Advertisement

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

08:57 AM Jul 05, 2024 | Team Udayavani |

ಹೊಸನಗರ: ಇತಿಹಾಸ ಪ್ರಸಿದ್ಧ ಬಿದನೂರು ಮುಳುಗಡೆ ಸಮಸ್ಯೆಗಳಿಂದ ತತ್ತರಿಸಿದ್ದರು ಕೂಡ.. ಐತಿಹಾಸಿಕ‌ ಮಹತ್ವ ಇಂದಿಗೂ ಜೀವಂತವಾಗಿರಿಸಿದೆ. ಆದರೆ ನಿಧಿಯಾಸೆಗೆ ಭಗ್ನಗೊಳ್ಳುತ್ತಿರುವ ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು ಒಂದೊಂದೆ ಪಳೆಯುಳಿಕೆಗಳು ಮರೆಯಾಗುತ್ತಿವೆ.

Advertisement

ಹೌದು ಇದು ಕೆಳದಿ ಅರಸರ ಮೂರನೇ ರಾಜಧಾನಿ ಯಾಗಿ ಯಶಸ್ಸಿನ ಉತ್ತುಂಗಕ್ಕೇರಿದ ಐತಿಹಾಸಿಕ ಬಿದನೂರು ಇಂದಿನ ನಗರದ ಸುತ್ತಮುತ್ತಲ ಪರಿಸರದ ಧಾರುಣ ಸ್ಥಿತಿ. ನಿಧಿಯಾಸೆಗೆ ಅವಶೇಷಗಳನ್ನು ಭಗ್ನಗೊಳಿಸುವ ಪ್ರಕರಣಗಳ ಸಾಲಿಗೆ ಇತ್ತೀಚೆಗೆ ಮತ್ತೊಂದು ಸೇರಿಕೊಂಡಿದೆ.

ದರಗಲ್ ಗುಡ್ಡದಲ್ಲಿ ನಿಧಿ ಶೋಧ!
ಐತಿಹಾಸಿಕ ಬಿದನೂರು ಕೋಟೆಯ ಅಭಿಮುಖವಾಗಿ ಅಣತಿ ದೂರದಲ್ಲಿರುವ ದರಗಲ್ ಗುಡ್ಡದಲ್ಲಿ ನಿಧಿಯಾಸೆಗೆ ಸ್ಮಾರಕ‌ ಧ್ವಂಸಗೊಳಿಸಿದ ಪ್ರಕರಣ ನಡೆದಿದ್ದು ಇತ್ತೀಚೆಗೆ ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ.

ಗುಡ್ಡದ ಮೇಲ್ಭಾಗದಲ್ಲಿ ವಿಶಾಲ ಕಲ್ಲಿನ ಚಪ್ಪಡಿ ಧ್ವಂಸಗೊಳಿಸಿರುವುದು ಮಾತ್ರವಲ್ಲ ಪಕ್ಕದಲ್ಲೇ 6 ಅಡಿಯಷ್ಟು ಗುಂಡಿ ತೋಡಿರುವುದು ಕಂಡು ಬಂದಿದೆ.
ಅಂದಾಜು ಏಳೆಂಟು ಅಡಿ ಕೆಳಗಿನಿಂದ ಕಲ್ಲುಕಂಬಗಳನ್ನೇ ಅಡ್ಡಲಾಗಿ‌ ಜೋಡಿಸಿ, ಮೇಲ್ಭಾಗದಲ್ಲಿ ವಿಶಾಲವಾದ ಚಪ್ಪಡಿ ಹಾಸಿರುವುದು ಕಂಡುಬಂದಿದ್ದು, ಇದು ಸುರಂಗಮಾರ್ಗದ ದ್ವಾರವೋ.. ಸಮಾಧಿಯೋ ಅಥವಾ ಅಡಗುತಾಣವೋ ಎಂಬುದನ್ನು ಇತಿಹಾಸ ತಜ್ಞರೇ ಸ್ಪಷ್ಟ ಪಡಿಸಬೇಕಿದೆ. ಅದೇನೆ ಇರಲಿ.. ವಿಶೇಷ ವಿನ್ಯಾಸದೊಂದಿಗೆ ಗಮನಸೆಳೆಯುವಂತಿರುವ ದರಗಲ್ ಗುಡ್ಡದ ಈ ಅವಶೇಷ ಭಗ್ನಗೊಂಡಿರುವುದು ಮಾತ್ರ ದುರಂತ.

ಬಿದನೂರು ಸುತ್ತಮುತ್ತಲಿನ ಭಾಗದಲ್ಲಿ‌ನಿಧಿ ಶೋಧನೆಗಾಗಿ ಅವಶೇಷಗಳು ಹಾಳಾಗುತ್ತಿರುವುದು ಇದೇ ಮೊದಲಲ್ಲ. ಹತ್ತು ಹಲವು ಘಟನೆಗಳಿಗೆ ಬಿದನೂರು ಸಾಕ್ಷಿಯಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಅರಕ್ಷಿತ ಸ್ಮಾರಕ, ಪಳೆಯುಳಿಕೆಗಳ ರಕ್ಷಣೆಗೆ ಮುಂದಾಬೇಕಿದೆ.

Advertisement

ಇದನ್ನೂ ಓದಿ: ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next