Advertisement

ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿ

03:23 PM Dec 12, 2021 | Team Udayavani |

ರಾಯಚೂರು: ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರು ಜಿಲ್ಲೆಯಲ್ಲಿ ಉನ್ನತ ಅಧಿಕಾರಿಗಳಾಗಿ ಸರ್ಕಾರಿ ಸೇವೆ ಸಲ್ಲಿಸಲು ಸಾಕಷ್ಟು ಅಭ್ಯರ್ಥಿಗಳಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು, ಪ್ರೇರಣೆ ಹಾಗೂ ಪ್ರೋತ್ಸಾಹ ಅತ್ಯಗತ್ಯ ಎಂದು ರಾಯಚೂರಿನ ವಿವಿ ಕುಲಪತಿ ಪ್ರೊ| ಹರೀಶ್‌ ರಾಮಸ್ವಾಮಿ ಅಭಿಪ್ರಾಯಪಟ್ಟರು.

Advertisement

ನಗರದ ಪಂ| ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಎಚ್‌ಕೆಇಎಸ್‌ ಪ್ಯಾರ ಮೆಡಿಕಲ್‌ ಕಾಲೇಜ್‌, ಧಾರವಾಡದ ಮೇರು ಅಕಾಡೆಮಿ ಹಾಗೂ ಕಲ್ಯಾಣ-ಕರ್ನಾಟಕ 371ಜೆ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಯಚೂರಿನ ಪ್ರತಿಭೆಗಳಿಗೆ ನಾಡಿನಾದ್ಯಂತ ಉತ್ತಮ ಅವಕಾಶ ಸಿಗಬೇಕು. ಯುವಕರಲ್ಲಿ ಸಾ ಧಿಸಲೆಬೇಕೆಂಬ ಛಲ ಬರಬೇಕು. ಸತತ ಪ್ರಯತ್ನದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖೀಲ್‌ ಬಿ, ಮಾತನಾಡಿ, ಸಮಾಜದ ಋಣ ತೀರಿಸಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಎಸ್‌ ಕೆಇಎಸ್‌ ಪ್ಯಾರಾ ಮೆಡಿಕಲ್‌ ಕಾಲೇಜಿನ ಅಧ್ಯಕ್ಷ ಡಾ|ಬಾಬುರಾವ್‌ ಎಂ ಶೇಗುಣಿಸಿ ಮಾತನಾಡಿದರು. ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ| ಚಂದ್ರಶೇಖರ್‌ ಎಸ್‌, ಹೈದರಾಬಾದ್‌ ಕರ್ನಾಟಕ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಜಾಕ್‌ ಉಸ್ತಾದ್‌, ಮೇರು ಅಕಾಡೆಮಿ ನಿರ್ದೇಶಕ ಡಾ| ರುದ್ರೇಶ್‌ ಮೇಟಿ, ಪ್ರೊ| ಪ್ರಮೀಳಾ ಮೇಟಿ ಭಾಗವಹಿಸಿದ್ದರು. ಒಟ್ಟು 1100 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next