Advertisement

ಶಿಂಗಾಣಿ ಸೇತುವೆ ಸಮಸ್ಯೆಗೆ ಕೊನೆಗೂ ಮುಕ್ತಿ!

10:16 PM Jun 18, 2019 | mahesh |

ಪುತ್ತೂರು: ಸಾಕಷ್ಟು ಆರೋಪ -ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಮಂಜಲ್ಪಡು³ ಸಮೀಪದ ಶಿಂಗಾಣಿ ಸೇತುವೆಯ ಸಂಪರ್ಕ ರಸ್ತೆ ಸಮಸ್ಯೆಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದ್ದು, ಪ್ರಸ್ತುತ ನಗರಸಭೆಯ 14ನೇ ಹಣಕಾಸು ಯೋಜ ನೆಯಡಿ ಸೇತುವೆಯ ಸಂಪರ್ಕ ರಸ್ತೆಗೆ ಅನು ದಾನ ಮೀಸಲಿಟ್ಟಿದ್ದು, ತಿಂಗಳೊಳಗೆ ಕಾಮ ಗಾರಿ ಆರಂಭವಾಗುವ ಸಾಧ್ಯತೆ ಇದೆ.

Advertisement

ನಗರಸಭಾ ವ್ಯಾಪ್ತಿಯ ಮಂಜಲ್ಪಡು ಮೂಲಕ ಶಿಂಗಾಣಿ – ಪೆರಿಯತ್ತೋಡಿ ಸಂಪರ್ಕ ರಸ್ತೆಗೆ ಅಡ್ಡಲಾಗಿ ತೋಡೊಂದು ಹರಿಯುತ್ತಿದ್ದು, ಇದಕ್ಕೆ ಅಡ್ಡ ಲಾಗಿ ನಿರ್ಮಿಸಲಾಗಿದ್ದ ಕಾಲು ಸಂಕವು ಶಿಥಿಲವಾದ ಹಿನ್ನೆಲೆಯಲ್ಲಿ 2014 – 15ನೇ ಸಾಲಿನಲ್ಲಿ ನಗರಸಭೆಯ 13ನೇ ಹಣಕಾಸು ಯೋಜನೆಯಡಿ 9.97 ಲಕ್ಷ ರೂ.ಗಳಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು.

ಸೇತುವೆ ನಿರ್ಮಿಸುವ ಸಂದರ್ಭ ಹಾಲಿ ರಸ್ತೆಯನ್ನು ಬಿಟ್ಟು ಪರ್ಯಾಯ ರಸ್ತೆಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣವಾಗಿತ್ತು. ಆದರೆ ಪರ್ಯಾಯ ಸೇತುವೆ ಮಾತ್ರ
ನಿರ್ಮಾಣವಾಗದ ಹಿನ್ನೆಲೆ . ಯಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ರಾಜಕೀಯ ವಾಗಿಯೂ ಶಿಂಗಾಣಿ ಸೇತು ವೆಯ ಆರೋಪ- ಪ್ರತ್ಯಾ ರೋಪ ಜೋರಾಗಿತ್ತು.

5 ಲಕ್ಷ ರೂ. ಅನುದಾನ
ಪ್ರಸ್ತುತ ಸೇತುವೆಗೆ ಕಚ್ಚಾ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಇದಕ್ಕಾಗಿ ಆ್ಯಕ್ಷನ್‌ ಪ್ಲ್ರಾನ್‌ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದ್ದು, ಅಲ್ಲಿ ಮಂಜೂರಾತಿ ಲಭಿಸಿದ ಬಳಿಕ ಟೆಂಡರ್‌ ಕರೆದು ಕಾಮಗಾರಿ ಆರಂಭಗೊಳ್ಳಲಿದೆ. ತೋಟಗಾರಿಕಾ ಇಲಾಖೆಯ ಜಾಗದ ಹಿಂಭಾಗದಲ್ಲಿರುವ ಸರಕಾರಿ ಭೂಮಿಯ ಮೂಲಕ ನೂತನ ರಸ್ತೆ ಹಾದುಹೋಗಲಿದೆ.

ಈ ಅನುದಾನದಲ್ಲಿ ಕೇವಲ ಮಣ್ಣಿನ ಕಾಮಗಾರಿಯ ಮೂಲಕ ರಸ್ತೆ ಮಾತ್ರ ನಿರ್ಮಾಣವಾಗಲಿದೆ. ರಸ್ತೆ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ ಇನ್ನೊಂದು ಅನುದಾನ ಬೇಕಾಗುತ್ತದೆ. ಮಂಜಲ್ಪಡು³ನಿಂದ ಸ್ವಲ್ಪ ಮುಂದೆ ಸಾಗಿದ ಬಳಿಕ ಕಚ್ಚಾ ರಸ್ತೆಯ ಮೂಲಕ ಸಾಗಬೇಕಿದೆ. ಹೀಗಾಗಿ ಪೂರ್ತಿ ರಸ್ತೆಗೆ ಅನುದಾನದ ಅಗತ್ಯವಿದೆ. ಸೇತುವೆಯ ಸ್ಥಿತಿಯ ಕುರಿತು ಹಿಂದೆ ಶಾಸಕರು ಹಾಗೂ ಸಹಾಯಕ ಕಮಿಷನರ್‌ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ತೋಟಗಾರಿಕಾ ಇಲಾಖೆಯವರ ಬಳಿ ಜಾಗ ಕೇಳುವುದಕ್ಕೂ ಪ್ರಯತ್ನಗಳು ನಡೆದಿತ್ತು. ಆದರೆ ಈಗ ಅಲ್ಲಿರುವ ಸರಕಾರಿ ಜಾಗದ ಮೂಲಕ ರಸ್ತೆ ನಿರ್ಮಾಣವಾಗಲಿದೆ ಎಂದು ನಗರಸಭೆ ಹೇಳುತ್ತಿದೆ.

Advertisement

ನಗೆಪಾಟಲಿಗೀಡಾಗಿತ್ತು!
ಶಿಂಗಾಣಿ ಸೇತುವೆಯು ಪರ್ಯಾಯ ರಸ್ತೆಗೆ ಪೂರಕವಾಗಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಾಲಿ ರಸ್ತೆ ನೋಡಿದವರು ರಸ್ತೆ ಎಲ್ಲೋ, ಸೇತುವೆ ಎಲ್ಲೋ ಎಂದು ಕಾಮಗಾರಿಯನ್ನು ಕಂಡು ನಗೆಯಾಡುತ್ತಿದ್ದರು. ರಸ್ತೆಯ ಎಡಬದಿಯಲ್ಲಿ ಸೇತುವೆ ನಿರ್ಮಾಣವಾಗಿದ್ದು, ಅದರ ಒಂದು ಬದಿಯಲ್ಲಿ ಬೃಹತ್‌ ಧರೆ ಇದೆ. ಹೀಗಾಗಿ ಅದನ್ನು ಹತ್ತುವುದು ಹೇಗೆ ಎಂದು ಹಾಸ್ಯ ಮಾಡಲಾಗುತ್ತಿತ್ತು.

ಅರ್ಥ್ವರ್ಕ್‌ ಕಾಮಗಾರಿ
ಶಿಂಗಾಣಿ ಸೇತುವೆಗೆ ಸಂಪರ್ಕ ರಸ್ತೆಯ ಕುರಿತು ಅನುದಾನ ಮೀಸಲಿರಿಸಿ ಆ್ಯಕ್ಷನ್‌ ಪ್ಲಾ Âನ್‌ ಅನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿ ಒಪ್ಪಿಗೆ ಸಿಕ್ಕಿದ ಬಳಿಕ ಟೆಂಡರ್‌ ಕರೆದು, ಒಂದು ತಿಂಗಳೊಳಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಪ್ರಸ್ತುತ ಅನುದಾನದಲ್ಲಿ ಕೇವಲ ಅರ್ಥ್ವರ್ಕ್‌ ಕಾಮಗಾರಿ ಮಾತ್ರ ನಡೆಯಲಿದೆ.
– ಅರುಣ್‌ ಕೆ. ಎಂಜಿನಿಯರ್‌, ಪುತ್ತೂರು ನಗರಸಭೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next