನೀಡಿದರು. ಇಲ್ಲಿನ ಎಂಡೋ ಪಾಲನಾ ಕೇಂದ್ರದಲ್ಲಿ ಎಂಡೋ ಸಂತ್ರಸ್ತರ ವತಿಯಿಂದ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

Advertisement

ಎಂಡೋ ಸಂತ್ರಸ್ತ ಕುಟುಂಬಗಳು ಯಾತನೆಯ ಜೀವನವನ್ನು ನಡೆಸುತ್ತಿದ್ದು, ಇಂದಿನವರೆಗೂ ಸಂತ್ರಸ್ತರ ಬೇಡಿಕೆಗಳು ಈಡೇರದೇ ಉಳಿದಿರುವುದು ವಿಷಾದನೀಯ. ಶಾಸಕನಾಗಿ ಆಯ್ಕೆಗೊಳ್ಳುವ ಮೊದಲೇ ಎಂಡೋ ಸಂತ್ರಸ್ತರ ಪರವಾಗಿ ನಡೆದ ಹೋರಾಟಗಳಲ್ಲಿ ಭಾಗಿಯಾಗಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಎಂಡೋ ಸಂತ್ರಸ್ತರ ಬೇಡಿಕೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವುದಾಗಿ ನುಡಿದರು.

ಪ್ರಾಮಾಣಿಕ ಪ್ರಯತ್ನ
ಎಂಡೋ ವಿರೋಧಿ ಹೋರಾಟ ಸಮಿತಿಯ ಗೌರವ ಸಲಹೆಗಾರರಾದ ಕುಶಾಲಪ್ಪ ಗೌಡ ಪೂವಾಜೆ ಸಭಾಧ್ಯಕ್ಷತೆ ವಹಿಸಿದ್ದರು.

ಅಭಿನಂದನೆ
ಎಂಡೋ ಸಂತ್ರಸ್ತರ ಪರವಾಗಿ ಶಾಸಕ ಹರೀಶ್‌ ಪೂಂಜ ಹಾಗೂ ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರನ್ನು ಅಭಿನಂದಿಸಲಾಯಿತು. ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ವರ್ಷಗಳಿಂದ ಸಂತ್ರಸ್ತನಾಗಿ, ಎಲ್ಲ ಎಂಡೋ ಸಂತ್ರಸ್ತರ ದಾರುಣ ಪರಿಸ್ಥಿತಿಯನ್ನು ಹೋಗಲಾಡಿಸಲು ಹಲವು ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ.  ಆದರೆ ನಮ್ಮ ಬೇಡಿಕೆಗಳು ಈಡೇರಿಕೆಯಾಗದೇ ಉಳಿದಿರುವುದು ಸರಕಾರದ ಇಚ್ಛಾಶಕ್ತಿಯ ಕೊರತೆಯಾಗಿದೆ ಎಂದರು. ಶಾಸಕ ಹರೀಶ್‌ ಪೂಂಜ ಹಾಗೂ ಸ್ಥಳೀಯರೇ ಆದ ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಜತೆಯಾಗಿ ಎಂಡೋ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸ ಇದೆ ಎಂದು ನುಡಿದರು. 

ಸೇವಾಭಾರತಿ ಟ್ರಸ್ಟ್‌ನ ವಿನೋದ್‌ ಶೆಣೈ, ಮ್ಯಾನೇಜರ್‌ ಗೋಪಾಲಕೃಷ್ಣ ಭಟ್‌, ಎಂಡೋ ಹೋರಾಟ ಸಮಿತಿಯ ಸಲಹೆಗಾರ ತುಕ್ರಪ್ಪ ಶೆಟ್ಟಿ, ಹೋರಾಟ ಸಮಿತಿ ಸದಸ್ಯ ಅಲ್ಬರ್ಟ್‌ ಮಿನೇಜಸ್‌, ಮೊದಲಾದವರು ಉಪಸ್ಥಿತರಿದ್ದರು.
ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಸ್ವಾಗತಿಸಿ, ಪುರಂದರ ಗೌಡ ಕಡಿರ ವಂದಿಸಿದರು.

Advertisement

ಪ್ರಾಮಾಣಿಕ ಪ್ರಯತ್ನ
ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಂಡೋ ಬಾಧಿತ ಕುಟುಂಬಗಳು ಅನುಭವಿಸುತ್ತಿರುವ ನೋವು ದಾರುಣವಾದದ್ದು, ಸರಕಾರವು ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವ ಮೂಲಕ ಎಂಡೋ ಸಂತ್ರಸ್ತರ ಬಾಳಿನಲ್ಲಿ  ಭರವಸೆ ಮೂಡಿಸುವ ಕೆಲಸ ನಡೆಯಬೇಕಾಗಿದೆ. ವಿಧಾನಪರಿಷತ್‌ ಸದಸ್ಯನಾಗಿ ತಾನು ಜಿಲ್ಲೆಯ  ಶಾಸಕರ ಮೇಲೆ ಒತ್ತಡ ಹಾಕಿ ಇಲ್ಲಿಯ ಶಾಸಕ ಹರೀಶ್‌ ಪೂಂಜ ಅವರನ್ನು ಜತೆಗೂಡಿಸಿಕೊಂಡು ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next