ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಒಟ್ಟು 63 ಸ್ಥಾನಕ್ಕೆ ಗುರುವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವೆರಗೂ ಚುನಾವಣೆ ಶಾಂತಿಯುತವಾಗಿ ನಡೆದು ಫಲಿತಾಂಶ ಹೊರಬಿದ್ದಿದೆ.
ನಗರದ ಗುಂಚಿವೃತ್ತದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ಆಯಾ ತಾಲೂಕು ಕೇಂದ್ರಗಳಲ್ಲೂ ಚುನಾವಣೆ ಶಾಂತಿ ಯುತವಾಗಿ ನಡೆಯಿತು.
ಪ್ರಾಥಮಿಕ ಶಿಕ್ಷಕರ ವಿಭಾಗಕ್ಕೆ ಸಂಬಂಧಿಸಿದ 4 ಸ್ಥಾನಕ್ಕೆ 12, ಯುವಜನ ಸೇವೆ ಮತ್ತು ಸಾರ್ವ ಜನಿಕ ಗ್ರಂಥಾಲಯ ಇಲಾಖೆಯ 1 ಸ್ಥಾನಕ್ಕೆ 2 ಮಂದಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 3 ಸ್ಥಾನಕ್ಕೆ 5, ಪ್ರೌಢ ಶಾಲಾ ಶಿಕ್ಷಕರ ವಿಭಾಗಕ್ಕೆ ಸಂಬಂಧಿಸಿದ 2 ಸ್ಥಾನಕ್ಕೆ 6, ವಾಣಿಜ್ಯ ಮತ್ತು ತೆರಿಗೆ ಇಲಾಖೆಯ 2 ಸ್ಥಾನಕ್ಕೆ 5 ಮಂದಿ, ಕಂದಾಯ ಇಲಾಖೆಯ 3 ಸ್ಥಾನಕ್ಕೆ 4 ಮಂದಿ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಎಂಜಿನಿ ಯರಿಂಗ್ ಇಲಾಖೆಯ 2 ಸ್ಥಾನಕ್ಕೆ 3 ಮಂದಿ ಸ್ಪರ್ಧಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ 1 ಸ್ಥಾನಕ್ಕೆ 2, ಸರಕಾರಿ ಕಿರಿಯ ಕಾಲೇಜು ವಿಭಾಗಕ್ಕೆ ನಿಗದಿ ಯಾದ 1 ಸ್ಥಾನಕ್ಕೆ 2 ಮಂದಿ, ಅಬಕಾರಿ ಇಲಾಖೆ 1 ಸ್ಥಾನಕ್ಕೆ 2 ಮಂದಿ, ಭೂಮಾಪನಾ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆಯ ವಿಭಾಗಕ್ಕೆ ನಿಗದಿಯಾದ 1 ಸ್ಥಾನಕ್ಕೆ 4 ಮಂದಿ, ರೇಷ್ಮೆ ಇಲಾಖೆ ವಿಭಾಗಕ್ಕೆ ನಿಗದಿಯಾದ 1 ಸ್ಥಾನಕ್ಕೆ 2 ಮಂದಿ, ನ್ಯಾಯಾಂಗ ಇಲಾಖೆಗೆ ನಿಗದಿಯಾದ 2 ಸ್ಥಾನಕ್ಕೆ 5 ಮಂದಿ, ಡಿಡಿಪಿಐ, ಬಿಇಒ ಕಚೇರಿ, ಡಯಟ್, ಎಸ್‌ಎಸ್‌ಎ ಹಾಗೂ ಆರ್.ಎಂ.ಎಸ್.ಎ ಯೋಜನೆಯಡಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಗೆ ನಿಗದಿಯಾದ 1 ಸ್ಥಾನಕ್ಕೆ 3 ಮಂದಿ ಕಣದಲ್ಲಿದ್ದರು.