Advertisement

ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡಿ: ಜಗದೀಶ್‌

10:58 PM Nov 09, 2019 | Team Udayavani |

ಉಡುಪಿ: ವಿಶೇಷ ಮಕ್ಕಳ ಶಾಲೆಯನ್ನು ನಿರ್ವಹಿಸುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಸಮಾಜದ ಇತರ ವರ್ಗದ ಜನರು ಇಂತಹ ಮಹತ್ವದ ಕಾರ್ಯ ದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಿಸಿ ಜಿ. ಜಗದೀಶ್‌ ಕರೆ ನೀಡಿದರು.

Advertisement

ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಹಾಗೂ ಕುಂದಾಪುರ ಮೂಡುಬಗೆ ಅಂಪಾರು ವಾಗೊjàತಿ ಶ್ರವಣದೋಷ ವುಳ್ಳ ಮಕ್ಕಳ ವಸತಿ ಶಾಲೆಯ ಸಹ ಯೋಗದಲ್ಲಿ ಶನಿವಾರ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ್‌ ಜಿಲ್ಲಾ ಮಟ್ಟದ (ಉಡುಪಿ, ದ.ಕ., ಭಟ್ಕಳ) ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ “ಹೊಂಗಿರಣ 2019′ ಉದ್ಘಾಟಿಸಿ ಮಾತನಾಡಿದರು.

ಎಲ್ಲರ ಕೊಡುಗೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, ವಿಶೇಷ ಮಕ್ಕಳಿಗೆ ಎಲ್ಲರಂತೆ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ಅವರಿಗಾಗಿ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ. ಅವರನ್ನು ಸಮಾ ಜದ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರ ಪ್ರಯತ್ನ ಇರಬೇಕು ಎಂದರು.

ಸರಕಾರಕ್ಕೆ ಮನವಿ
ವಿಶೇಷ ಮಕ್ಕಳನ್ನು ನೋಡಿಕೊಳ್ಳು ವುದು ದೊಡ್ಡ ಸೇವೆ. ಆ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಸರಕಾರದಿಂದ ಹಲವು ತಿಂಗಳಿ ನಿಂದ ವೇತನ ಪಾವತಿಯಾಗು ತ್ತಿಲ್ಲ. ಬಂದರೂ ಕಡಿಮೆ ವೇತನವಿದೆ. ಈ ಬಗ್ಗೆ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸರಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್‌ ಆಫ್ ಬರೋಡ ಡಿಜಿಎಂ ರವೀಂದ್ರ ರೈ, ಜಿಲ್ಲಾ ಮೊಗವೀರ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಚಂದ್ರೇಶ್ವರ ಪಿತ್ರೋಡಿ ಸ್ವಾಗತಿಸಿ, ಆನಂದ ಎನ್‌.ಕೆ. ವಂದಿಸಿದರು.

Advertisement

ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು 20 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ಮಂಗಳೂರು ಸಾನ್ನಿಧ್ಯ ವಿಶೇಷ ಮಕ್ಕಳ ಶಾಲೆ, ದ್ವಿತೀಯ ಬಹುಮಾನ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆ, ತೃತೀಯ ಬಹುಮಾನ ಮಂಗಳೂರಿನ ಸೈಂಟ್‌ ಆ್ಯಗ್ನೆಸ್‌ ವಿಶೇಷ ಮಕ್ಕಳ ಶಾಲೆಗಳು ಪಡೆದುಕೊಂಡವು. ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ ತೀರ್ಪುಗಾರರಾಗಿ ಡಾ| ಮಂಜರಿ ಚಂದ್ರ, ಅಮೃತಾ, ಜಗದೀಶ್‌ ಭಾಗವಹಿಸಿದರು. ಅಂಪಾರು ವಾಗೊjàತಿ ಶಾಲೆ ಆತಿಥೇಯ ಸಂಸ್ಥೆಯಾದ ಕಾರಣ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ.

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ನಾನು ಕೋಟ್‌ ಧರಿಸುವುದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೆಂದರೆ ಹೀಗಿರುತ್ತಾರೆ ಎಂಬುದನ್ನು ಮಕ್ಕಳು ನೋಡಬೇಕು ಎಂಬ ಕಾರಣಕ್ಕಾಗಿ ಕೋಟ್‌ ಧರಿಸಿಕೊಂಡು ಬಂದಿದ್ದೇನೆ. ವಿಶೇಷ ಮಕ್ಕಳು ಕೂಡ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗೆ ಏರುವಂತಾಗಬೇಕು.
– ಜಿ.ಜಗದೀಶ್‌

Advertisement

Udayavani is now on Telegram. Click here to join our channel and stay updated with the latest news.

Next