ತೆಲಸಂಗ: ರಂಗಭೂಮಿ ಉಳಿವಿಗೆ ಹವ್ಯಾಸಿ ರಂಗಭೂಮಿ ಕಲಾವಿದರ ಕೊಡುಗೆ ಅಪಾರವಿದ್ದು, ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದ ಅಧ್ಯಕ್ಷ ಡಾ| ಬಿ.ಎಸ್. ಕಾಮನ್ ಹೇಳಿದರು.
ಈ ವೇಳೆ ರಾವಸಾಬ ಬೆಳ್ಳುಂಡಗಿ, ರಮೇಶ ಮಾದರ, ಶೇಖರ ಕಾಮನ್, ಸಂತೋಷ ಅರುಟಗಿ, ದಾನಪ್ಪ ಸೊನ್ನದ, ದುಂಡಪ್ಪ ಸೊನ್ನದ, ಸೈಯ್ಯದ ಹೊನವಾಡ, ಅನಿಲ ರೂಗಿ, ಶಿವರಾಯ ರಾವೂರ ಇದ್ದರು.
Advertisement
ಶುಕ್ರವಾರ ಸಮೀಪದ ಬನ್ನೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಪ್ರದರ್ಶನಗೊಳ್ಳಲಿರುವ ‘ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ’ ಎಂಬ ನಾಟಕದ ಪ್ರಚಾರ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಬನ್ನೂರ ಗ್ರಾಮದ ಬಸವೇಶ್ವರ ನಾಟ್ಯಸಂಘದ ಹವ್ಯಾಸಿ ಕಲಾವಿದರು 28 ವರ್ಷದಿಂದ ರಂಗಭೂಮಿ ಸೇವೆ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮೇ. 4ರಂದು ರಾತ್ರಿ 10ಗಂಟೆಗೆ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರದ ಪಿಕೆಪಿಎಸ್ ಮೈದಾನದಲ್ಲಿ ಬಸುಕುಂಬಾರ ಹಂಪಿಹೊಳಿ ರಚಿಸಿದ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ ಎಂದರು.
ದುರ್ಗಾದೇವಿ ಜಾತ್ರೆ ಇಂದು
ತೆಲಸಂಗ: ಗ್ರಾಮದ ದುರ್ಗಾದೇವಿ ಜಾತ್ರೆ ಮೇ.4ರಂದು ಆಚರಿಸಲು ನಿರ್ಧರಿಸಲಾಗಿದ್ದು, ಸಾಮರಸ್ಯದ ಸಂದೇಶ ಸಾರುವ ಜಾತ್ರೆಗೆ ಭಕ್ತಾದಿಗಳು ಕೈಜೋಡಿಸುವ ಮೂಲಕ ಪರಸ್ಪರ ಬಾಂಧವ್ಯ ಬೆಸೆಯುವ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಗ್ರಾಪಂ ಸದಸ್ಯ ಸಿದ್ದಲಿಂಗ ಮಾದರ ಕರೆ ನೀಡಿದರು. ಜಾತ್ರೆಯ ನಿಮಿತ್ತ ಪ್ರಚಾರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 4ರಂದು ಬೆಳಗ್ಗೆ 6ಗಂಟೆಗೆ ರುದ್ರಾಭಿಷೇಕ, ಮಹಾಪೂಜೆ ನೆರವೇರುವುದು. ನಂತರ 10:30ಕ್ಕೆ ಪಲ್ಲಕ್ಕಿ ಉತ್ಸವ ನಡೆಯುವುದು. ಮಧ್ಯಾಹ್ನ 12:30ಕ್ಕೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರಗಲಿದೆ. ರಾತ್ರಿ 9:30ಕ್ಕೆ ಸುಪ್ರಸಿದ್ಧ ಕಲಾವಿದರಾದ ಭಂಟನೂರ ಗ್ರಾಮದ ಟಗುರ್ಕೆವ್ವ ಹಾಗೂ ಮುಗಳಖೋಡ ಗ್ರಾಮದ ಲಕ್ಕವ್ವ ಸಂಗಡಿಗರಿಂದ ಹರದೇಶಿ ನಾಗೇಶಿ ಚೌಡಕಿ ಪದಗಳ ಪ್ರದರ್ಶನ ನಡೆಯಲಿದೆ ಎಂದರು. ನ್ಯಾಯವಾದಿ ಅಮೋಘ ಖೊಬ್ರಿ, ನಿವೃತ್ತ ಸೈನಿಕ ಅಣ್ಣಪ್ಪ ಸಾವಳಗಿ, ಕಾಂಗ್ರೆಸ್ ಮುಖಂಡ ಅಣ್ಣು ಡೆಂಗಿ, ಮುರಗೆಪ್ಪ ಮಾದರ, ರಾಜು ಮಾದರ, ಹಣಮಂತ ಮಾದರ, ಭರಮಪ್ಪ ಮಾದರ ಇದ್ದರು.