Advertisement

ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಮುಷ್ಕರ ಅಂತ್ಯ

02:48 PM Dec 15, 2019 | Suhan S |

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಪಂ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿದ್ದ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಅಧಿಕಾರಿಗಳ ಲಿಖೀತ ಭರವಸೆ ಹಿನ್ನಲೆಯಲ್ಲಿ ಹೋರಾಟ ಹಿಂಪಡೆದಿದ್ದಾರೆ.

Advertisement

ನಗರದ ಜಿಪಂ ಕಚೇರಿ ಎದುರು ಡಿ. 9ರಿಂದ ಆರಂಭಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಅಹೋರಾತ್ರಿ ನಡೆದಿತ್ತು. ಅಂತಿಮವಾಗಿ ಸ್ಥಳಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅ ಧಿಕಾರಿ ಜಿ.ಎಂ. ದೊಡಮನಿ, ವಿಜಯಪುರ ಜಿಲ್ಲೆಯಲ್ಲಿ ನಮ್ಮ ಇಲಾಖೆ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ಉಳಿದಿರುವ ಪಿಎಫ್‌, ಇಎಸ್‌ಐ ವಂತಿಗೆ ಹಣವನ್ನು ಗುತ್ತಿಗೆ ಪಡೆದ ಏಜೆನ್ಸಿಯಿಂದ ಭರಿಸಲಾಗುತ್ತದೆ. ಇದಲ್ಲದೇ ಸ್ಥಳೀಯ ಪರಿಹಾರ ಸಾಧ್ಯ ಇರುವ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಲಿಖತ ಭರವಸೆ ನೀಡಿದರು. ಇದರಿಂದ ಸಂತೃಪ್ತರಾದ ಪ್ರತಿಭಟನಾ ನಿರತ ಹೊರ ಗುತ್ತಿಗೆ ನೌಕರರು, ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಹಿಂಪಡೆದರು.

ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ, ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ, ಲಕ್ಷ್ಮಣ ಹಂದ್ರಾಳ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಮಸಳಿ, ಕಾಶೀಮ ಆಲದಾಳ, ಪವಾಡೆಪ್ಪ ಚಲವಾದಿ, ನಿಂಗಪ್ಪ ವಾಲೀಕಾರ, ಬೋರಮ್ಮ ಬೇಳೂರ, ಶಾಂತಾ ಕ್ವಾಟಿ, ರಾಮವ್ವ ಭಜಂತ್ರಿ, ಬೋರಮ್ಮ ಎಲ್‌.ಜಿ., ಯಮನಪ್ಪ ಭಜಂತ್ರಿ, ಸಿದ್ದಮ್ಮ ಯಂಕಂಚಿ ಸೇರಿದಂತೆ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ದಲಿತ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next