Advertisement

ಎಂಡೋ: ಶಾಶ್ವತ ಪುನರ್ವಸತಿ ಕೇಂದ್ರ: ಸಚಿವ ಪ್ರಮೋದ್‌

03:35 AM Feb 16, 2017 | |

ಉಡುಪಿ: ಜಿಲ್ಲೆಯಲ್ಲಿ ಎಂಡೋ ಪೀಡಿತರಾಗಿರುವವರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲು 7.50 ಕೋ.ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. 

Advertisement

ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್‌ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ತನಾಡಿದರು.
ಎಂಡೋ ಪೀಡಿತರ ಶಾಶ್ವತ ಪುನ ರ್ವಸತಿ ಕೇಂದ್ರ ಪ್ರಾರಂಭಿಸಲು 5 ಎಕರೆ ಜಾಗದ ಆವಶ್ಯಕತೆಯಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಂಡೋ ಪೀಡಿತರಿರುವ ಕುಂದಾಪುರ ತಾಲೂಕಿನಲ್ಲಿ ಕೇಂದ್ರ ಪ್ರಾರಂಭಿಸಲು ಸೂಚಿಸಿದರು. ಅಗತ್ಯ ಜಾಗ ಗುರುತಿಸುವಂತೆ ಬೈಂದೂರು ತಹಶೀಲ್ದಾರರಿಗೆ ತಿಳಿಸಿ, ಬೈಂದೂರು ವಲಯದ ಕೆಲವು ಶಾಲೆಗಳಲ್ಲಿ 10ಕ್ಕಿಂತ ಹೆಚ್ಚು ಎಕರೆ ಜಾಗವಿದ್ದು, ಅಂತಹ ಶಾಲೆಗಳಲ್ಲಿ ಲಭ್ಯವಿರುವ ಪ್ರದೇಶದ ಕುರಿತು ಮಾಹಿತಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು.
ಇಲಾಖೆಗಳ ಸಮನ್ವಯ ಎಂಡೋ ಪೀಡಿತರಿಗೆ ಸವಲತ್ತು ವಿತರಿಸುವಾಗ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವ
ಹಿಸಬೇಕು. ಗುರುತಿಸುವಾಗ ಮತ್ತು ಸವಲತ್ತು ವಿತರಿಸುವಾಗ ದ.ಕ. ಜಿಲ್ಲೆ ಯಲ್ಲಿ ಅನುಸರಿಸಿರುವ ಮಾನದಂಡ ಅನುಸರಿಸಿ, ಅರ್ಹ ಫ‌ಲಾನುಭವಿ ವಂಚಿತವಾಗದಂತೆ ನೋಡಿಕೊಳ್ಳಿ. ಸಮೀಕ್ಷೆಯಲ್ಲಿ ಬಿಟ್ಟುಹೋಗಿರುವ ಗ್ರಾಮಗಳ ಸಮೀಕ್ಷೆಗೆ ಕ್ರಮ ಕೈಗೊಳ್ಳಿ,
ಮಾಸಾಶನ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯ ರ್ಥಪಡಿಸಿ. ಎಂಡೋ ಪೀಡಿತರಿಗೆ ಬಸ್‌ ಪಾಸ್‌ ವಿತರಿಸುವ ಕುರಿತು ಕ್ರಮ ಕೈಗೊಳ್ಳಿ ಎಂದರು.

ಈ ಬಾರಿ ಬಜೆಟ್‌ನಲ್ಲಿ ಅಂಗವಿಕಲರ ಹಲವು ಸೌಲಭ್ಯಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದ್ದು, ಅಗತ್ಯ ಬೇಡಿಕೆಗಳ ಕುರಿತು ಸಂಘ-ಸಂಸ್ಥೆಗಳು ಮನವಿ ನೀಡುವಂತೆ ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಬಿಟ್ಟುಹೋದ ಎಂಡೋ ಪೀಡಿತರಿಗಾಗಿ 28 ಶಿಬಿರ ನಡೆಸಲಾ
ಗಿದೆ. ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಒಟ್ಟು 1,328 ಎಂಡೋ ಪೀಡಿತರಿದ್ದು, ಅವರಲ್ಲಿ 33 ಮಂದಿ ಮರಣ ಹೊಂದಿದ್ದಾರೆ. ಪ್ರಸ್ತುತ 1,295 ಮಂದಿಗೆ ಮಾಸಾಶನ ವಿತರಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ| ರೋಹಿಣಿ ಮಾಹಿತಿ ನೀಡಿದರು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್‌, ಅಪರ ಜಿಲ್ಲಾಧಿಕಾರಿ ಅನುರಾಧಾ ಹಾಗೂ ಜಿಲ್ಲೆಯ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next