Advertisement

Encroachment: ಅಕ್ರಮ ನಿರ್ಮಾಣಗಳ ತೆರವು: ಸುಪ್ರೀಂಕೋರ್ಟ್‌ ನಿಲುವು ಸ್ವಾಗತಾರ್ಹ

01:25 AM Oct 03, 2024 | Team Udayavani |

ಸಾರ್ವಜನಿಕ ಹಿತಕ್ಕೆ ಬಾಧಕವಾಗಿರುವ ಎಲ್ಲ ಒತ್ತುವರಿ ಮತ್ತು ಅಕ್ರಮ ನಿರ್ಮಾಣಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿವಿಧ ಉದ್ದೇಶಗಳಿಗಾಗಿ ಮೀಸಲಿರಿಸಲಾದ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಸಹಿತ ಎಲ್ಲ ತೆರನಾದ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲೇ ಬೇಕು. ಸಾರ್ವಜನಿಕರ ಸುರಕ್ಷೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಯೇ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಖಂಡತುಂಡವಾಗಿ ಹೇಳಿದೆ.

Advertisement

ಅಕ್ರಮ ಅಥವಾ ಅನಧಿಕೃತ ಕಟ್ಟಡ ಯಾ ನಿರ್ಮಾಣಗಳನ್ನು ತೆರವುಗೊಳಿಸುವ ವಿಷಯದಲ್ಲಿ ಯಾವುದೇ ಜಾತಿ, ಧರ್ಮ, ರಾಜಕೀಯ ಹಿತಾಸಕ್ತಿಯ ಪ್ರಶ್ನೆಯೇ ಇಲ್ಲ. ಅಕ್ರಮವನ್ನು ಸಮರ್ಥಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸುವ ಮೂಲಕ ಸುಪ್ರೀಂ ಕೋರ್ಟ್‌ ಮತ್ತೂಮ್ಮೆ ಅಕ್ರಮ ನಿರ್ಮಾಣಕಾರರಿಗೆ ಬಿಸಿ ಮುಟ್ಟಿಸು ವುದರ ಜತೆಯಲ್ಲಿ ಇಂತಹ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಹೊಣೆಗಾರಿಕೆಯನ್ನು ಜ್ಞಾಪಿಸಿದೆ.

ಬುಲ್ಡೋಜರ್‌ ನ್ಯಾಯದ ಕುರಿತಾದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಯಾವುದೇ ಅಪರಾಧ ಪ್ರಕರಣ ಗಳ ಆರೋಪಿಗಳಿಗೆ ಸೇರಿದ ಮನೆ, ಕಟ್ಟಡಗಳನ್ನು ನೆಲಸಮ ಗೊಳಿಸುವುದರ ಕುರಿತಂತೆ ತನ್ನ ಆಕ್ಷೇಪವನ್ನು ಮತ್ತೂಮ್ಮೆ ಪುನರುತ್ಛರಿಸಿದೆ. ಈ ಅರ್ಜಿಯ ಕುರಿತಾಗಿನ ಪ್ರತಿಯೊಂದು ವಿಚಾರಣೆಯಲ್ಲೂ ಸುಪ್ರೀಂ ನ್ಯಾಯ ಪೀಠ, ಈ ವಿಚಾರದಲ್ಲಿ ದೇಶದ ಸಂವಿಧಾನ ಮತ್ತು ಕಾನೂನಿಗೆ ಬದ್ಧವಾಗಿ ಕಾರ್ಯಾಚರಿಸುವಂತೆ ರಾಜ್ಯ ಸರಕಾರಗಳಿಗೆ ಕಿವಿಮಾತು ಹೇಳುತ್ತಲೇ ಬಂದಿದೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶದ ಕೆಲವು ರಾಜ್ಯಗಳಲ್ಲಿ ಇಂತಹ ಕಾರ್ಯಾಚರಣೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸತತವಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಇದೇ ವೇಳೆ ಒತ್ತುವರಿ, ಅಕ್ರಮ ನಿರ್ಮಾಣಗಳ ತೆರವಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಪ್ರತೀ ಬಾರಿಯೂ ಒತ್ತಿ ಹೇಳುತ್ತಲೇ ಬಂದಿರುವ ನ್ಯಾಯಪೀಠ ಈ ಬಾರಿ ಇನ್ನೂ ಒಂದು ಹೆಜ್ಜೆ ಒಂದು ಮುಂದೆ ಹೋಗಿ ಅಕ್ರಮ ನಿರ್ಮಾಣ ತೆರವು ಸಂಬಂಧ ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವಂಥ ಸಮಾನ ಮಾರ್ಗಸೂಚಿ ಯನ್ನು ರೂಪಿ ಸುವ ಮಾತನ್ನಾಡಿದೆ.

ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮ ಅಥವಾ ಅನಧಿಕೃತ ಕಟ್ಟಡ ಯಾ ನಿರ್ಮಾಣಗಳ ತೆರವು ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳು ಒಂದಿಷ್ಟು ದಾಕ್ಷಿಣ್ಯ ಪ್ರವೃತ್ತಿಯನ್ನು ತನ್ನದಾಗಿಸಿಕೊಂಡಿ ರುವುದರಿಂದಾಗಿ ಈ ಬಗೆಗಿನ ಕಾನೂನು ನಿಯಮಾವಳಿಗಳು ಸಮರ್ಪಕವಾಗಿ ಪಾಲನೆ ಯಾಗುತ್ತಿಲ್ಲ. ಇಂತಹ ಬಹುತೇಕ ಪ್ರಕರಣಗಳಲ್ಲಿ ರಾಜಕೀಯ, ಧಾರ್ಮಿಕ ಹಿತಾಸಕ್ತಿಯ ಕೈಮೇಲಾಗುತ್ತಿದ್ದು, ಸಾರ್ವಜನಿಕರ ಅಳಲಿಗೆ ಸ್ಪಂದಿಸುವ ಕಾರ್ಯವಾಗುತ್ತಿಲ್ಲ.

Advertisement

ನಗರ ಪ್ರದೇಶಗಳಲ್ಲಂತೂ ಈ ಒತ್ತುವರಿ, ಅಕ್ರಮ ನಿರ್ಮಾಣಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮಾತ್ರವಲ್ಲದೆ ಜನಜೀವನದ ಮೇಲೂ ಭಾರೀ ಪರಿಣಾಮ ಬೀರುತ್ತಿದೆ. ಆದರೆ ಆಗೊಮ್ಮೆ ಈಗೊಮ್ಮೆ ಬಡಪಾಯಿ ಬೀದಿ ಬದಿ ವ್ಯಾಪಾರಿಗಳ ತೆರವಿಗಷ್ಟೇ ಕಾರ್ಯಾಚರಣೆ ಸೀಮಿತ ಗೊಳ್ಳುತ್ತಿದೆಯೇ ಹೊರತು ಉಳ್ಳವರ ಅತಿಕ್ರಮಣ, ಅನಧಿಕೃತ ನಿರ್ಮಾಣಗಳತ್ತ ಸ್ಥಳೀಯಾಡಳಿತ ಸಂಸ್ಥೆಗಳು ದೃಷ್ಟಿಯನ್ನೇ ಹರಿಸುವುದಿಲ್ಲ.

ಇಷ್ಟು ಮಾತ್ರವಲ್ಲದೆ ಈ ಅಕ್ರಮ ನಿರ್ಮಾಣಗಳು ನಗರದ ಸೌಂದರ್ಯಕ್ಕೂ ಕಳಂಕ ತಂದೊಡ್ಡುತ್ತಿ ದೆಯಲ್ಲದೆ ಮೂಲ ಸೌಕರ್ಯ ಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಯಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯ ಹೆಚ್ಚಿನ ಪ್ರಾಮುಖ್ಯ ಪಡೆಯುತ್ತದೆ. ಇನ್ನಾದರೂ ಸರಕಾರ ಅಕ್ರಮ ಕಟ್ಟಡ ಮತ್ತು ಅತಿಕ್ರಮಣಗಳ ತೆರವು ವಿಚಾರದಲ್ಲಿ ಕಠಿನ ನಿಲುವನ್ನು ತಾಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next