Advertisement

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

07:33 PM Nov 28, 2021 | Team Udayavani |

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಭಾರತದಲ್ಲಿ ಚಲನಚಿತ್ರ ಚಿತ್ರ ಚಿತ್ರೀಕರಣ ಮಾಡಲು ಜಗತ್ತಿನಾದ್ಯಂತದ ಚಲನಚಿತ್ರ ನಿರ್ಮಾಪಕರನ್ನು ಭಾರತ ಸ್ವಾಗತಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಅನುರಾಗ್ ಠಾಕೂರ್ ನುಡಿದರು.

Advertisement

ಗೋವಾದ ಪಣಜಿ ಸಮೀಪದ ಶಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.

ಪ್ರಸಕ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೇಶ-ವಿದೇಶಗಳ 10,000 ಪ್ರತಿನಿಧಿಗಳು ಭಾಗವಹಿಸಿದ್ದರು. 75 ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು ಎಂದ ಕೇಂದ್ರ ಸಚಿವ ಅನುರಾಗ್ ಠಾಕೂರ್-ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದ ದೇಶ-ವಿದೇಶಿಯ ಚಲನಚಿತ್ರ ಕಲಾವಿದರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಕಳೆದ 9 ದಿನಗಳಲ್ಲಿ ನೀವೆಲ್ಲರೂ ಹೊಸ ಚಲನಚಿತ್ರಗಳನ್ನು ವೀಕ್ಷಿಸಿದ್ದೀರಿ ಮತ್ತು ಇಲ್ಲಿ ಹೊಸ ಕನಸನ್ನು ಕಟ್ಟಿಕೊಂಡು ಹೋಗುತ್ತಿದ್ದೀರಿ. ಗೋವಾ ರಾಜ್ಯವು ಸುಂದರ ತಾಣವಾಗಿದೆ. ಚಲನಚಿತ್ರ ನಿರ್ಮಾಣಕ್ಕೆ ಗೋವಾ ಆಕರ್ಷಣೆಯ ಕೇಂದ್ರವಾಗಿದೆ. ಗೋವಾದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಬಾಲಿವುಡ್ ನಟರಾದ ರಣಬೀರ್ ಕಪೂರ್, ಮನೋಜ್ ವಾಜಪೇಯಿ, ಮಾಧುರಿ ದೀಕ್ಷಿತ್ ರವರನ್ನು  ಸನ್ಮಾನಿಸಲಾಯಿತು.

Advertisement

ಬ್ರಿಕ್ಸ್ ಫಿಲ್ಮ್- ಬರಾಕಾತ್ (ಸೌತ್ ಆಫ್ರಿಕಾ), ಸನ್ ಓವರ್ ಮಿ ನೆವರ್ ಸೆಟ್ಸ್ (ರಷ್ಯಾ) ಚಲನಚಿತ್ರಗಳು ಆಯ್ಕೆಯಾದವು. ರಿಂಗ್ ವಾಂಡರಿಂಗ್ ರವರಿ ಗೋಲ್ಡನ್ ಪಿಕೋಕ್ (40 ಲಕ್ಷ ರೂ ಮತ್ತು ಪ್ರಶಸ್ತಿ), ಸೈಮನ್ ಪೇರಿಯೇಲಾ ರವರಿ ಜ್ಯೂರಿ ಸ್ಪೇಶಲ್ ಮೆನ್‍ಶನ್ ಅವಾರ್ಡ್, ವಾಕ್ಲಾ ಕಡ್ರಾನ್ಕಾ ರವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ, ಜಿತೇಂದ್ರ ಜೋಶಿ ಉತ್ತಮ ನಟ, ರಿಂಗ್ ವಾಂಡೆರಿಂಗ್(ಜಪಾನ್) ಚಲನಚಿತ್ರಕ್ಕೆ ಗೋಲ್ಡನ್ ಪಿಕೋಕ್ ಅವಾರ್ಡ್, ದಿ ಫಸ್ಟ್  ಫಾಲನ್ ಚಲನಚಿತ್ರಕ್ಕೆ ಸ್ಪೆಶಲ್ ಜ್ಯೂರಿ ಅವಾರ್ಡ್ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next