ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎಂಡೊಸ್ಕೊಪಿಕ್ ಥೈರಾಯ್ಡಕ್ಟಮಿ ಸೌಲಭ್ಯ ನೀಡಲಾಗುತ್ತಿದೆ. ಮಹಿಳೆಯೋರ್ವರಿಗೆ ಎಂಡೊಸ್ಕೊಪಿಕ್ ಥೈರಾಯ್ಡಕ್ಟಮಿ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.
ಎಂಡೊಸ್ಕೋಪಿಕ್ ಥೈರಾಯೆxಕ್ಟಮಿ ಕಾರ್ಯವಿಧಾನವನ್ನು ಚೆನ್ನಗಿರಿಯ 35 ವರ್ಷದ ಮಹಿಳೆಗೆ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯನ್ನು ಶಸ್ತಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥ ಡಾ| ಚೇತನ್ ಅವರು ಡಾ|
ರಿತೇಶ್ ಶೆಟ್ಟಿ ಅವರ ಸಹಯೋಗದೊಂದಿಗೆ ನಡೆಸಿದರು.
ಕರಾವಳಿ ಕರ್ನಾಟಕದÇÉೆ ಇಂತಹ ಥೈರಾಯೆxಕ್ಟಮಿ ಮೊತ್ತಮೊದಲ ಬಾರಿಯಾಗಿದೆ. ಕುತ್ತಿಗೆಯಲ್ಲಿ ಇರಿದ ಛೇದನವನ್ನು ಬಳಸಿಕೊಂಡು ತೆರೆದ ಶಸ್ತ್ರಚಿಕಿತ್ಸಾ ವಿಧಾನವನ್ನು ಥೈರಾಯ್ಡಕ್ಟಮಿ ಮಾಡಲಾಗಿದೆ. ಇದು ಪರಿಣಾಮಕಾರಿ ಮತ್ತು ಸುರಕ್ಷಿತ.
ಇದಕ್ಕಾಗಿ ಕುತ್ತಿಗೆಯಲ್ಲಿ 10-12 ಸೆಂ.ಮೀ. ಉದ್ದದ ಅಳತೆಯ ಛೇದನವು ಬೇಕಾಗುತ್ತದೆ. ಥೈರಾಯಿಡ್ ಕಾಯಿಲೆಗಳು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತವೆ.
ಈ ಎಂಡೊಸ್ಕೊಪಿಕ್ ಥೈರಾಯೆxಕ್ಟಮಿ ಕಾರ್ಯ ವಿಧಾನವನ್ನು ಕಂಕುಳಿನಲ್ಲಿ ಸಣ್ಣ ಛೇದನಗಳ ಸಹಾಯದಿಂದ ಕುತ್ತಿಗೆಯಲ್ಲಿ ಯಾವ ಗಾಯವೂ ಇಲ್ಲದೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ದೊಡ್ಡ ಥೈರಾಯಿಡ್ ಊತಗಳಿಗೆ ಸೂಕ್ತವಲ್ಲ. ಶಸ್ತ್ರಚಿಕಿತ್ಸೆಯ ಅನಂತರ ಯಾವುದೇ ಗಾಯವಿರುವುದಿಲ್ಲ. ವಿಶೇಷವಾಗಿ ಎಲ್ಲ ವಯೋಮಾನದ ಮಹಿಳೆಯರಿಗೆ ಚರ್ಮವು ಸೌಂದರ್ಯವರ್ಧಕ ಪ್ರಯೊಜನವನ್ನು ನೀಡುತ್ತದೆ. ಇನ್ನು ಜನರು ಇಂತಹ ಥೈರಾಯೆxಕ್ಟಮಿ ಕಾರ್ಯ
ವಿಧಾನಕ್ಕೆ ಮಹಾನಗರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ಕ| ಎಂ. ದಯಾನಂದ ಅವರು ತಿಳಿಸಿದ್ದಾರೆ.