Advertisement

ನೌಕರರ ವೇತನ ಹೆಚ ಸಿಬ್ಬಂದಿ ನೇಮಕಕ್ಕೆ ಆಗ್ರಹ ಹೆಚ್ಚಳಕ್ಕೆ ಒತ್ತಾಯ

02:48 PM Oct 04, 2018 | |

ಕೋಲಾರ: ರಾಜ್ಯದ ಅಕ್ಷರ ದಾಸೋಹ (ಬಿಸಿಯೂಟ) ನೌಕರರನ್ನು ಖಾಯಂ ಮಾಡಬೇಕು. ಅಲ್ಲಿಯತನಕ ಯಾವುದೇ ಅಡುಗೆ ನೌಕರರನ್ನು ಕೆಲಸದಿಂದ ತೆಗೆಯದ ರೀತಿ ಆದೇಶ ಹೊರಡಿಸಬೇಕು ಹಾಗೂ ನೌಕರರಿಗೆ ಕನಿಷ್ಠ ವೇತನ 10,500 ರೂ. ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಪ್ರಜಾಸೇವಾ ಸಮಿತಿ ಸಂಯೋಜಿತ ಮುಖಂಡ ಕಲ್ವ ಮಂಜಲಿ ಸಿ.ಶಿವಣ್ಣ, ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆ ಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅಕ್ಷರ ದಾಸೋಹ ನೌಕರರನ್ನು ಖಾಯಂ ಮಾಡುವುದಾಗಿ ಹಾಗೂ ಕನಿಷ್ಠ ವೇತನ 10,500 ರೂ. ನೀಡುವುದಾಗಿ ತಿಳಿಸಿದ್ದರು. 

ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದು 4 ತಿಂಗಳು ಕಳೆದರೂ ಇದುವರಿಗೂ ಅಕ್ಷರ ದಾಸೋಹ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಲಿ, ಅವರ ಕಷ್ಟಗಳನ್ನು ನೀಗಿಸುವುದಾಗಲಿ ಮಾಡದಿರುವುದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆ ಮುಚ್ಚಬೇಡಿ: ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ನೌಕರರ ಮಕ್ಕಳನ್ನು ಓದಿಸುವ ಕಾನೂನನ್ನು ರೂಪಿಸಬೇಕು. ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಇಲ್ಲವೆಂಬ ಕಾರಣಕ್ಕೆ ಯಾವುದೇ ಕಾರಣಕ್ಕೂ ಯಾವುದೇ ಅಡುಗೆಯವರನ್ನು ಕೆಲಸದಿಂದ ತೆಗೆಯುವುದಾಗಲಿ, ಸರ್ಕಾರಿ ಶಾಲೆ ಮುಚ್ಚು ವುದಾಗಲಿ ಮಾಡಬಾರದೆಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಯನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ ಮಾಧ್ಯಮ ದಲ್ಲಿ ತೆರೆಯಬೇಕು. ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರೂ ಸರ್ಕಾರಿ ಶಾಲೆ ಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಶಾಲೆಗಳಲ್ಲಿ ಎಸ್‌ಡಿಯುಎಂಸಿ ಶಿಕ್ಷಕರಿಂದ ಗ್ರಾಮ ಪಂಚಾಯಿತಿ ಕೆಲವು ಸದಸ್ಯರಿಂದ ಬಿಸಿಯೂಟ ನೌಕರರ ಮೇಲೆ ಆಗುತ್ತಿರುವ
ದೌರ್ಜನ್ಯವನ್ನು ತಡೆಯಬೇಕು. ಅಂತಹವರ ವಿರುದ್ಧ ಕಾನೂನಿ ರೀತಿ ಕ್ರಮ ಕೈಗೊಳ್ಳಬೇಕು. 

Advertisement

ಅಡುಗೆ ನೌಕರರ ಬೇಡಿಕೆ ಈಡೇರಿಸಿ: ಬಿಸಿಯೂಟ ನೌಕರರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಸರ್ಕಾರ ಪ್ರತ್ಯೇಕ ಅನುದಾನವನ್ನು ನೀಡಬೇಕು. ಸರ್ಕಾರವೇ ಉನ್ನತ ವ್ಯಾಸಂಗದ ಮಕ್ಕಳ ಖರ್ಚು ವೆಚ್ಚಗಳನ್ನು ಭರಿಸಬೇಕು.
ಈಗಲಾದರೂ ತಮ್ಮ ಸರ್ಕಾರದ ಅವಧಿಯಲ್ಲಿ ಅಡುಗೆ ನೌಕರರ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಜಿಪಂ ಸಿಇಒ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಕ್ಷೇಮಾಭಿ ವೃದ್ಧಿ ಸಮಿತಿ ಜಿಲ್ಲಾ ಅಧ್ಯಕ್ಷ ವಕ್ಕಲೇರಿ ನಾಗಮಣಿ, ಕೋಲಾರ ತಾಲೂಕು ಅಧ್ಯಕ್ಷೆ ಮಮತಾ, ಮಾಲೂರು ತಾಲೂಕು ಅಧ್ಯಕ್ಷೆ ಜ್ಯೋತಿ, ಮುಳಬಾಗಿಲು ಲಕ್ಷ್ಮೀ, ಜಯಮಂಗಲ ವನಿತಾ ಮತ್ತು ಲಕ್ಕೂರು ಮುನಿರತ್ನಾ, ಸುಗಟೂರು ಶೋಭಾ, ಕವಿತಾ,
ಮುಳಬಾಗಿಲು ಚಂದ್ರಮ್ಮ, ಲಕ್ಷ್ಮೀದೇವಿ, ರಾಧಮ್ಮ, ರತ್ನಮ್ಮ, ಸರಸ್ವತಮ್ಮ, ಚಲ್ದಿಗಾನಹಳ್ಳಿ ಕಾಂತಮ್ಮ, ಗಾಯಿತ್ರಿ, ವಸಂತಮ್ಮ, ಉಷಾರಾಣಿ, ಅಸಾಂಡಹಳ್ಳಿ ರತ್ನಮ್ಮ, ಸುಶೀಲಮ್ಮ, ಪುಷ್ಪಾವತಿ, ರಾಜಮ್ಮ, ನೇತ್ರವತಿ, ದಾಕ್ಷಾಯಣಿ, ಪುಷ್ಪಾ, ಸುಶೀಲಮ್ಮ, ಮಂಜುಳಾ, ನೀಲಮ್ಮ, ದೇವೀರಮ್ಮ, ಎಸ್‌.ಕೆ. ಶೋಭಾ, ಭಾಗ್ಯಮ್ಮ, ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಲ್ವಮಂಜಲಿ
ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಮಾಗೊಂದಿ ಚಂದ್ರಣ್ಣ ಮುಂತಾದವರು ಭಾಗವಹಿಸಿದ್ದರು.

ಅಕ್ಷರ ದಾಸೋಹದ ಅಡುಗೆ ನೌಕರರು 2,700ರೂ.ಗೆ ಜೀವನ ನಡೆಸಲು, ಮಕ್ಕಳನ್ನು ಓದಿಸಲು ಆಗದೆ ತೊಂದೆಗೆ ಸಿಲುಕಿದ್ದಾರೆ. ಅವರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು.
 ಕಲ್ವಮಂಜಲಿ ಸಿ.ಶಿವಣ್ಣ, ಪ್ರಜಾಸೇವಾ ಸಮಿತಿ ಸಂಯೋಜಿತ ಮುಖಂಡ 

Advertisement

Udayavani is now on Telegram. Click here to join our channel and stay updated with the latest news.

Next