Advertisement

“ಮಹಿಳೆಯರ ಮೂಲಕ ದೇಶದ ಸಶಕ್ತೀಕರಣ’

02:25 AM Apr 12, 2019 | Team Udayavani |

ಉಡುಪಿ: ಮೋದಿ ನೇತೃತ್ವದ ಸರಕಾರ ಮಹಿಳಾ ಸಶಕ್ತೀಕರಣದ ಬದಲು ಈಗ “ಮಹಿಳೆಯರ ಮೂಲಕ ದೇಶದ ಸಶಕ್ತೀಕರಣ’ದತ್ತ ಹೆಜ್ಜೆ ಇಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

Advertisement

ಮಣಿಪಾಲದಲ್ಲಿ ಗುರುವಾರ “ನನ್ನ ದೇಶ- ನನ್ನ ಪಾತ್ರ’ ವಿಷಯದಡಿ ಮಹಿಳೆಯರೊಂದಿಗೆ ಸಂವಾದ -ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಮಾಣಪತ್ರ, ಹೂಗುತ್ಛ ಕೊಡುವವರಿಗೆ ತಟ್ಟೆಯಲ್ಲಿ ತಂದು ಕೊಡುವುದಕ್ಕೆ ಮಹಿಳೆಯರಲ್ಲ, ಅವರಿಗೆ ಸಾಮರ್ಥ್ಯವಿದ್ದರೆ ನಾವು ಏಣಿ ಒದಗಿಸುತ್ತೇವೆ ಎನ್ನುವುದನ್ನು ಸರಕಾರ ಸಾಬೀತುಪಡಿಸಿದೆ ಎಂದರು.
ಇತ್ತೀಚೆಗೆ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿಯಲ್ಲಿ 9 ವಿಮಾನದಲ್ಲಿ ಒಂದನ್ನು ಚಲಾಯಿಸಿದವರು ಮಹಿಳೆ, ಭಾರತದ ನೆಲದಲ್ಲಿದ್ದು ವಿಮಾನಗಳನ್ನು ನಿಯಂತ್ರಿಸಿದವರು ಮಹಿಳೆ. ಇವರನ್ನು ಗೌರವಿಸಲಾಗುತ್ತಿದೆ. ಮುದ್ರಾ ಯೋಜನೆ ಫ‌ಲಾನುಭವಿಗಳು ಶೇ.73 ಮಹಿಳೆಯರು ಎಂದರು.

ಆಡಿದ ಮಾತಿನಂತೆ ನಡೆದುಕೊಂಡಿ ರುವುದಕ್ಕೆ ಮೋದಿಗೆ ಜನರು ಬೆಲೆ ಕೊಡುತ್ತಿದ್ದಾರೆ. ಜನಶಕ್ತಿ ಇದ್ದರೆ ಮಾತ್ರ ಸಾಕಾಗದು, ನಾವು ಜನರ ಸಹಭಾಗಿತ್ವದಲ್ಲಿ ನಂಬಿಕೆ ಇಟ್ಟ ವರು. ಇದರಿಂದಾಗಿಯೇ ಇಂದು ಕೋಟ್ಯಂತರ ಜನ ಗ್ಯಾಸ್‌ ಸಿಲಿಂಡರ್‌ ಸಬ್ಸಿಡಿ ತ್ಯಾಗ ಮಾಡಿದರು ಎಂದರು.

ಮತ ಹಾಕಿ ಬಂದರೆ ತಿಂಡಿ ಕೊಡು ತ್ತೇವೆಂದು ಬೆಂಗಳೂರಿನ ನಿಸರ್ಗ ಹೊಟೇಲ್‌ನವರು ಹೇಳಿದ್ದಾರೆ. ಮತ ಹಾಕಿದ ಚಿಹ್ನೆ ತೋರಿಸಿದರೆ ಮಾತ್ರ ಹೊಟೇಲ್‌ ರೂಮು ಕಾಯ್ದಿರಿಸಲು ಹೊಟೇಲ್‌ ಮಾಲಕರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಕೊಡಗಿನ ರೆಸಾರ್ಟ್‌ನಲ್ಲಿ ಬುಕ್ಕಿಂಗ್‌ ಈ ತೆರನಾಗಿ ಮಾಡುತ್ತಿದ್ದಾರೆ. ಮತದಾನ ಮಾಡುವುದಾದರೆ ಉಚಿತವಾಗಿ ಕೊಂಡೊಯ್ಯುವುದಾಗಿ ಅನೇಕ ರಿಕ್ಷಾ ಚಾಲಕರು ಘೋಷಿಸಿದ್ದಾರೆ. ಬಿಜೆಪಿ ಯಲ್ಲದವರೂ ಸಾವಿರಾರು ಜನರು ಬಿಜೆಪಿಗೆ ಕೆಲಸ ಮಾಡಲು ಬರುತ್ತಿದ್ದಾರೆ. ಮೋದಿ ಮಾತಿನ ಮೂಲಕ ಹೇಳದೆ, ಬದುಕಿನ, ಬದ್ಧತೆ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.

ದೀನದಯಾಳ ಉಪಾಧ್ಯಾಯರು ಅಂತ್ಯೋದಯ ಕಲ್ಪನೆ ಕೊಟ್ಟಿ ದ್ದರು. ಇದರ ಪ್ರಕಾರ ಕಟ್ಟ ಕಡೆಯ ಜನರ ಮುಖದಲ್ಲಿ ಮಂದಹಾಸ ಮೂಡಿಸುವುದು ಸರಕಾರದ ಕೆಲಸ. ಈ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next