Advertisement

ಎಂಡೋ ದುರಂತ ಸರಕಾರಿ ಪ್ರಾಯೋಜಿತ: ನಳಿನ್‌

03:54 PM May 28, 2017 | Team Udayavani |

ನೆಲ್ಯಾಡಿ: ಎಂಡೋ ದುರಂತ ಸರಕಾರಿ ಪ್ರಾಯೋಜಿತವಾಗಿದ್ದು ಕೂಡಲೇ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಪರಿಹಾರವನ್ನು ಒದಗಿಸಿ ಸಂತ್ರಸ್ತರಲ್ಲಿ ಧೈರ್ಯ ತುಂಬಬೇಕಾದ್ದು ಸರಕಾರದ ಕರ್ತವ್ಯ. ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವರಲ್ಲಿ ನಾನು ವಿವರಿಸಲಿದ್ದೇನೆ. ಲೋಕಸಭೆ ಮುಂದಿನ ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಿದ್ದೇನೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಶನಿವಾರ ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಕೊಕ್ಕಡ ಜೋಡುಮಾರ್ಗದಲ್ಲಿ ಬೃಹತ್‌ ಪ್ರತಿಭಟನ ಸಭೆ ಮತ್ತು ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂತ್ರಸ್ತರ ಬದುಕಿನಲ್ಲಿ ಸರಕಾರದ ಆಟ
ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ,ಎಂಡೋ ಸಂತ್ರಸ್ತರ ಬದುಕಿನಲ್ಲಿ ಸರಕಾರಗಳು ಮತ್ತು ಅಧಿಕಾರಿ  ವರ್ಗ ಆಟವಾಡುತ್ತಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಉಚ್ಚ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿವರ್ಗ ಮಾತ್ರಇಲ್ಲಿವರೆಗೂ ಸಂಪೂರ್ಣವಾಗಿ ಪರಿಹಾರ ಕೊಡುವ ಕಡೆಗೆ ಗಮನ ನೀಡಿರುವುದಿಲ್ಲ. ಯು.ಟಿ. ಖಾದರ್‌ ಅಧಿಕಾರದಲ್ಲಿದ್ದ ವೇಳೆ ಎಂಡೋ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಅಲ್ಲ ಕರ್ನಾಟಕವೇ ಮಾದರಿ ಆಗುವಂತೆ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ನಮ್ಮ ಬೇಡಿಕೆ ಈಡೇರದ ಕಾರಣ ನಾವು ಆಮರಣಾಂತ ಸತ್ಯಾಗ್ರಹದ ಹಾದಿ ಹಿಡಿಯಬೇಕಾಗಿದೆ. ಮುಖ್ಯಮಂತ್ರಿಯಾ ಆರೋಗ್ಯ ಸಚಿವರು ಸಭೆಗೆ ಬಂದು ನಮ್ಮ ಮನವಿ ಸ್ವೀಕರಿಸದೇ ಇದ್ದಲ್ಲಿ ಇದೇ ಸ್ಥಳದಲ್ಲಿ ಆಮರಣಾಂತ ಉಪವಾಸ ಕೈಗೊಳ್ಳುವುದು ನಿಶ್ಚಿತ ಎಂದರು.

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ಸಭೆಯಲ್ಲಿ ವಿಷಯ ಪ್ರಸ್ತಾವಿಸುವುದಾಗಿ ಹೇಳಿದರು.

ಪ್ರತಿಭಟನ ಸ್ಥಳಕ್ಕೆ ಎಸಿ, ಡಿಎಚ್‌ಒ: ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್‌ ಮೂರ್ತಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌, ಬೆಳ್ತಂಗಡಿ ತಹಶೀಲ್ದಾರ್‌ ತಿಪ್ಪೇಸ್ವಾಮಿ ಮಧ್ಯಾಹ್ನದ ವೇಳೆ ಮಾತುಕತೆಗಾಗಿ ಆಗಮಿಸಿದರು. ಈ ಸಂದರ್ಭ ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮತ್ತು ನ್ಯಾಯವಾದಿ ಹರೀಶ್‌ ಪೂಂಜ ಮತ್ತಿತರರು ಅಧಿಕಾರಿಗಳಲ್ಲಿ ಯಾವುದೇ ಮಾತುಕತೆ ನಡೆಸಲು ಮುಂದಾಗಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next