Advertisement

ಶಬರಿಮಲೆ ಯಾತ್ರೆ ಕೊನೆ: ಭಕ್ತರ ಸಂಖ್ಯೆ ತೀರಾ ವಿರಳ

02:03 AM Jan 20, 2021 | Team Udayavani |

ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಕರ ಸಂಕ್ರಮಣ ಅವಧಿಯ ತೀರ್ಥಾಟನೆ ಮುಕ್ತಾಯಗೊಂಡಿದ್ದು, ಜ. 20ರಂದು ದೇವಸ್ಥಾನದ ಬಾಗಿಲನ್ನು ಮುಚ್ಚ ಲಾಗುವುದು.

Advertisement

ಮಂಗಳವಾರ ಸಂಜೆ 5.30ರ ವರೆಗೆ ಮಾತ್ರ ಭಕ್ತರಿಗೆ ಪಂಪಾದಿಂದ ಸನ್ನಿಧಾನಕ್ಕೆ ತೆರಳಲು ಅವಕಾಶ ನೀಡಲಾಯಿತು. ಕೋವಿಡ್‌ 19ರಮಾನದಂಡದಂತೆ ಈ ವರ್ಷ ಭಕ್ತರು ಕ್ಷೇತ್ರ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಮುಂಗಡವಾಗಿ ಕಾದಿರಿಸಬೇಕಾಗಿತ್ತು.

ಪ್ರತಿದಿನ 5,000 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು. ಆದರೆ ಅಷ್ಟು ಸಂಖ್ಯೆಯ ಭಕ್ತರೂ ಕ್ಷೇತ್ರದಲ್ಲಿ ಕಂಡುಬಂದಿಲ್ಲ. ಜ. 19ರ ಮಂಗಳವಾರ ಮಾತ್ರ ತುಪ್ಪಾಭಿಷೇಕ ಅವಕಾಶ ನೀಡಲಾಗಿತ್ತು.ಪ್ರತೀ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಕೋವಿಡ್‌ 19ರ ಹಿನ್ನೆಲೆಯಲ್ಲಿ ಸರಕಾರದ ಕಟ್ಟುನಿಟ್ಟಿನಿಂದಾಗಿ ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದರ್ಶನ ಮಾಡಿದ್ದರು. ಕರ್ನಾಟಕದ ಭಕ್ತರ ಸಂಖ್ಯೆಯಂತೂ ತೀರಾ ವಿರಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next