Advertisement

ಅಂತ್ಯವಲ್ಲ ,ಆರಂಭ; ಹೋರಾಟ ಶುರು: ಕಾಂಗ್ರೆಸ್‌

10:49 PM Mar 03, 2022 | Team Udayavani |

ಬೆಂಗಳೂರು:  “ಮೇಕೆದಾಟು ಯೋಜನೆ ಅನುಷ್ಠಾನದ ಮೊದಲ ಭಾಗವಾಗಿ ಪಾದಯಾತ್ರೆ ಮುಗಿದಿದೆ. ಆದರೆ, ಹೋರಾಟ ಆರಂಭವಾಗಿದೆ. ಯೋಜನೆ ಜಾರಿಯಾಗುವವರೆಗೂ ಬಿಡುವುದಿಲ್ಲ ಎಂದು ಪಣ ತೊಡುತ್ತಿದ್ದೇವೆ’ ಎಂದು ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ಪಾದಯಾತ್ರೆ ಭಾಗ-2ರ ಸಮಾರೋಪ ಕಾರ್ಯಕ್ರಮದಲ್ಲಿ  ಕಾಂಗ್ರೆಸ್‌ ನಾಯಕರು ಒಕ್ಕೊರಲಿ ನಿಂದ ಹೇಳಿದರು.

Advertisement

“ನಮ್ಮ ನೀರು-ನಮ್ಮ ಹಕ್ಕು’ ಘೋಷಣೆ ಯಡಿ ಹಮ್ಮಿಕೊಳ್ಳಲಾಗಿದ್ದ ಎರಡನೇ ಹಂತದ ಪಾದಯಾತ್ರೆ ಸಮಾ ರೋಪ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಹಾಗೂ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೂ ಸಾಕ್ಷಿಯಾಯಿತು.  ಎಐಸಿಸಿ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ರಾಜ್ಯ ಸಭೆ ಯಲ್ಲಿ ವಿಪಕ್ಷ ನಾಯಕ  ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಸಹಿತ ಎಲ್ಲ ನಾಯಕರು ಪ್ರಧಾನಿ ಮೋದಿ, 25 ಬಿಜೆಪಿ ಸಂಸದರು, ರಾಜ್ಯ ಸರಕಾರ, ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ  ತೀವ್ರ ವಾಗ್ಧಾಳಿ ನಡೆಸಿದರು.

ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದಿನ 50 ವರ್ಷಗಳ ನೀರಿನ ಸಮಸ್ಯೆ ನೀಗಲು ಮೇಕೆದಾಟು ಯೋಜನೆ ಜಾರಿಯಾಗಬೇಕು.  ಸಿದ್ದರಾಮಯ್ಯ, ವಿಪಕ್ಷ ನಾಯಕ

ಪಾದಯಾತ್ರೆಗೆ ಸಿಕ್ಕ ಯಶಸ್ಸು ಕಂಡು ಬಿಜೆಪಿ ನಾಯಕರಿಗೆ ಹೊಟ್ಟೆ ಕಿಚ್ಚು. ನಾವು ಏನೂ ಮಾಡಲು ಆಗುವುದಿಲ್ಲ.  ಜನರಿಗಾಗಿ ನಮ್ಮ ಹೋರಾಟ  ಕಾಂಗ್ರೆಸ್‌ನ ಬದ್ಧತೆ ಮತ್ತು ಇಚ್ಛಾಶಕ್ತಿಯಾಗಿದೆ. ಡಿ.ಕೆ. ಶಿವಕುಮಾರ್‌,  ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next