Advertisement

ಸಮಾಜಮುಖೀ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ: ಸಜ್ಜನ್‌

06:09 PM Jan 06, 2022 | Team Udayavani |

ಲಿಂಗಸುಗೂರು: ಸಮಾಜಮುಖೀ ಕೆಲಸ ಮಾಡುವವರಿಗೆ ನಿತ್ಯವೂ ಪ್ರೋತ್ಸಾಹ ನೀಡಬೇಕು ಎಂದು ಸಿಪಿಐ ಮಹಾಂತೇಶ ಸಜ್ಜನ್‌ ಹೇಳಿದರು.

Advertisement

ಪಟ್ಟಣದಲ್ಲಿ ಸಮೃದ್ಧಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಉಚಿತ ಬಟ್ಟೆ ವಿತರಣೆ ಹಾಗೂ ಅನ್ನಸಂತರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮೃದ್ಧಿ ಗೆಳೆಯರ ಬಳಗ ಪಟ್ಟಣದ ಎರಡು ಕಡೆಗಳಲ್ಲಿ ಕರುಣೆ ಪೆಟ್ಟಿಗೆಯನ್ನು ಇಟ್ಟಿದ್ದಾರೆ. ಸಾರ್ವಜನಿಕರು ಅವಶ್ಯಕತೆಯಿಲ್ಲದ ಬಟ್ಟೆಗಳನ್ನು ತಂದು ಪೆಟ್ಟಿಗೆಯಲ್ಲಿ ಹಾಕುತ್ತಿದ್ದಾರೆ. ಆ ಬಟ್ಟೆಗಳನ್ನು ಒಗೆದು ಇಸ್ತ್ರೀ ಮಾಡಿ ಅವುಗಳನ್ನು ಅವಶ್ಯಕತೆ ಇದ್ದವರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇದುದಲ್ಲದೆ ಮದುವೆ-ಇತರೆ ಸಮಾರಂಭದಲ್ಲಿ ಉಳಿದ ಅಡುಗೆಯನ್ನು ವೇಸ್ಟ್‌ ಮಾಡದೇ ಅದನ್ನು ಸಂಗ್ರಹ ಮಾಡಿ ಬಡವರಿಗೆ ನಿರ್ಗತಿಕರಿಗೆ ಹಂಚಿಕೆ ಮಾಡುವ ಕೆಲಸ ಪುಣ್ಯ ಕೆಲಸವಾಗಿದೆ. ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕೆಂದರು.

ಈ ವೇಳೆ ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಫಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ನಾಗಭೂಷಣ, ಮಹ್ಮದ್‌ ಪ್ರೋಟ್‌, ಡಾ| ಜಲಾಲುದ್ದೀನ್‌, ಸಮೃದ್ಧಿ ಗೆಳೆಯರ ಬಳಗದ ಅಧ್ಯಕ್ಷ ಬಸವರಾಜ ಪಾಟೀಲ್‌, ಮಂಜುನಾಥ ವಕೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next