Advertisement

ಮೌಲ್ಯವರ್ಧಿತ ಶಿಕ್ಷಣದಿಂದ ಉದ್ಯೋಗವಕಾಶ

02:21 PM Jun 22, 2018 | Team Udayavani |

ಕಲಬುರಗಿ: ಫಲಿತಾಂಶ ಆಧಾರಿತ ಮತ್ತು ಮೌಲ್ಯವರ್ಧಿತ ಶಿಕ್ಷಣದಿಂದ ಮಾತ್ರ ಉದ್ಯೋಗಾವಕಾಶ ಸಾಧ್ಯ ಎಂದು ತೂಮಕೂರಿನ ಸಿದ್ಧಗಂಗಾ ಇನಸ್ಟೀಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ
ಮುಖ್ಯಸ್ಥ ಡಾ| ಎಸ್‌.ವ್ಹಿ. ದಿನೇಶ ಹೇಳಿದರು.

Advertisement

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಅಟೋಮೋಬಾಯಿಲ್‌ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿ ಕುರಿತ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಮೌಲ್ಯವರ್ಧಿತ ಶಿಕ್ಷಣ ಹೊಂದಿದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಸಮಸ್ಯೆ ನಿವಾರಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಕಾರ್ಯದರ್ಶಿ ಡಾ| ನಾಗೇಂದ್ರ ಎಸ್‌. ಮಂಠಾಳೆ ಜಂಟಿಯಾಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅಧ್ಯಕ್ಷ ಡಾ| ಬಿಲಗುಂದಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಮ್ಮ ಸಂಸ್ಥೆ ಶ್ರಮಹಿಸುವುದು. ಅದಕ್ಕೆ ಬೇಕಾಗುವ ಅನೂಕೂಲತೆಗಳನ್ನು ಕಲ್ಪಿಸಲಾಗುವದು ಎಂದು ಹೇಳಿದರು. 

ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ಉತ್ತರಪ್ರದೇಶದ ಬುಂದಲಖಂಡ್‌ ಇಸ್ಟೀಟೂಟ್‌ ಆಫ್‌ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಕಾಲೇಜಿನ ನಾಲ್ವರು ಪ್ರಾಧ್ಯಾಪಕರು, ಮಹಾವಿದ್ಯಾಲಯದ 100 ಜನ ಶಿಕ್ಷಕರು ಹಾಗೂ ಪಕ್ಕದ ರಾಜ್ಯಗಳ ಶಿಕ್ಷಕರು ಭಾಗವಹಿಸಿದ್ದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್‌.ಎಸ್‌. ಅವಂತಿ, ವಿಭಾಗದ ಪ್ರೊ| ಉದಯ ಬಳಗಾರ, ಪ್ರೊ|
ಚಂದ್ರಕಾಂತ ಬೀರಾದಾರ, ಪ್ರೊ| ಮುಕುಂದ ಹರವಾಳಕರ, ನಿತಿನ್‌ ಕಟ್ಟಿಶೆಟ್ಟರ, ಸುಮಾ, ಮಲ್ಲಿಕಾರ್ಜುನ ರೆಡ್ಡಿ,
ಅಂಬಾರಾಯ ಸಿ, ಗಂಗಾಧರಕ, ಗೀತಾ ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.

Advertisement

ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಹರಸೂರ ಸ್ವಾಗತಿಸಿದರು. ಇಂಡಸ್ಟ್ರೀಯಲ್‌ ಮತ್ತು ಪ್ರೋಡಕ್ಷನ್‌ ವಿಭಾಗದ ಪ್ರಾಧ್ಯಾಪಕ ಡಾ| ಎಸ್‌.ಎಸ್‌. ಹೆಬ್ಟಾಳ ಪ್ರಾಸ್ತಾವಿಕ ಮಾತನಾಡಿದರು. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡಾ| ವಿಶ್ವನಾಥ ಬುರಕಪಳ್ಳಿ ಪರಿಚಯಿಸಿದರು. ಅಶೋಕ ಪಾಟೀಲ ವಂದಿಸಿದರು.

ನಾನು ಎಚ್‌ಕೆಇ ಸಂಸ್ಥೆ ಅಧ್ಯಕ್ಷನಾದ ಮೇಲೆ ಪಾರದರ್ಶಕ ಆಡಳಿತ ಹಾಗೂ ಸಂಸ್ಥೆ ಏಳ್ಗೆ ಸಲುವಾಗಿ ಒತ್ತು ನೀಡಿರುವುದು ಎಲ್ಲರ ಗಮನಕ್ಕೆ ಬಂದಿದೆ. ಎಲ್ಲ ಕಾರ್ಯವನ್ನು ಚೆಕ್‌ ಮೂಲಕ ನಿರ್ವಹಿಸಲಾಗುತ್ತಿದೆ. ಸಂಸ್ಥೆಯ ಒಬ್ಬ ಸದಸ್ಯನೂ ಮನೆಗೆ ಬಾರದೇ ಎಲ್ಲ ಕೆಲಸವನ್ನು ಸಂಸ್ಥೆಯ ಆಡಳಿತ ಕಚೇರಿಯಲ್ಲಿಯೇ ನಿಭಾಯಿಸಲಾಗುತ್ತಿದೆ. ಇದೇ ರೀತಿಯ ಕಾರ್ಯ ಮುಂದುವರಿಕೆ ಜತೆಗೆ ಸಂಸ್ಥೆಯ ಆರ್ಥಿಕ ಸಬಲತೆ ಕಡೆಗೆ ಲಕ್ಷ್ಯ ವಹಿಸಲಾಗುವುದು.
ಡಾ| ಭೀಮಾಶಂಕರ ಬಿಲಗುಂದಿ, ಅಧ್ಯಕ್ಷರು, ಎಚ್‌ಕೆಇ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next