Advertisement
ಕರ್ನಾಟಕ ಯಕ್ಷಗಾನ ಅಕಾಡೆಮಿ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಮೂಡಲಪಾಯ ಯಕ್ಷಗಾನ: ಇತ್ತೀಚಿನ ಬೆಳವಣಿಗೆಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ದಟ್ಟವಾಗಿದ್ದ ಈ ಕಲೆ ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಈಗ ಸಂಪೂರ್ಣ ನಶಿಸಿದೆ. ಅದರ ಪುನರುಜ್ಜೀವನ ಕಾರ್ಯ ನಡೆಯಬೇಕಾಗಿದೆ.
Related Articles
Advertisement
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಮಾತನಾಡಿ, ರಾಜ್ಯೋತ್ಸವ ಮುಂತಾದ ಇನ್ನಿತರ ಪ್ರಶಸ್ತಿಗಳನ್ನು ನೀಡುವಾಗ ಕೇವಲ ಕರಾವಳಿ ಭಾಗದ ಕಲಾವಿದರನ್ನು ನೋಡದೆ ಹಳೆ ಮೈಸೂರು, ಮಂಡ್ಯದ ಕಲಾವಿದರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾಟಕಕಾರ ಮತ್ತು ಪಾಲಿಕೆ ವಿಶೇಷ ಆಯುಕ್ತ ಜಯರಾಮ ರಾಯಪುರ ಮಾತನಾಡಿ, ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ಯಕ್ಷಗಾನವನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಜಯಪ್ರಕಾಶ ಗೌಡ, ರಂಗ ನಿರ್ದೇಶಕ ಶಶಿಧರ್ ಬಾರಿಘಟ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.