Advertisement

ಗುತ್ತಿಗೆದಾರರ ಧರಣಿ ಅಂತ್ಯ

12:13 PM Aug 02, 2017 | Team Udayavani |

ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ನೀಡಿದ ಭರವಸೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ಜಿಎಸ್‌ಟಿ ವಿರೋಧಿಸಿ ನಡೆಯುತ್ತಿದ್ದ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಧರಣಿ ಅಂತ್ಯಗೊಂಡಿದೆ. ಮಹಾನಗರ ಪಾಲಿಕೆಯಿಂದ ಈ ಹಿಂದೆ ಮಾಡಲಾಗುತ್ತಿದ್ದ ವಿವಿಧ ಕಾಮಗಾರಿಗಳಿಗೆ ಶೇ.4ರಷ್ಟು ತೆರಿಗೆ ನೀಡಲಾಗುತ್ತಿತ್ತು.

Advertisement

ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿಯಿಂದ ಶೇ.18ರಷ್ಟು ತೆರಿಗೆ ಕಟ್ಟಬೇಕಾಗಿದೆ. ಇದರಿಂದ ಗುತ್ತಿಗೆದಾರರಿಗೆ  ಹಾನಿಯಾಗುತ್ತಿದ್ದು, ಇದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ವಿನಯ ಕುಲಕರ್ಣಿ, ಈ ಕುರಿತು ಮುಖ್ಯಮಂತ್ರಿ  ಹಾಗೂ ಪಿಡಬುಡಿ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

ತಾವು ಕೂಡಾ ಒಂದು ನಿಯೋಗದೊಂದಿಗೆ ಆಗಮಿಸಿದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂದು ಭರವಸೆ ನೀಡಿದರು. ಸಚಿವರ ಭರವಸೆ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಬೇಡಿಕೆಗಳು ಈಡೇರದೇ ಇದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಅರಣ್ಯ ನಿಗಮ ಮಂಡಳಿ ಅಧ್ಯಕ್ಷ ನಾಗರಾಜ ಛಬ್ಬಿ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಶರದ ದೊಡ್ಡಮನಿ, ಶೀತಲ್‌ ಬಾಗಿ, ಆರ್‌.ಬಿ. ದಾಸಣ್ಣವರ, ಶಿವಪ್ರಸಾದ, ಎಂ.ಎಸ್‌. ಚಿಕ್ಕಯ್ಯನವರ, ವಿನಯ ಪಾಸ್ತೆ, ಟಿ.ಡಿ. ನಾಯಕ, ಎನ್‌.ಎನ್‌. ಕರನಂದಿ ಸೇರಿದಂತೆ ಮೊದಲಾದವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next